ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ಧಾರ್ಥ ನಾಪತ್ತೆ: ಎಸ್‌.ಎಂ.ಕೃಷ್ಣ ಮನೆಗೆ ಗಣ್ಯರ ಭೇಟಿ

|
Google Oneindia Kannada News

ಬೆಂಗಳೂರು, ಜುಲೈ 30: ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ಹಠಾತ್ ನಾಪತ್ತೆ ಆಗಿದ್ದು. ವಿಷಯ ತಿಳಿಯುತ್ತಿದ್ದಂತೆ ಕೃಷ್ಣ ಅವರ ನಿವಾಸಕ್ಕೆ ರಾಜಕಾರಣಿಗಳ ದಂಡೇ ಆಗಮಿಸಿದೆ.

ಸಿಎಂ ಯಡಿಯೂರಪ್ಪ ಅವರು ಬೆಳಿಗ್ಗೆ 7 ಗಂಟೆಗೆ ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಕೃಷ್ಣ ಅವರಿಗೆ ಶೋಧ ಕಾರ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.

CCD Owner VG Siddhartha Missing LIVE: ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ನಾಪತ್ತೆ: ಕ್ಷಣ-ಕ್ಷಣದ ಮಾಹಿತಿCCD Owner VG Siddhartha Missing LIVE: ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ನಾಪತ್ತೆ: ಕ್ಷಣ-ಕ್ಷಣದ ಮಾಹಿತಿ

ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ ಅವರುಗಳು ಸೇರಿ ಬಿಜೆಪಿಯ ಹಲವು ನಾಯಕರು ಎಸ್‌.ಎಂ.ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ.

SM Krishnas son in law Siddhartha missing: politicians met SM Krishna

ಡಿಜಿಪಿ ನೀಲಮಣಿರಾಜು ಅವರು ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಶೋಧ ಕಾರ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಅಗತ್ಯಬಿದ್ದರೆ ನೌಕಾಪಡೆಯ ಸಿಬ್ಬಂದಿಯ ನೆರವು ಪಡೆಯಿರಿ ಎಂದು ಯಡಿಯೂರಪ್ಪ ಅವರು ಸೂಚನೆ ನೀಡಿದ್ದಾರೆ.

ಕಾಫಿ ಡೇ ಸಿದ್ಧಾರ್ಥ ನಾಪತ್ತೆ: ಸುಳಿವು ನೀಡದ ಡ್ರೈವರ್ ದೂರುಕಾಫಿ ಡೇ ಸಿದ್ಧಾರ್ಥ ನಾಪತ್ತೆ: ಸುಳಿವು ನೀಡದ ಡ್ರೈವರ್ ದೂರು

ಕೇಂದ್ರದಿಂದ ಎಲ್ಲಾ ಅಗತ್ಯ ನೆರವುಗಳನ್ನು ಪಡೆದುಕೊಳ್ಳಿರೆಂದು ಈಗಾಗಲೇ ಯಡಿಯೂರಪ್ಪ ಅವರು ತಿಳಿಸಿದ್ದು, ಹೆಲಿಕಾಪ್ಟರ್ ಮತ್ತು ಸುಸಜ್ಜಿತ ಹಡಗು ಬಳಸಿ ಶೋಧ ಕಾರ್ಯವನ್ನು ಮುಂದುವರೆಸಲಾಗುವುದು.

English summary
Many political leaders met SM Krishna as his son in law business man Siddhartha went missing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X