ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಕೈ ವಾಕ್ ನಿರ್ಮಾಣ : ಬಿಬಿಎಂಪಿ v/s ಸಂಚಾರಿ ಪೊಲೀಸ್

|
Google Oneindia Kannada News

ಬೆಂಗಳೂರು, ಆಗಸ್ಟ್ 01 : ಬೆಂಗಳೂರು ನಗರದಲ್ಲಿ ಸ್ಕೈ ವಾಕ್ ನಿರ್ಮಾಣದ ವಿಚಾರದಲ್ಲಿ ಬಿಬಿಎಂಪಿ ಮತ್ತು ಸಂಚಾರಿ ಪೊಲೀಸರ ನಡುವೆ ಅಸಮಾಧಾನ ಉಂಟಾಗಿದೆ. ಪಾಲಿಕೆ ಹಲವು ಪ್ರದೇಶಗಳಲ್ಲಿ ನಿರ್ಮಾಣ ಮಾಡಿರುವ ಸ್ಕೈವಾಕ್ ಅವೈಜ್ಞಾನಿಕ ಎಂಬುದು ಪೊಲೀಸರ ಆರೋಪ.

ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಪಿ. ಹರಿಶೇಖರನ್ ಬಿಬಿಎಂಪಿಗೆ 433 ಪುಟದ ವರದಿಯೊಂದನ್ನು ನೀಡಿದ್ದಾರೆ. ಅಗತ್ಯ ಇಲ್ಲದ ಕಡೆ ಪಾಲಿಕೆ ಸ್ಕೈವಾಕ್ ನಿರ್ಮಾಣ ಮಾಡಿದೆ ಎಂಬುದು ವರದಿಯ ಸಾರಾಂಶ.

ಬೆಂಗಳೂರು : ಮನೆ ಕಟ್ಟುವವರಿಗೆ ಪಾಲಿಕೆಯಿಂದ ಸಿಹಿ ಸುದ್ದಿಬೆಂಗಳೂರು : ಮನೆ ಕಟ್ಟುವವರಿಗೆ ಪಾಲಿಕೆಯಿಂದ ಸಿಹಿ ಸುದ್ದಿ

ಸಂಚಾರಿ ಪೊಲೀಸರು ಗುರುತಿಸಿರುವ ಜಾಗಗಳಲ್ಲಿ ಸ್ಕೈವಾಕ್ ನಿರ್ಮಾಣ ಮಾಡಿಲ್ಲ. ಬಿಬಿಎಂಪಿ ಕಾಮಗಾರಿಯನ್ನು ಕೈಗೊಳ್ಳುವ ಮುಂಚೆ ಪೊಲೀಸರ ಜೊತೆ ಚರ್ಚೆ ನಡೆಸಬೇಕು. ವಿವಿಧ ಕಾರಣಗಳಿಗಾಗಿ ಸ್ಕೈವಾಕ್ ನಿರ್ಮಾಣ ಸ್ಥಳವನ್ನು ಪಾಲಿಕೆ ಬದಲಾವಣೆ ಮಾಡಿದೆ.

ಹೊಸ 15 ಸ್ಕೈವಾಕ್‌ಗೆ ಬಿಬಿಎಂಪಿ ಟೆಂಡರ್, ಎಲ್ಲೆಲ್ಲಿ ನಿರ್ಮಾಣ?ಹೊಸ 15 ಸ್ಕೈವಾಕ್‌ಗೆ ಬಿಬಿಎಂಪಿ ಟೆಂಡರ್, ಎಲ್ಲೆಲ್ಲಿ ನಿರ್ಮಾಣ?

 Skywalk in Bengaluru : BBMP V/S Traffic police

ಪೊಲೀಸರು ಸೂಚಿಸಿರುವ ಜಾಗ ಸೂಕ್ತವಲ್ಲ ಎಂದಾದರೆ ಅದನ್ನು ಪಾಲಿಕೆ ತಿಳಿಸಬೇಕು. ಅಗತ್ಯವಿಲ್ಲದ ಸ್ಥಳದಲ್ಲಿ ಸ್ಕೈವಾಕ್ ನಿರ್ಮಾಣ ಮಾಡಿದರೆ ಉಪಯೋಗವೇನು? ಎಂಬುದು ಸಂಚಾರಿ ಪೊಲೀಸರ ಪ್ರಶ್ನೆಯಾಗಿದೆ.

ಮುತ್ತುರಾಜ್ ಜಂಕ್ಷನ್ ಕೆಳ ಸೇತುವೆ ಕಾಮಗಾರಿ ಯಾವಾಗ ಪೂರ್ಣ?ಮುತ್ತುರಾಜ್ ಜಂಕ್ಷನ್ ಕೆಳ ಸೇತುವೆ ಕಾಮಗಾರಿ ಯಾವಾಗ ಪೂರ್ಣ?

ಸ್ಕೈವಾಕ್ ನಿರ್ಮಾಣ ಮಾಡುವಾಗ ವ್ಯಾಪಾರಿಗಳ ಒತ್ತಡಕ್ಕೆ ಮಣಿದು ಪಾಲಿಕೆ ಅಧಿಕಾರಿಗಳು ಸ್ಥಳ ಬದಲಾವಣೆ ಮಾಡಿದ್ದಾರೆ. ಪಾದಚಾರಿಗಳ ಹಿತವನ್ನು ಕಡೆಗಣಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಬೆಂಗಳೂರು ಸಂಚಾರಿ ಪೊಲೀಸರ ಮಾಹಿತಿಯಂತೆ ನಗರಕ್ಕೆ ಇನ್ನೂ 109 ಸ್ಕೈವಾಕ್‌ಗಳ ಅಗತ್ಯವಿದೆ. ಪ್ರತಿಯೊಂದರ ನಿರ್ಮಾಣಕ್ಕೆ ಸುಮಾರು 2 ಕೋಟಿ ವೆಚ್ಚವಾಗಲಿದೆ. ಮೊದಲು ಬಿಬಿಎಂಪಿ ಪಿಪಿಪಿ ಮಾದರಿಯಲ್ಲಿ ಸ್ಕೈವಾಕ್ ನಿರ್ಮಾಣ ಕಾರ್ಯವನ್ನು ಕೈಗೊಳ್ಳುತ್ತಿತ್ತು. ಆದರೆ, ಈಗ ಯಾರೂ ಇದಕ್ಕೆ ಒಪ್ಪದ ಕಾರಣ ಬಿಬಿಎಂಪಿ ತನ್ನ ಅನುದಾನದಿಂದಲೇ ನಿರ್ಮಾಣ ಕಾರ್ಯ ಕೈಗೊಂಡಿದೆ.

English summary
In a 433 page report Bengaluru Traffic Police said that BBMP has build the skywalks in the city where they are not necessary. Report also said that there is need for 109 skywalks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X