ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಮೂರು ತಿಂಗಳಿನಲ್ಲಿ ಆರು ಪಟ್ಟು ಡೆಂಗ್ಯೂ ಪ್ರಕರಣಗಳ ಏರಿಕೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 11: ಮಳೆಗಾಲದಲ್ಲಿ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳಲ್ಲಿಯೂ ಕ್ರಮೇಣವಾಗಿ ಏರಿಕೆಯಾಗಿರುವುದು ಕಂಡುಬಂದಿದೆ. ಮೂರು ತಿಂಗಳಿನಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಆರು ಪಟ್ಟು ಏರಿಕೆಯಾಗಿದೆ. ಮಳೆಗಾಲಕ್ಕೂ ಮುನ್ನ, ಮೇ ತಿಂಗಳಿನಲ್ಲಿ 102 ಡೆಂಗ್ಯೂ ಪ್ರಕರಣಗಳಿದ್ದು, ಆಗಸ್ಟ್‌ ತಿಂಗಳಿನಲ್ಲಿ 677 ಪ್ರಕರಣಗಳಿಗೆ ಏರಿಕೆಯಾಗಿದೆ.

ಡೆಂಗ್ಯೂ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದೆ. ಆದರೆ ಪರಿಸ್ಥಿತಿ ಆತಂಕಕಾರಿಯಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಬಿಬಿಎಂಪಿ ಪ್ರಕಾರ, ನಗರದಲ್ಲಿ ಮೇ ತಿಂಗಳಿನಿಂದ ಆಗಸ್ಟ್‌ವರೆಗೆ 12,203 ಮಾದರಿಗಳ ಡೆಂಗ್ಯೂ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ 1304 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಬಿಬಿಎಂಪಿಯ ಎಂಟು ವಲಯಗಳ ಪೈಕಿ ಪೂರ್ವ ವಲಯದಲ್ಲಿ ಅತಿ ಹೆಚ್ಚಿನ ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಪೂರ್ವ ವಲಯದಲ್ಲಿ 438 ಪ್ರಕರಣಗಳಿದ್ದು, ದಕ್ಷಿಣ ವಲಯದಲ್ಲಿ 319 ಪ್ರಕರಣಗಳು ವರದಿಯಾಗಿವೆ.

ಮಕ್ಕಳಿಗೆ ಅಪಾಯ: ಕೊರೊನಾವೈರಸ್ ಕಡಿಮೆಯಾದ ದೆಹಲಿಯಲ್ಲಿ ವೈರಲ್ ಜ್ವರ!ಮಕ್ಕಳಿಗೆ ಅಪಾಯ: ಕೊರೊನಾವೈರಸ್ ಕಡಿಮೆಯಾದ ದೆಹಲಿಯಲ್ಲಿ ವೈರಲ್ ಜ್ವರ!

ಮೇ ತಿಂಗಳಿನಿಂದಲೂ ಪಾಲಿಕೆ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗಿದೆ. ಮೇ ತಿಂಗಳಿನಲ್ಲಿ 102 ಇದ್ದ ಡೆಂಗ್ಯೂ ಪ್ರಕರಣಗಳು ಜೂನ್ ತಿಂಗಳಿನಲ್ಲಿ 174 ಪ್ರಕರಣಗಳಿಗೆ ಏರಿಕೆಯಾಗಿದೆ. ಜುಲೈ ತಿಂಗಳಿನಲ್ಲಿ 351 ಪ್ರಕರಣಗಳು ಹಾಗೂ ಆಗಸ್ಟ್‌ ತಿಂಗಳಿನಲ್ಲಿ 677 ಪ್ರಕರಣಗಳು ದಾಖಲಾಗಿವೆ.

Six Times Rise In Dengue Cases At Bengaluru In 3 Months

'ಡೆಂಗ್ಯೂ ಪ್ರಕರಣಗಳ ಸಂಖ್ಯೆಯಲ್ಲಿ ಖಂಡಿತ ಹೆಚ್ಚಳವಾಗಿದೆ. ಅದಾಗ್ಯೂ ಚಿಂತಿಸುವ ಅಗತ್ಯವಿಲ್ಲ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ನಾವು ಮೇಲ್ವಿಚಾರಣೆ ನಡೆಸುತ್ತಿದ್ದೇವೆ ಹಾಗೂ ಎಲ್ಲೆಲ್ಲಿ ಪ್ರಕರಣಗಳು ವರದಿಯಾಗುತ್ತಿವೆಯೋ ಅಲ್ಲಿ ಲಾರ್ವಾ ಉತ್ಪಾದನೆ ತಡೆಯಲು ಫಾಗಿಂಗ್ ಕಾರ್ಯವನ್ನು ತೀವ್ರಗೊಳಿಸಿದ್ದೇವೆ. ಮಳೆಗಾಲದಲ್ಲಿ ಪ್ರಕರಣಗಳು ಹೆಚ್ಚಾಗುವುದು ಸಹಜ' ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಬಿ.ಕೆ. ವಿಜೇಂದ್ರ ಹೇಳಿದ್ದಾರೆ.

ಡೆಂಗ್ಯೂ ಪರೀಕ್ಷೆಯನ್ನು ಸಮರ್ಥವಾಗಿ ನಡೆಸಲು ಕರ್ನಾಟಕ ಸರ್ಕಾರಕ್ಕೆ ಇಮ್ಯುನೊಗ್ಲೋಬುಲಿನ್ ಎಂ ಪರೀಕ್ಷಾ ಕಿಟ್‌ಗಳನ್ನು ಕೇಂದ್ರ ಸರ್ಕಾರ ವಿತರಣೆ ಮಾಡಿದೆ. ಈ ಕಿಟ್‌ಗಳು ಡೆಂಗ್ಯೂ ಪ್ರಕರಣಗಳ ಪತ್ತೆಗೆ ಸಹಕಾರಿಯಾಗಿದ್ದು, ನಿಖರ ಫಲಿತಾಂಶ ನೀಡಲಿದೆ.

ಉತ್ತರ ಪ್ರದೇಶದಲ್ಲಿ ಜ್ವರದಿಂದ ಒಂದೇ ವಾರದಲ್ಲಿ 50 ಮಕ್ಕಳು ಸಾವು!ಉತ್ತರ ಪ್ರದೇಶದಲ್ಲಿ ಜ್ವರದಿಂದ ಒಂದೇ ವಾರದಲ್ಲಿ 50 ಮಕ್ಕಳು ಸಾವು!

ಕೊರೊನಾ ಸೋಂಕಿನ ಏರಿಕೆ ಜೊತೆಜೊತೆಗೆ ಕೊರೊನಾ ಸೋಂಕಿನಿಂದ ಬಳಲುತ್ತಿರುವ ರೋಗಿಗಳಲ್ಲಿ ಡೆಂಗ್ಯೂ ತೀವ್ರ ಸ್ವರೂಪ ಪಡೆಯುವ ಸಾಧ್ಯತೆಯನ್ನು ತಜ್ಞರು ನೀಡಿದ್ದಾರೆ.

'ಹೌದು, ಡೆಂಗ್ಯೂ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಕೊರೊನಾದಿಂದ ಚೇತರಿಸಿಕೊಂಡ ಹಿನ್ನೆಲೆಯಿರುವವರು ತೀವ್ರ ಸ್ವರೂಪದ ಡೆಂಗ್ಯೂ ಇಂದ ಬಳುತ್ತಿರುವುದು ಕಂಡುಬಂದಿದೆ' ಎಂದು ಏಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಜಗದೀಶ್ ಹಿರೇಮಠ ಹೇಳಿದ್ದಾರೆ.

Six Times Rise In Dengue Cases At Bengaluru In 3 Months

'ಮಳೆಗಾಲದಲ್ಲಿ ಸೋಂಕು ಹರಡುವಿಕೆ ಸಹಜ. ಕೊರೊನಾ ಸಾಂಕ್ರಾಮಿಕದ ಪ್ರಸ್ತುತ ಕಾಲಲ್ಲಿ ನಾವು ಯಾವುದೇ ಸೋಂಕಿನ ಸಾಧ್ಯತೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಕೊರೊನಾ ಸೂಕ್ತ ನಡವಳಿಕೆಯನ್ನು ಅನುಸರಿಸುವುದು ಖಂಡಿತವಾಗಿ ಎಲ್ಲಾ ರೀತಿಯ ವೈರಲ್ ಸೋಂಕಿನ ಹರಡುವಿಕೆ ತಡೆಯಲು ಸಹಾಯ ಮಾಡುತ್ತದೆ' ಎಂದು ಅವರು ಹೇಳಿದರು.

ಉತ್ತರ ಪ್ರದೇಶ ಹಾಗೂ ದೆಹಲಿಯಲ್ಲಿ ತೀವ್ರತರವಾದ ಡೆಂಗ್ಯೂ
ಉತ್ತರ ಪ್ರದೇಶದಲ್ಲಿ ಈಚೆಗೆ ಡೆಂಗ್ಯೂ ಸೋಂಕು ಅಪಾಯಕಾರಿ ಮಟ್ಟದಲ್ಲಿ ಹರಡಿತ್ತು. ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಡೆಂಗ್ಯೂ ಹಾಗೂ ವೈರಲ್‌ ಜ್ವರದಿಂದ ಒಂದೇ ವಾರದಲ್ಲಿ ಸುಮಾರು 51 ಮಕ್ಕಳು ಸಾವನ್ನಪ್ಪಿದ್ದರು. ಸುಮಾರು 400 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು.

ದೆಹಲಿಯಲ್ಲಿಯೂ ಡೆಂಗ್ಯೂ ಪ್ರಕರಣಗಳ ಏರಿಕೆಯಾಗುತ್ತಿದ್ದು, ಮಕ್ಕಳಲ್ಲಿ ಹೆಚ್ಚಾಗಿ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಕೊರೊನಾ ಸಾಂಕ್ರಾಮಿಕ ಪಿಡುಗಿನಿಂದ ಸುಧಾರಿಸಿಕೊಳ್ಳುತ್ತಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವೈರಲ್ ಫಿವರ್ ಹಾವಳಿ ಹೆಚ್ಚಾಗಿದೆ. ದೆಹಲಿ ಮತ್ತು ನೋಯ್ಡಾದ ಬಹುಪಾಲು ಆಸ್ಪತ್ರೆಗಳಲ್ಲಿ ಹೆಚ್ಚಿನ ಮಕ್ಕಳು ತೀವ್ರ ಜ್ವರದಿಂದ ದಾಖಲಾಗಿದ್ದಾರೆ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಯ ಹೊರ ರೋಗಿಗಳ ವಿಭಾಗದಲ್ಲಿ ತೀವ್ರ ಜ್ವರಕ್ಕೆ ಚಿಕಿತ್ಸೆ ಪಡೆದುಕೊಂಡಿರುವುದು ವರದಿಯಾಗಿದೆ.

ಡೆಂಗ್ಯೂ ಮತ್ತು ವೈರಲ್ ಜ್ವರದ ಪ್ರಕರಣಗಳು ಮೊದಲು ಉತ್ತರ ಪ್ರದೇಶದ ಫಿರೋಜಾಬಾದ್ ಮತ್ತು ಮಥುರಾ ಜಿಲ್ಲೆಗಳಲ್ಲಿ ಹೆಚ್ಚಾಗಿ ವರದಿಯಾದವು. ಕಳೆದೊಂದು ವಾರದಲ್ಲೇ 36ಕ್ಕೂ ಹೆಚ್ಚು ಮಂದಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿತ್ತು.

Recommended Video

ಬೆಂಗಳೂರು: ಕೆ.ಆರ್ ಮಾರುಕಟ್ಟೆಯಲ್ಲಿ ಕಿಕ್ಕಿರಿದು ಸೇರಿದ ಜನ, ಕೋವಿಡ್‌ ರೂಲ್ಸ್‌ ಸಂಪೂರ್ಣ ಉಲ್ಲಂಘನೆ

English summary
Monsoon season in Bengaluru has resulted in a steady increase in dengue cases being reported in the city,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X