ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೇಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ

By Rajendra
|
Google Oneindia Kannada News

ಬೆಂಗಳೂರು, ಏ.20: ಕಿಬ್ಬೊಟ್ಟೆಯಲ್ಲಿ ಶೇಖರಿಸಿಟ್ಟಿದ ತಲೆಬುರುಡೆಯ ಮೂಳೆಯೊಂದು 20 ವರ್ಷದ ಕಾಲೇಜು ವಿದ್ಯಾರ್ಥಿ ರಾಕೇಶ್ ಗೆ ಪುನರ್ಜನ್ಮ ನೀಡಿದೆ. ಮಾರ್ಚ್ 26ರಂದು ರಾಕೇಶ್ ತನ್ನ ದ್ವಿಚಕ್ರ ವಾಹನದಲ್ಲಿ ಕಾಲೇಜ್ ಗೆ ತೆರಳುತ್ತಿದ್ದ ವೇಲೆ ಅಪಘಾತಕ್ಕೀಡಾದ. ಆತನನ್ನು ಕೊಂಡೊಯ್ದ ಸೈಂಟ್ ಮಾರ್ಥಾಸ್ ಆಸ್ಪತ್ರೆಯ ವೈದ್ಯರು ಹಾನಿಗೊಳಗಾದ ತಲೆಬುರುಡೆಯ ಮೂಳೆಯನ್ನು ತೆಗೆಯಲು ಮತ್ತು ರಕ್ತದ ಹರಿವು ಸರಾಗಗೊಳ್ಳುವ ತನಕ ಮಿದುಳು ಊತಗೊಂಡೇ ಇರುವಂತೆ ಅವಕಾಶ ನೀಡಲು ನಿರ್ಧರಿಸಿದರು.

ಇಂದು, ರಾಕೇಶ್ ನ ಕಿಬ್ಬೊಟ್ಟೆಯು ಆತನ ತಲೆಬುರುಡೆಯ ಭಾಗವೊಂದಕ್ಕೆ ಆಶ್ರಯತಾಣವಾಗಿದೆ. ಮೂರು ವಾರಗಳ ಬಳಿಕ, ಡಿಕಂಪ್ರೆಸ್ಸಿವ್ ಕ್ರಾನಿಯೊಟಮಿ ಎಂದು ಕರೆಯುವ ವಿಧಾನದಲ್ಲಿ ಈ ಮೂಳೆಯನ್ನು ಮರಳಿ ಮಿದುಳಿನಲ್ಲಿ ಇಡಲಾಯಿತು. ಮಿದುಳು ಗಾಯಗೊಂಡ ರೋಗಿಗಳಿಗೆ ಇದನ್ನು ಕೊನೆಯ ಉಪಾಯವೆಂದು ಪರಿಗಣಿಸಲಾಗಿದೆ. ಸಂಕೋಚನವನ್ನು ತಡೆಯುವ ಸಲುವಾಗಿ ಮಿದುಳು ಊತವಾಗಿಯೇ ಇರಲು ಗಾಯಗೊಂಡ ತಲೆಬುರುಡೆಯ ಮೂಳೆಯನ್ನು ಇಲ್ಲಿ ತೆಗೆಯಲಾಯಿತು.

skull-bone-stored-abdomen-saves-rajesh-s-life

"ಮಾರ್ಚ್ 26ರಂದು ಬೆಳಗ್ಗೆ 7.30ಕ್ಕೆ ಅರಮನೆ ರಸ್ತೆ ಬಳಿ ಅಪಘಾತ ಸಂಭವಿಸಿತು. ನನ್ನ ಮಗನನ್ನು ತಕ್ಷಣವೇ ಸೈಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಯಿತು. ನಾನು ಮಧ್ಯಪ್ರಾಚ್ಯದಲ್ಲಿದ್ದೆ ಮತ್ತು ಆತನ ಸ್ಥಿತಿಯ ಪೂರ್ಣ ಅರಿವು ನನಗಿರಲಿಲ್ಲ. ಮಾರನೇ ದಿನ ನಾನು ಬೆಂಗಳೂರಿಗೆ ತಲಪುವ ವೇಳೆಗೆ, ಆತನಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ನನ್ನ ಪುತ್ರ ಬದುಕುಳಿದಿದ್ದಾನೆ. ಅದುವೇ ನನ್ನ ಅತಿದೊಡ್ಡ ಸಂತೋಷವಾಗಿದೆ'', ಎಂದು ಹೇಳುತ್ತಾರೆ ರಾಕೇಶ್ ತಂದೆ.

ರೋಗಿಯ ಮಿದುಳಿನ ಬಲ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿತ್ತು ಎಂದು ರಾಕೇಶ್ ಗೆ ಶಸ್ತ್ರಚಿಕಿತ್ಸೆ ನಡೆಸಿದ ಸೈಂಟ್ ಮಾರ್ಥಾಸ್ ಆಸ್ಪತ್ರೆಯ ಕನ್ಸಲ್ಟೆಂಟ್ ನ್ಯೂರೋಸರ್ಜನ್, ಡಾ.ಕೃಷ್ಣಪ್ರಸಾದ್ ಎಂ. ಹೇಳುತ್ತಾರೆ. " 10 ಸೆಂ.ಮೀ. ಉದ್ದ ಮತ್ತು 7 ಸೆಂ.ಮೀ. ಅಗಲದ ತಲೆಬುರುಡೆ ಮೂಳೆಯ ಒಂದು ಭಾಗವನ್ನು ತೆಗೆಯಲಾಯಿತು ಮತ್ತು ಕಿಬ್ಬೊಟ್ಟೆಯ ಸಬ್ ಕ್ಯುಟೋನಿಯಸ್ ಚೀಲದಲ್ಲಿ ಇಡಲಾಯಿತು. ಇದರಿಂದಾಗಿ ಮಿದುಳು ಊತಗೊಳ್ಳಲು ದಾರಿ ಮಾಡಿಕೊಟ್ಟಿತು ಮತ್ತು ಆ ಅಂಗಕ್ಕೆ ರಕ್ತ ಸಂಚಾರ ಸರಾಗವಾಯಿತು.

ಮೂರು ವಾರಗಳ ಬಳಿಕ, ಅದೇ ಮೂಳೆಯ ಭಾಗವನ್ನು ಮರಳಿ ತಲೆಬುರಡೆಯಲ್ಲಿ ಇಡಲಾಯಿತು. ಉನ್ನತ ಗ್ರೇಡ್ ಮೆಟಾಲಿಕ್ ಮೆಶ್ ಉಪಯೋಗಿಸುವಂತಹ ಪರ್ಯಾಯ ವಿಧಾನಗಳನ್ನೂ ನಾವು ಉಪಯೋಗಿಸಬಹುದಾಗಿತ್ತು. ಆದರೆ ಬೇಕಾದ ಆಕಾರ ಸಿಗದೇ ಹೋಗಬಹುದಿತ್ತು. ಆದ್ದರಿಂದ ಇದನ್ನು ಉಪಯೋಗಿಸಲಿಲ್ಲ" ಎಂದು ವಿವರಿಸಿದ್ದಾರೆ ಡಾ.ಕೃಷ್ಣಪ್ರಸಾದ್.

ಕಿಬ್ಬೊಟ್ಟೆಯ ಚೀಲವೇ ಯಾಕೆ?
ತಲೆಬುರುಡೆಯ ಮೂಳೆಯನ್ನು ಶೇಖರಿಸಿಡಲು ಇದು ಮಾನವ ದೇಹದಲ್ಲಿರುವ ಅತ್ಯಂತ ಸುರಕ್ಷಿತ ಸ್ಥಳವಾಗಿದೆ. ದೇಹವು ಬಾಹ್ಯ ವಸ್ತು ಎಂದು ಇದನ್ನು ತ್ಯಜಿಸುವುದಿಲ್ಲ ಎಂದು ವಿವರಿಸುತ್ತಾರೆ ಡಾ.ಕೃಷ್ಣಪ್ರಸಾದ್. "ಮಿದುಳಿನ ಭಾಗವನ್ನು ಶೀಥಲೀಕರಿಸುವುದು ಆಯ್ಕೆಯಲ್ಲ. ಪವರ್ ಕಟ್ ನಂತಹ ಸಂದರ್ಭಗಳಲ್ಲಿ ಉಷ್ಣಾಂಶದ ವ್ಯತ್ಯಾಸವಾಗಬಹುದಾಗಿದೆ. ರೋಗಿಯ ಕಿಬ್ಬೊಟ್ಟೆಯಲ್ಲಿ ಇಡುವುದೇ ಅತ್ಯಂತ ಸುರಕ್ಷಿತ ಆಯ್ಕೆಯಾಗಿದೆ" ಎಂದು ಅವರು ಹೇಳುತ್ತಾರೆ.

English summary
A skull bone stored in the abdomen of 20-year-old college student Rakesh has given him a second chance at life. Rakesh met with an accident on March 26 while on his way to college on his two-wheeler. Doctors at St Martha's Hospital, where he was rushed, decided to remove his injured skull bone and let the brain swell up to ease blood flow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X