ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾವೇ ಸಿಹಿಸುದ್ದಿ ಕೊಡ್ತೇವೆಂದು ಖರ್ಗೆಗೆ ಟಾಂಗ್ ಕೊಟ್ಟ ಎಸ್.ಎಂ.ಕೃಷ್ಣ

|
Google Oneindia Kannada News

ಬೆಂಗಳೂರು, ಡಿಸೆಂಬರ್ 03: ಸಿಹಿಸುದ್ದಿ ಕೊಡೋದು ಮಲ್ಲಿಕಾರ್ಜುನ ಖರ್ಗೆ ಅಲ್ಲ, ಡಿಸೆಂಬರ್ 09 ಕ್ಕೆ ಬಿಜೆಪಿಯಿಂದನೇ ಸಿಹಿಸುದ್ದಿ ಲಭಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ,ಕೃಷ್ಣ ಟಾಂಗ್ ನೀಡಿದ್ದಾರೆ.

ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ ಅವರು, ರಾಜ್ಯದಲ್ಲಿದ್ದ ಮೈತ್ರಿ ಸರ್ಕಾರವನ್ನು ಕಿತ್ತು ಹಾಕಲಾಗಿದೆ. ಬಿಜೆಪಿ ಶಾಸಕರನ್ನು ಗೆಲ್ಲಿಸುವ ಮೂಲಕ ಸಿಹಿ ಸುದ್ದಿ ನೀಡೋಣವೆಂದರು.

ಸಮ್ಮಿಶ್ರ ಸರ್ಕಾರ ಬೀಳಿಸುವುದರಲ್ಲಿ ನನ್ನ ಸಣ್ಣ ಪಾತ್ರ ಇತ್ತು: ಎಸ್‌ಎಂ ಕೃಷ್ಣಸಮ್ಮಿಶ್ರ ಸರ್ಕಾರ ಬೀಳಿಸುವುದರಲ್ಲಿ ನನ್ನ ಸಣ್ಣ ಪಾತ್ರ ಇತ್ತು: ಎಸ್‌ಎಂ ಕೃಷ್ಣ

ಈ ಹಿಂದೆ ಕಾಂಗ್ರೆಸ್ ಶಾಸಕರು ತಮ್ಮನ್ನು ಭೇಟಿಯಾದಗಲೆಲ್ಲ ಗೊತ್ತು ಗುರಿ ಇಲ್ಲದ ಮೈತ್ರಿ ಸರ್ಕಾರ ಕಿತ್ತು ಹಾಕಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತನ್ನಿ ಎಂದು ನಾನೇ ಹೇಳುತ್ತಿದ್ದೆ. ಅವರು ನನ್ನ ಮಾತಿಗೆ ಬೆಲೆ ಕೊಟ್ಟು ರಾಜೀನಾಮೆ ನೀಡಿದ್ದಾರೆ. ನನಗೆ ಈಗ ಖುಷಿಯಾಗಿದೆ ಎಂದು ಹೇಳಿದರು.

ಬಿಜೆಪಿಯಿಂದಲೇ ಸಿಹಿಸುದ್ದಿ ಕೊಡೋಣ

ಬಿಜೆಪಿಯಿಂದಲೇ ಸಿಹಿಸುದ್ದಿ ಕೊಡೋಣ

ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ ಅವರು, ರಾಜ್ಯದಲ್ಲಿದ್ದ ಮೈತ್ರಿ ಸರ್ಕಾರವನ್ನು ಕಿತ್ತು ಹಾಕಲಾಗಿದೆ. ಬಿಜೆಪಿ ಶಾಸಕರನ್ನು ಗೆಲ್ಲಿಸುವ ಮೂಲಕ ಸಿಹಿ ಸುದ್ದಿ ನೀಡೋಣವೆಂದರು.

ಈ ಹಿಂದೆ ಕಾಂಗ್ರೆಸ್ ಶಾಸಕರು ತಮ್ಮನ್ನು ಭೇಟಿಯಾದಗಲೆಲ್ಲ ಗೊತ್ತು ಗುರಿ ಇಲ್ಲದ ಮೈತ್ರಿ ಸರ್ಕಾರ ಕಿತ್ತು ಹಾಕಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತನ್ನಿ ಎಂದು ನಾನೇ ಹೇಳುತ್ತಿದ್ದೆ. ಅವರು ನನ್ನ ಮಾತಿಗೆ ಬೆಲೆ ಕೊಟ್ಟು ರಾಜೀನಾಮೆ ನೀಡಿದ್ದಾರೆ. ನನಗೆ ಈಗ ಖುಷಿಯಾಗಿದೆ ಎಂದು ಹೇಳಿದರು.

ತರಾತುರಿಯಲ್ಲಿ ಮೈತ್ರಿ ಸರ್ಕಾರ ರಚನೆಯಾಗಿತ್ತು

ತರಾತುರಿಯಲ್ಲಿ ಮೈತ್ರಿ ಸರ್ಕಾರ ರಚನೆಯಾಗಿತ್ತು

ಈ ಉಪ ಚುನಾವಣೆ ಬರಲು ಕಾರಣ ಏನೆನ್ನುವುದು ಎಲ್ಲರಿಗೂ ಗೊತ್ತು, 14 ತಿಂಗಳುಗಳ ಸಮ್ಮಿಶ್ರ ಸರ್ಕಾರದಲ್ಲಿ ಯಾವ ಅಭಿವೃದ್ದಿ ಕೆಲಸಗಳು ನಡೆಯಲಿಲ್ಲ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಫಲಿತಾಂಶ ಬಂದ ಅವಸರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿಕೊಂಡಿದ್ದವು.

14 ತಿಂಗಳುಗಳ ಆಡಳಿತದಲ್ಲಿ ಕೆಲಸ ಮಾಡದೇ ಬರೀ ಅಧಿಕಾರವನ್ನು ಉಳಿಸಿಕೊಳ್ಳುವುದರಲ್ಲೇ ಸಮಯ ಕಳೆದರು. ಅನೇಕ ಶಾಸಕರಿಗೆ ಮೈತ್ರಿ ಸರ್ಕಾರದ ಬಗ್ಗೆ ಅಸಮಾಧಾನ ಇತ್ತು. ಮೈತ್ರಿ ಸರ್ಕಾರಕ್ಕೆ ಯಾವುದೇ ಸ್ಪಷ್ಟ ಉದ್ದೇಶಗಳಿರಲಿಲ್ಲ.

ಅಧಿಕಾರಕ್ಕಾಗಿ ಕಚ್ಚಾಡಿದರು

ಅಧಿಕಾರಕ್ಕಾಗಿ ಕಚ್ಚಾಡಿದರು

ಕೇವಲ ಅಧಿಕಾರದಿಂದ ಬಿಜೆಪಿಯನ್ನು ದೂರವಿಡಲು ಕಾಂಗ್ರೆಸ್ ಮತ್ತು ಜೆಡಿಎಸ್ ಎಂಬ ದುಷ್ಟ ಕೂಟ ರಚಿಸಿಕೊಂಡಿದ್ದರು. ಅದರಲ್ಲಿ ಬರೀ ಕಚ್ಚಾಟವೇ ಹೆಚ್ಚಾಗಿತ್ತು ಎಂದು ವಾಗ್ದಾಳಿ ನಡೆಸಿದರು.

ಗೊತ್ತುಗುರಿಯಿಲ್ಲದ ಸರ್ಕಾರದ ಮೇಲೆ ಜನರು ನಿರಾಶೆಗೊಂಡಿದ್ದರು, ಸರ್ಕಾರ ರಚಿಸಿದ ಮೇಲೂ ಅವರು ಜನರ ಕಷ್ಟಗಳಿಗೆ ಸ್ಪಂದಿಸಲಿಲ್ಲ. ಹೀಗಾಗಿ 17 ಜನ ಶಾಸಕರು ರಾಜೀನಾಮೆ ನೀಡಬಾಕಾಯಿತು ಎಂದು ಹರಿಹಾಯ್ದರು.

ಶಾಸಕರ ರಾಜೀನಾಮೆ ಕೊಡಿಸಿದವರಲ್ಲಿ ನಾನೂ ಒಬ್ಬ: ಎಸ್‌.ಎಂ.ಕೃಷ್ಣಶಾಸಕರ ರಾಜೀನಾಮೆ ಕೊಡಿಸಿದವರಲ್ಲಿ ನಾನೂ ಒಬ್ಬ: ಎಸ್‌.ಎಂ.ಕೃಷ್ಣ

ಅನರ್ಹರ ತ್ಯಾಗದಿಂದ ಬಿಜೆಪಿ ಅಧಿಕಾರಕ್ಕೆ

ಅನರ್ಹರ ತ್ಯಾಗದಿಂದ ಬಿಜೆಪಿ ಅಧಿಕಾರಕ್ಕೆ

ಜನರ ಮನಸ್ಸಿನಲ್ಲಿ ಕುದಿಯುತ್ತಿದ್ದ ನಿರಾಶೆಯ ಭಾವನೆಗಳಿಗೆ 17 ಜನ ಶಾಸಕರು ಸ್ಪಂದಿಸಿದರು. ಯಾವ ಕಾರಣಗಳೂ ಇಲ್ಲದೇ ಅವರನ್ನು ಅನರ್ಹಗೊಳಿಸಿದರು. ಅದಕ್ಕೇ ಈ ಉಪ ಚುನಾವಣೆಯನ್ನು ರಾಜ್ಯದ ಜನ ಎದುರಿಸುವಂತಾಗಿದೆ ಎಂದರು.

ಯಶವಂತಪುರ ಶಾಸಕ ಸೋಮಶೇಖರ್ ಸೇರಿದಂತೆ ಇನ್ನುಳಿದ 16 ಜನ ಶಾಸಕರ ತ್ಯಾಗದಿಂದ ಇಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ಅವರ ಅಧಿಕಾರ ಉಳಿಯಲು ನೀವೆಲ್ಲಾ ಬಿಜೆಪಿಗೆ ಮತ ನೀಡಬೇಕೆಂದು ಕೇಳಿಕೊಂಡರು.

ಅಭಿವೃದ್ದಿಗೆ ಬಿಜೆಪಿ ಬೆಂಬಲಿಸಿ

ಅಭಿವೃದ್ದಿಗೆ ಬಿಜೆಪಿ ಬೆಂಬಲಿಸಿ

ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಗೊಂದಲದಲ್ಲಿವೆ, ಯಾರು ಎ ಟೀಂಮ್..? ಯಾರು ಬಿ ಟೀಮ್..? ಎಂದು ಜನರಿಗೆ ತಿಳಿಯುತ್ತಿಲ್ಲ. ಸಿದ್ದರಾಮಯ್ಯ ಒಂದು ದಿಕ್ಕು, ಕುಮಾರಸ್ವಾಮಿ ಒಂದು ದಿಕ್ಕು ಆಗಿದ್ದಾರೆ. ಅವರಿಂದ ಮತ್ತೆ ರಾಜ್ಯದಲ್ಲಿ ಮೈತ್ರಿ ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಸ್ಥಿರ ಸರ್ಕಾರ ಇರಬೇಕೆಂದರೆ, ರಾಜ್ಯ ಅಭಿವೃದ್ದಿಯಾಗಬೇಕೆಂದರೆ ನೀವು ಬಿಜೆಪಿಗೆ ಬೆಂಬಲ ನೀಡಬೇಕೆಂದರು. ಯಶವಂತಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಎಸ್.ಟಿ.ಸೋಮಶೇಖರ್, ಕಾಂಗ್ರೆಸ್ ನಿಂದ ಪಾಳ್ಯ ನಾಗರಾಜ್ ಮತ್ತು ಜೆಡಿಎಸ್ ನಿಂದ ಜವರಾಯಿಗೌಡ ಉಪ ಚುನಾವಣಾ ಆಖಾಡದಲ್ಲಿದ್ದಾರೆ. ಡಿಸೆಂಬರ್ 05 ಕ್ಕೆ ಮತದಾನ, ಡಿಸೆಂಬರ್ 09 ಕ್ಕೆ ಫಲಿತಾಂಶ ಪ್ರಕಟವಾಗಲಿದೆ

English summary
Former Chief Minister SM Krishna Tong Said That The BJP Would Get The Sweet Spot From The BJP On December 09, Not The Cost Of Mallikarjuna Kharge.Let Us Give You The Good News By Winning The BJP MLAs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X