ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಟೋ-ಟ್ಯಾಕ್ಸಿ ಚಾಲನೆ ಮಾಡಲು ಆರು ನಿಯಮ ಕಡ್ಡಾಯ ಪಾಲಿಸಬೇಕು

|
Google Oneindia Kannada News

ಬೆಂಗಳೂರು, ಜೂ. 15: ಕೊರೊನಾ ಸೋಂಕು ಕಡಿಮೆಯಾದ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಕೆಲ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ರಾಜಧಾನಿಯಲ್ಲಿ ಬಿಎಂಟಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿಲ್ಲ. ಆಟೋ ಮತ್ತು ಟ್ಯಾಕ್ಸಿ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರೂ ಆರು ನಿಯಮ ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ.

ಕೊರೊನಾ ಪಾಸಿಟೀವಿಟಿ ದರ ಕಡಿಮೆಯಾದ ಬೆನ್ನಲ್ಲೇ ಲಾಕ್ ಡೌನ್ ನಿಯಮಗಳನ್ನು ಸಡಿಸಲಾಗಿದೆ. ಕೃಷಿ ಮತ್ತು ರಪ್ತು ಉದ್ಯಗಳ ಕಾರ್ಯ ಚಟುವಟಿಕೆಗೆ ಸರ್ಕಾರ ಅವಕಾಶ ನೀಡಿದೆ. ಲಾಕ್ ಡೌನ್ ಅವಧಿಯನ್ನು ಕಡಿಮೆಗೊಳಿಸಿದೆ. ಈ ಮೂಲಕ ದಿನದ ವಹಿವಾಟಿಗೆ ಅರ್ಧ ದಿನ ಕಾಲಾವಕಾಶ ಕೊಡಲಾಗಿದೆ. ಆದರೆ, ಸಾರ್ವಜನಿಕ ಸಾರಿಗೆ ಬಿಎಂಟಿಸಿ, ಮೆಟ್ರೋಗೆ ಅವಕಾಶ ನೀಡಿಲ್ಲ. ಹೀಗಾಗಿ ಜನರು ಪರದಾಡುವಂತಾಗಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಓಲಾ, ಉಬರ್, ಟ್ಯಾಕ್ಸಿ ಹಾಗೂ ಆಟೋ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಆಟೋ ಮತ್ತು ಟ್ಯಾಕ್ಸಿಗಳು ಕೂಡ ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಬಿಬಿಎಂಪಿ ಷರತ್ತುಗಳನ್ನು ವಿಧಿಸಿದೆ.

ಆನ್‌ ಲಾಕ್ ಎಂದು ಭಾವಿಸಿ ಷರತ್ತುಗಳನ್ನು ಪಾಲಿಸದಿದ್ದರೆ ವಾಹನಕ್ಕೆ ದಂಡ ಬೀಳುತ್ತೆ. ಇಲ್ಲವೇ ವಾಹನವೇ ಸೀಜ್ ಆಗಲಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಆರು ನಿಯಮಗಳನ್ನು ಪಾಲಿಸಲು ಚಾಲಕರಿಗೆ ಸೂಚನೆ ನೀಡಲಾಗಿದೆ. ಆದರ ಪ್ರಕಾರ ಲಸಿಕೆ ಪಡೆದಿರುವ ಆಟೋ ಮತ್ತು ಟ್ಯಾಕ್ಸಿ ಚಾಲಕರು ಮಾತ್ರ ವಾಹನ ಚಲಾವಣೆ ಮಾಡಬಹುದು. ಲಸಿಕೆ ಪಡೆದಿರುವ ಬಗ್ಗೆ ಪೊಲೀಸರು ಇಲ್ಲವೇ ಬಿಬಿಎಂಪಿ ಅಧಿಕಾರಿಗಳು ಕೇಳಿದ ಕೂಡಲೇ ಲಸಿಕೆ ಹಾಕಿಸಿಕೊಂಡಿರುವ ದಾಖಲೆ ಸಂದೇಶ ತೋರಿಸಬೇಕು.

 Bengaluru : Six rules are mandatory for driving an auto and taxi in BBMP limits

ಇನ್ನು ವಾಹನಗಳಲ್ಲಿ ಸಾರ್ವಜನಿಕರು ಪ್ರಯಾಣಿಸುವ ಕಾರಣ, ವಾಹನವನ್ನು ಪದೇ ಪದೇ ಮುಟ್ಟುವ ಜಾಗಗಳಲ್ಲಿ ಸ್ಯಾನಿಟೈಸ್ ಮಾಡಬೇಕು. ಪ್ರಯಾಣಿಕರು ಹಾಗೂ ಚಾಲಕ ನಡುವೆ ಪರದೆ ಹಾಕಿರಬೇಕು. ಇಬ್ಬರಿಗಿಂತಲೂ ಹೆಚ್ಚು ಪ್ರಯಾಣಿಕರನ್ನು ಕೂರಿಸುವಂತಿಲ್ಲ. ಮಾಸ್ಕ್ ಹಾಕದ ಪ್ರಯಾಣಿಕರು ಸಾರ್ವಜನಿಕ ಸಾರಿಗೆ ಬಳಸುವಂತಿಲ್ಲ. ಆಟೋ ಹಾಗೂ ಟ್ಯಾಕ್ಸಿ ಚಾಲಕರು ಕೂಡ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಈ ನಿಯಮ ಪಾಲಿಸಿದರೆ ಮಾತ್ರ ಆಟೊ ಮತ್ತು ಟ್ಯಾಕ್ಸಿ ಚಾಲನೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ರಸ್ತೆಗೆ ಇಳಿದ ಆಟೋಗಳು: ಕೊರೊನಾ ಅವಧಿಯಲ್ಲಿಯೂ ಒಲಾ, ಉಬರ್ ಕಾರ್ಪೋರೇಟ್ ಟ್ಯಾಕ್ಸಿ ಸೇವೆಗೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಲಾಕ್ ಡೌನ್ ನಿಯಮ ಸಡಿಲಿಸಿರುವ ಕಾರಣ ಬಹುತೇಕ ಆಟೋ ಚಾಲಕರು ಇದೀಗ ದುಡಿಮೆಗೆ ಇಳಿದಿದ್ದಾರೆ.

Recommended Video

ನಮ್ ಹೊಟ್ಟೆ ತುಂಬಿಲ್ಲ ಅಂದ್ರು ಗಾಡಿ ಹೊಟ್ಟೆ ತುಂಬಿಸಬೇಕು | Oneindia Kannada

''ನಿರೀಕ್ಷಿತ ಪ್ರಮಾಣದಷ್ಟು ಆಟೋ ನಂಬಿ ಬರುತ್ತಿಲ್ಲ. ಬಹುತೇಕರು ಸ್ವಂತ ಸಾರಿಗೆಗೆ ಮೊರೆ ಹೊಗಿದ್ದು, ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯಾದರೂ, ಆಟೋ ಬಾಡಿಗೆ ಕೇಳುವರೆ ಕಡಿಮೆಯಾಗಿದ್ದಾರೆ. ಕೊರೊನಾ ಲಾಕ್ ಡೌನ್ ನಿಯಮ ಪೂರ್ಣ ಸಡಿಲಿಸದ ಹೊರತು ಆಟೋ ಚಾಲಕರು ಒಂದು ದಿನದ ಅನ್ನಕ್ಕೆ ಆಗುವಷ್ಟು ಹಣ ದುಡಿಯಲು ಕಷ್ಟ ಆಗುತ್ತಿದೆ," ಎನ್ನುತ್ತಾರೆ ಮಂಜುನಾಥನಗರದ ಆಟೋ ಚಾಲಕ ರಮೇಶ್.

English summary
Covid 19 Lock down: six rules are mandatory for driving ab auto and taxi in Bengaluru know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X