ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಸಕ ಎಸ್.ಆರ್. ವಿಶ್ವನಾಥ್ ಕೊಲೆಗೆ ಸ್ಕೆಚ್: ಎಫ್ಐಆರ್ ದಾಖಲಿಸದೇ ಎನ್‌ಸಿಅರ್ ದಾಖಲಿಸಿದ್ದು ಯಾಕೆ?

|
Google Oneindia Kannada News

ಬೆಂಗಳೂರು, ಡಿ. 01: ಕುಳ್ಳ ದೇವರಾಜ್ ಮತ್ತು ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಡುವಿನ "ಕೊಲೆ ಸ್ಕೆಚ್" ಸಂಭಾಷಣೆ ಪ್ರಕರಣ ಕ್ಷಣಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಕೊಲೆ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಶಾಸಕ ಎಸ್.ಅರ್. ವಿಶ್ವನಾಥ್ ನೀಡಿರುವ ದೂರು ಆಧರಿಸಿ ರಾಜಾನುಕುಂಟೆ ಪೊಲೀಸರು ಎನ್‌ಸಿಅರ್ ದಾಖಲಿಸಿದ್ದಾರೆ. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಇದೀಗ ನ್ಯಾಯಾಲಯದ ಅನುಮತಿ ಪಡೆದು ಎಫ್ಐಆರ್ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.

ಒಬ್ಬ ಶಾಸಕರಿಗೆ ಕೊಲೆಗೆ ಸ್ಕೆಚ್ ಹಾಕಿರುವ ಬಗ್ಗೆ ದೂರು ನೀಡಿದರೆ ಎನ್‌ಸಿಅರ್ ದಾಖಲು ಮಾಡುತ್ತಾರೆಯೆ? ರಾಜಾನುಕುಂಟೆ ಪೊಲೀಸರು ಎನ್‌ಸಿಅರ್ ದಾಖಲಿಸಿದ್ದು ಯಾಕೆ? ಎಫ್ಐಆರ್ ಯಾಕೆ ಮಾಡಲಿಲ್ಲ ಎಂಬ ಪ್ರಶ್ನೆಗಳು ಎದ್ದಿವೆ. ಕೊಲೆಗೆ ಸ್ಕೆಚ್ ರೂಪಿಸಿದ ಬೆನ್ನಲ್ಲೇ ಶಾಸಕ ಎಸ್.ಆರ್. ವಿಶ್ವನಾಥ್ ಅವರ ಸಿಂಗನಾಯಕನಹಳ್ಳಿ ಮನೆಗೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ನಿಜವಾಗಿಯೂ ರೌಡಿ ಶೀಟರ್ ಕುಳ್ಳ ದೇವರಾಜ್‌ಗೆ ಕೊಲೆಗೆ ಸ್ಕೆಚ್ ರೂಪಿಸುವ ಸುಪಾರಿ ನೀಡಿದನೇ? ಇಲ್ಲವೇ ಇದರ ಹಿಂದೆ ದೊಡ್ಡ ನಾಟಕವಿದೆಯೇ ಎಂಬ ಅನುಮಾನ ಎದ್ದಿದೆ. ಎಸ್.ಆರ್. ವಿಶ್ವನಾಥ್ ಕೊಲೆಗೆ ಸ್ಕೆಚ್ ಹಾಕಿದ ಬೆನ್ನಲ್ಲೇ ಅದೇ ವಿಚಾರ ಒಬ್ಬ ಪೊಲೀಸ್ ಅಧಿಕಾರಿಗೆ ತಿಳಿಯವುದು, ಆ ಪೊಲೀಸ್ ಅಧಿಕಾರಿ ಶಾಸಕರನ್ನು ಭೇಟಿ ಮಾಡಿ ಮಾಹಿತಿ ನೀಡಿರುವ ಈ ಬೆಳವಣಿಗೆ ಪೊಲೀಸ್ ಇಲಾಖೆಯಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ.

ಕಡಬಗೆರೆ ಸೀನಗೂ ಕೇಸಿನ ಬಿಸಿ: ಬಾಗಲೂರು ಕ್ರಾಸ್ ಬಳಿ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಸೀನ ಮೇಲೆ ನಡೆದ ಮಾರಣಾಂತಿಕ ದಾಳಿ ಮತ್ತು ಕುಳ್ಳ ದೇವರಾಜ್‌ಗೆ ಲಿಂಕ್ ಇರುವ ಅನುಮಾನ ವ್ಯಕ್ತವಾಗಿದೆ. ಸೀನನ ಹತ್ಯೆ ಹಿಂದೆ ಕುಳ್ಳ ದೇವರಾಜ್ ಕೈವಾಡವಿದೆ ಎನ್ನಲಾಗಿದೆ. ಸೀನನ ಹತ್ಯೆ ಕೈವಾಡದ ಬಗ್ಗೆ ಮಾತನಾಡಿರುವ ಗೋಪಾಲಕೃಷ್ಣ, "ಸೀನನ ಹತ್ಯೆಯಲ್ಲಿ ನೀನು ಕರೆಕ್ಟ್ ಆಗಿ ಪ್ಲಾನ್ ಮಾಡಿದ್ದೆ ಎಂದು ಕುಳ್ಳ ದೇವರಾಜ್ ಜತೆಗಿನ ಸಂಭಾಷಣೆಯಲ್ಲಿ ಗೋಪಾಲಕೃಷ್ಣ ಮಾತನಾಡಿದ್ದಾನೆ. ಹೀಗಾಗಿ 2017ರಲ್ಲಿ ನಡೆದಿದ್ದ ಕಡಬಗೆರೆ ಸೀನನ ದಾಳಿ ಪ್ರಕರಣ ಇದೀಗ ಮರು ಜೀವ ಪಡೆದುಕೊಂಡಂತಾಗಿದೆ. ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಕುಳ್ಳ ದೇವರಾಜ್ ಬಳಿ ಪ್ರಸ್ತಾಪಿಸಿರುವ ಕಡಬಗೆರೆ ಸೀನನ ಪ್ರಕರಣ ಇದೀಗ ಜೀವ ಪಡೆದುಕೊಂಡಿದೆ. ಕಡಬಗೆರೆ ಸೀನನ ಮೇಲಿ ದಾಳಿ ಪ್ರಕರಣ ಕುರಿತು ಪೊಲೀಸರು ಮರು ತನಿಖೆ ಮಾಡಲಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.

Sketch to Murder MLA Viswanath: Kulla Devaraj-Gopalakrishna Conversation takes a new turn

ಡಿಜಿಪಿ ಸ್ಪಷ್ಟನೆ: ಶಾಸಕ ಎಸ್.ಆರ್. ವಿಶ್ವನಾಥ್ ಕೊಲೆಗೆ ಸ್ಕೆಚ್ ಹಾಕಿರುವ ಪ್ರಕರಣ ಸಂಬಂಧ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ರಾಜಾನುಕುಂಟೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಟಿಯಲ್ಲಿ ಸಿಸಿಬಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಈ ಹಂತದಲ್ಲಿ ಪ್ರಕರಣದ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ. ದೂರಿನ ಅನ್ವಯ ತನಿಖೆ ನಡೆಯಲಿದೆ ಎಂದು ತಿಳಿಸಿದ್ದಾರೆ.

Sketch to Murder MLA Viswanath: Kulla Devaraj-Gopalakrishna Conversation takes a new turn

2017 ರಲ್ಲಿ ಯಶವಂತಪುರ ಎಪಿಎಂಸಿ ಯಾರ್ಡ್ ಅಧ್ಯಕ್ಷ ಕಡಬಗೆರೆ ಸೀನನ ಮೇಲೆ ಕೋಗಿಲು ಕ್ರಾಸ್ ಬಳಿ ಗುಂಡಿನ ದಾಳಿ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಕಡಬಗೆರೆ ಸೀನನ ಮೇಲಿನ ದಾಳಿ ಸಂಬಂಧ ಬಾಗಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಕುಳ್ಳ ದೇವರಾಜ್ ಮತ್ತು ಗೋಪಾಲಕೃಷ್ಣ ನಡುವಿನ ಸಂಭಾಷಣೆಯಲ್ಲಿ ಈ ದಾಳಿ ಬಗ್ಗೆ ಮಾತುಕತೆ ನಡೆದಿದ್ದು, ಈ ಪ್ರಕರಣ ಕೂಡ ಹೊಸ ಸ್ವೂರೂಪ ಪಡೆದುಕೊಳ್ಳುವ ಲಕ್ಷಣ ಗೋಚರಿಸುತ್ತಿದೆ.

English summary
Sketch to Murder MLA S.R. Viswanath: Kulla Devaraj and Congress leader Gopalakrishna Conversation takes a new tur, Police provided security for Vishwanath's home. Read more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X