ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದ್ಯಾರ್ಥಿಗಳೇ ಬಿಎಂಟಿಸಿ ಬಸ್‌ಪಾಸ್ ಬೇಕಿದ್ದರೆ ಶಾಂತಿನಗರಕ್ಕೆ ಹೋಗಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 5: ಬಿಎಂಟಿಸಿ ವಿದ್ಯಾರ್ಥಿಗಳ ಬಸ್‌ಪಾಸ್ ವಿತರಣೆಗೆ ಸರ್ಕಾರ ಸಾಕಷ್ಟು ವಿಳಂಬ ಮಾಡಿತ್ತು, ಸ್ಮಾರ್ಟ್ ಕಾರ್ಡ್ ಮಾದರಿಯ ಬಸ್‌ಪಾಸ್ ವಿತರಣೆಗೆ ಇದೀಗ ಕಾಲ ಕೂಡಿಬಂದಿದೆ.

ಐವತ್ತಲ್ಲ, ನೂರಲ್ಲ ಬರೋಬ್ಬರಿ ಸಾವಿರ ಬಿಎಂಟಿಸಿ ಬಸ್‌ಗಳು ಗುಜರಿಗೆ ಐವತ್ತಲ್ಲ, ನೂರಲ್ಲ ಬರೋಬ್ಬರಿ ಸಾವಿರ ಬಿಎಂಟಿಸಿ ಬಸ್‌ಗಳು ಗುಜರಿಗೆ

ಇಂದು(ಡಿಸೆಂಬರ್ 5)ರಿಂದಲೇ ಬಸ್‌ಪಾಸ್ ವಿತರಣೆ ಆರಂಭವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬಿಎಂಟಿಸಿ ಇದೇ ಮೊದಲ ಬಾರಿಗೆ ಸ್ಮಾರ್ಟ್ ಕಾರ್ಡ್ ಮಾದರಿಯ ರಿಯಾಯಿತಿ ದರದ ವಿದ್ಯಾರ್ಥಿ ಬಸ್‌ಪಾಸ್‌ ಪರಿಚಯಿಸಿತ್ತು. ವಿದ್ಯಾರ್ಥಿಗಳು ಪಾಸ್‌ಗಾಗಿ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು.

ಆಗಸ್ಟ್‌ ಅಂತ್ಯದೊಳಗೆ ವಿದ್ಯಾರ್ಥಿಗಳ ಕೈಗೆ ಬಿಎಂಟಿಸಿ ಸ್ಮಾರ್ಟ್‌ ಪಾಸ್‌ ಆಗಸ್ಟ್‌ ಅಂತ್ಯದೊಳಗೆ ವಿದ್ಯಾರ್ಥಿಗಳ ಕೈಗೆ ಬಿಎಂಟಿಸಿ ಸ್ಮಾರ್ಟ್‌ ಪಾಸ್‌

ಅಂಚೆ ಮೂಲಕ ಹಾಗೂ ಕೆಂಪೇಗೌಡ ಬಸ್‌ ನಿಲ್ದಾಣ ಮತ್ತು ಶಾಂತಿನಗರದಲ್ಲಿ ಪಾಸ್ ವಿತರಣೆಗೆ ಕೌಂಟರ್ ತೆರೆಯಲಾಗಿತ್ತು. ಇದೀಗ ಇದುವರೆಗೂ ಪಾಸ್ ಪಡೆಯದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಂತಿದ ಟಿಟಿಎಂಪಿಯಲ್ಲಿ ಮಾತ್ರ ಬಸ್‌ಪಾಸ್ ವಿತರಣೆ ಕ್ರಮ ಕೈಗೊಳ್ಳಲಾಗಿದೆ.

ಮೊಬೈಲ್‌ನಲ್ಲಿ ವಿದ್ಯಾರ್ಥಿ ಬಿಎಂಟಿಸಿ ಬಸ್‌ಪಾಸ್‌ ಪಡೆಯಲು ಹೀಗೆ ಮಾಡಿ ಮೊಬೈಲ್‌ನಲ್ಲಿ ವಿದ್ಯಾರ್ಥಿ ಬಿಎಂಟಿಸಿ ಬಸ್‌ಪಾಸ್‌ ಪಡೆಯಲು ಹೀಗೆ ಮಾಡಿ

Smart card bus pass for students will distribute from Today

ಬಸ್‌ಪಾಸ್ ಪಡೆಯಲು ಆನ್‌ಲೈನ್ ವ್ಯವಸ್ಥೆಯನ್ನು ಆರಂಭಿಸಿದರೂ ಕೂಡ ಎರಡು ತಿಂಗಳುಗಳ ಕಾಲ ವಿದ್ಯಾರ್ಥಿಗಳು ರಶೀದಿಯನ್ನೇ ಹಿಡಿದುಕೊಂಡು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು.

English summary
BMTC will distribute students bus pass in form of smart card from December 5 at TTMC in Shantinagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X