ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸ್ಸೆಂ ಕೃಷ್ಣ ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆ: ಯಡಿಯೂರಪ್ಪ

ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಮಾಜಿ ಡಿಸಿಎಂ ಆರ್ ಅಶೋಕ ಅವರು ಸೋಮವಾರ ಸಂಜೆ ವೇಳೆಗೆ ಸದಾಶಿವ ನಗರದಲ್ಲಿರುವ ಮಾಜಿ ಮುಖ್ಯಮಂತ್ರಿ ಎಸ್ಸೆಂಕೃಷ್ಣ ಅವರ ಮನೆಗೆ ಭೇಟಿ ನೀಡಿದ್ದಾರೆ.

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 06: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಮಾಜಿ ಡಿಸಿಎಂ ಆರ್ ಅಶೋಕ ಅವರು ಸೋಮವಾರ ಸಂಜೆ ವೇಳೆಗೆ ಸದಾಶಿವ ನಗರದಲ್ಲಿರುವ ಮಾಜಿ ಮುಖ್ಯಮಂತ್ರಿ ಎಸ್ಸೆಂಕೃಷ್ಣ ಅವರ ಮನೆಗೆ ಭೇಟಿ ನೀಡಿದ್ದಾರೆ.

ಈ ಭೇಟಿ ಸಂದರ್ಭದಲ್ಲಿ ಎಸ್ಸೆಂ ಕೃಷ್ಣ ಅವರಿಗೆ ಬಿಜೆಪಿಗೆ ಸೇರುವಂತೆ ಅಧಿಕೃತ ಆಹ್ವಾನ ನೀಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಮಾರ್ಚ್ 11ರಂದು ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಹೊರ ಬೀಳಲಿದ್ದು, ಇದಾದ ಬಳಿಕ ಎಸ್ಸೆಂ ಕೃಷ್ಣ ಅವರು ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ. ಮಾರ್ಚ್ 15ರ ನಂತರ ಭಾರತೀಯ ಜನತಾ ಪಕ್ಷಕ್ಕೆ ಎಸ್ಸೆಂ ಕೃಷ್ಣ ಅವರು ಅಧಿಕೃತವಾಗಿ ಸೇರ್ಪಡೆಯಾಗುವ ಲಕ್ಷಣಗಳು ಕಂಡು ಬಂದಿದೆ.[ರಾಜಕೀಯ ನಿವೃತ್ತಿ ಡಿಕ್ಷನರಿಯಲ್ಲೇ ಇಲ್ಲ: ಎಸ್ಸೆಂ ಕೃಷ್ಣ]

ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಜನವರಿ 28ರ ಐದು ದಿನ ಮೊದಲು ಜನವರಿ 23ರಂದು, 84 ವರ್ಷದ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರು, ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಬಿಜೆಪಿಯ ಮೂಲಗಳು ಈ ಸುದ್ದಿಯನ್ನು ಖಚಿತಪಡಿಸಿತ್ತು.[ರಾಜೀನಾಮೆಗೆ ಮುನ್ನ ಕೃಷ್ಣ, ಶಾರನ್ನು ಭೇಟಿ ಮಾಡಿದ್ದೇಕೆ?]

'ನಾನು ಕಾಂಗ್ರೆಸ್ ಗೆ ಮಾತ್ರ ರಾಜೀನಾಮೆ ನೀಡಿದ್ದೇನೆ. ಸಕ್ರಿಯ ರಾಜಕೀಯಕ್ಕೆ ಅಲ್ಲ. ನಿವೃತ್ತಿ ಎಂಬುದು ನನ್ನ ಡಿಕ್ಷನರಿಯಲ್ಲಿಲ್ಲ. A politician never retires, he only fades away' ಎಂದು ಹೇಳಿದ್ದರು,[ಒಬ್ಬರ ಹಿಂದೊಬ್ಬರಂತೆ ಕಾಂಗ್ರೆಸ್ ತೊರೆಯುತ್ತಿರುವವರು][ಎಸ್ಸೆಂ ಕೃಷ್ಣ ಬಿಜೆಪಿ ಸೇರಲಿ: ಒನ್ಇಂಡಿಯಾ ಓದುಗರ ಬಹುಮತ]

ಪಕ್ಷ ಬಿಟ್ಟ ಮೇಲೆ ಕೃಷ್ಣ ಹೇಳಿದ್ದೇನು?

ಪಕ್ಷ ಬಿಟ್ಟ ಮೇಲೆ ಕೃಷ್ಣ ಹೇಳಿದ್ದೇನು?

ವಯಸ್ಸಿನ ಕಾರಣಕ್ಕೆ ಮಾತ್ರ ಪಕ್ಷದ ನಿಷ್ಠಾವಂತರನ್ನು ಕಡೆಗಣಿಸುವುದು ಸರಿಯಲ್ಲ ಎಂದು ನೊಂದು ನುಡಿದರು. ಇಂದು ಕಾಂಗ್ರೆಸ್ ಪಕ್ಷ ದ್ವಂದ್ವ ಪರಿಸ್ಥಿತಿಯಲ್ಲಿದೆ. ರಾಜಕೀಯ ಮುಖಂಡರಿಗಿಂತ ಮ್ಯಾನೇಜರ್ ಗಳಿದ್ದರೆ ಪಕ್ಷ ನಡೆಸಬಹುದು ಎಂಬ ಮನಸ್ಥಿತಿ ಬಂದಿದೆ. ಹಿರಿತನಕ್ಕೆ ಬೆಲೆ ಇಲ್ಲದ್ದಂತಾಗಿರುವುದು ಬಹಳ ನೋವಿನ ಸಂಗತಿ ಎಂದು ಕೃಷ್ಣ ಹೇಳಿದ್ದರು.

ಎಸ್.ಎಂ.ಕೆ ಭೇಟಿ ಬಳಿಕ ಬಿ.ಎಸ್.ವೈ

ಎಸ್.ಎಂ.ಕೆ ಭೇಟಿ ಬಳಿಕ ಬಿ.ಎಸ್.ವೈ

ಹಿರಿಯ ನಾಯಕ ಎಸ್.ಎಂ‌ ಕೃಷ್ಣ ಅವರು ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ ತಕ್ಷಣವೇ ಕರೆ ಮಾಡಿ ಬಿಜೆಪಿಗೆ ಬರುವಂತೆ ಮನವಿ ಮಾಡಿದ್ದೆವು. ಇಂದು ಕೃಷ್ಣ ಅವರಿಗೆ ಬಿಜೆಪಿಗೆ ಬರುವಂತೆ ಅಧಿಕೃತ ಆಹ್ವಾನ ನೀಡಲಾಗಿದೆ. ಆದಷ್ಟು ಬೇಗ ಅವರು ಬಿಜೆಪಿ ಸೇರುವ ವಿಶ್ವಾಸವಿದೆ ಎಂದು ಬಿಎಸ್ ಯಡಿಯೂರಪ್ಪ ಅವರು ಭೇಟಿ ನಂತರ ಹೇಳಿದರು.

ಬಿಜೆಪಿಗೆ ಅಹ್ವಾನ

ಬಿಜೆಪಿಗೆ ಅಹ್ವಾನ

ಎಸ್ ಎಂ ಕೃಷ್ಣ ಅವರು ಕಾಂಗ್ರೆಸ್ ಪಕ್ಷ ಕಟ್ಟಿ ಬೆಳೆಸಿದವರು. ಐದಾರು ದಶಕಗಳ ಅನುಭವ ಹೊಂದಿರುವ ಅವರನ್ನು ಬಿಜೆಪಿಗೆ ಅಹ್ವಾನ ಮಾಡಲಾಗಿದೆ. ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಅವರಿಗೆ ಅಸಮಾಧಾನ ಇದೆ.

ಮೋದಿ ಸರ್ಕಾರದ ಹಲವು ಕ್ರಮವನ್ನು ಕೃಷ್ಣ ಅವರು ಸ್ವಾಗತ ಮಾಡಿದ್ದಾರೆ. ಇವತ್ತು ಅವರನ್ನು ಅಧಿಕೃತವಾಗಿ ಆಹ್ವಾನ ಮಾಡಿದ್ದೇವೆ. ಒಳ್ಳೆಯದಾಗಲಿದೆ ಅನ್ನೋ ವಿಶ್ವಾಸ ಇದೆ ಎಂದು ಮಾಜಿ ಡಿಸಿಎಂ ಆರ್ ಅಶೋಕ ಅವರು ಹೇಳಿದರು.

ಕೃಷ್ಣ ಅವರಿಗೆ ಸ್ವಾಗತ

ಕೃಷ್ಣ ಅವರಿಗೆ ಸ್ವಾಗತ

ಎಸ್ಸೆಂ ಕೃಷ್ಣ ಅವರು ಬಿಜೆಪಿಗೆ ಬಂದರೆ ಯಾವ ಸ್ಥಾನ ಸಿಗಲಿದೆ? ಕೇಂದ್ರ ಸರ್ಕಾರದಿಂದ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಸಿಗುತ್ತದೆಯೆ? ರಾಷ್ಟ್ರಪತಿ ಚುನಾವಣೆಗೆ ಕೃಷ್ಣ ಅವರು ಅಭ್ಯರ್ಥಿಯೇ? ಕರ್ನಾಟಕದ ಮುಂದಿನ ಚುನಾವಣೆಗೆ ಕೃಷ್ಣ ಅವರ ಜನಪ್ರಿಯತೆ, ಅನುಭವ ಬಳಕೆ ಮಾಡಿಕೊಳ್ಳುವುದು ಬಿಜೆಪಿಯ ಚಿಂತನೆಯೇ? ಮುಂಬರುವ ದಿನಗಳಲ್ಲಿ ತಿಳಿದು ಬರಲಿದೆ.

English summary
BJP President BS Yeddyurappa along with former DCM R Ashoka met Former Congress veteran S.M. Krishna at his residence in Sadashivanagar, Bengaluru. During his visit BS Yeddyurappa reportedly officially invited SM Krishna to join BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X