ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್19 ಯುದ್ಧದಲ್ಲಿ ಬಿಬಿಎಂಪಿ ಸೋಲಿಗೆ 6 ಕಾರಣ!

|
Google Oneindia Kannada News

ಬೆಂಗಳೂರು, ಜುಲೈ 21: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಒಂದು ಕಾಲದಲ್ಲಿ ಮಹಾಮಾರಿ ಕೊರೊನಾಕ್ಕೆ ಬೇಲಿ ಹಾಕಿತ್ತು. ಈಗ ಕೊರೊನಾ ಆರ್ಭಟದೆದುರು ಬಿಬಿಎಂಪಿ ಶರಣಾಗಿದೆ. ಹತ್ತು ಹಲವು ವಿಧಾನಗಳನ್ನು ಅನುಸರಿಸಿದರೂ ಕೊವಿಡ್ ಸೋಂಕು ಹರಡುವ ಪ್ರಮಾಣ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಹಲವು ಕಾರಣಗಳು ಕಂಡು ಬಂದರೂ ಸಮನ್ವಯ ಕೊರತೆ ಮುಖ್ಯ ಕಾರಣ ಎನಿಸಿಕೊಂಡಿದೆ.

Recommended Video

ದಕ್ಷಿಣ ಕನ್ನಡದಲ್ಲಿ ಮತ್ತೆ ಲಾಕ್ ಡೌನ್ !?

ಬಿಬಿಎಂಪಿ ಮೇಯರ್, ಆಯುಕ್ತರು, ಕಾರ್ಪೊರೇಟರ್ ಗಳು ತಮ್ಮ ವಾರ್ಡ್ ಗಳನ್ನು ಸಂರಕ್ಷಿಸುವ ವಿಧಾನಗಳತ್ತ ಯೋಚಿಸದೆ ಸರ್ಕಾರದ ನಿಯಮ ಪಾಲನೆಯೇ ಕರ್ತವ್ಯ ಎಂಬಂತೆ ವಿಧೇಯತೆಯಿಂದ ನಡೆದುಕೊಂಡಿದ್ದು ಪರಿಸ್ಥಿತಿ ಉಲ್ಬಣಿಸುವಂತೆ ಮಾಡಿದೆ.

ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ

ಬಿಬಿಎಂಪಿ ಆಯುಕ್ತ ಬಿಎಚ್ ಅನಿಲ್ ಕುಮಾರ್ ಅವರನ್ನು ಬದಲಾಯಿಸಿ ಎನ್ ಮಂಜುನಾಥ್ ಪ್ರಸಾದ್ ರನ್ನು ಕರೆ ತರಲಾಗಿದೆ. ಇದಕ್ಕೂ ಮುನ್ನ ಕೊವಿಡ್ ವಾರ್ ರೂಮ್ ಕೂಡಾ ಹಲವು ಅಧಿಕಾರಿಗಳನ್ನು ಕಂಡಿದ್ದಾಗಿದೆ. ಆರೋಗ್ಯ ಮಿತ್ರಕ್ಕೂ ಮುನ್ನ ಕೋವಿಡ್ ವಾಚ್, ವಾರ್ಡ್ ಮಟ್ಟದ ಸಹಾಯವಾಣಿ, ಬೂತ್ ಮಟ್ಟದ ವಾರಿಯರ್ಸ್ ಎಲ್ಲವನ್ನು ನೋಡಿದ್ದಾಗಿದೆ..

ಬಿಬಿಎಂಪಿ ಅನುಸರಿಸಿದ ವಿಧಾನ ಹಾಗೂ ವೈಫಲ್ಯದ ಬಗ್ಗೆ ಮಾಹಿತಿ ಮುಂದೆ ಓದಿ..

ಸಮನ್ವಯದ ಕೊರತೆ

ಸಮನ್ವಯದ ಕೊರತೆ

ಕೋವಿಡ್19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಹಾಗೂ ಇತರೆ ಸರ್ಕಾರಿ ಏಜೆನ್ಸಿ ನಡುವೆ ಸಮನ್ವಯದ ಕೊರತೆ ಆರಂಭದಿಂದಲೂ ಕಂಡು ಬಂದಿದೆ. ಬಿಬಿಎಂಪಿ ಮೇಯರ್ ಹಾಗೂ ಆಯುಕ್ತರ ನಡುವೆಯೇ ಸರಿಯಾದ ಸಂವಹನ ಕಂಡು ಬಂದಿರಲಿಲ್ಲ. ಕೊನೆಗೆ ಆಯುಕ್ತರ ಬದಲಾವಣೆಯನ್ನು ಕಂಡಿದ್ದಾಗಿದೆ. ಬಿಬಿಎಂಪಿ ರಿಯಲ್ ಟೈಮ್ ಡೇಟಾವನ್ನು ವಾರ್ ರೂಮ್ ಗೆ ನೀಡದ ಕಾರಣ ಕಂಟೈನ್ಮೆಂಟ್ ಜೋನ್ ನಿಯಂತ್ರಣ, ನಿರ್ವಹಣೆ ವಿಳಂಬವಾಗಿ ಗೊಂದಲವಾಗಿದೆ.

ಬಿಬಿಎಂಪಿ ಆಯುಕ್ತರ ವರ್ಗಾವಣೆಗೆ ಕಾರಣ ಬಿಚ್ಚಿಟ್ಟ ಆರ್ ಅಶೋಕ್ಬಿಬಿಎಂಪಿ ಆಯುಕ್ತರ ವರ್ಗಾವಣೆಗೆ ಕಾರಣ ಬಿಚ್ಚಿಟ್ಟ ಆರ್ ಅಶೋಕ್

ಬಾಡಿಗೆ ಬೆಡ್ ಗೊಂದಲ

ಬಾಡಿಗೆ ಬೆಡ್ ಗೊಂದಲ

ಬಿಐಇಸಿಯಲ್ಲಿ 10,100 ಬೆಡ್ ಗಳುಳ್ಳ ಬೃಹತ್ ಕೊವಿಡ್ ಕೇರ್ ಸೆಂಟರ್ ಸ್ಥಾಪಿಸಿ ಬೆನ್ನು ತಟ್ಟಿಕೊಂಡ ಸರ್ಕಾರ ಮೂಲ ಸೌಕರ್ಯ ಒದಗಿಸಲು ವಿಫಲವಾಯಿತು. ಪ್ರತಿ ಬೆಡ್ ಗೆ 800 ರು ಕೊಟ್ಟು ಖಾಸಗಿ ಆಸ್ಪತ್ರೆಗಳಿಂದ ಬಾಡಿಗೆಗೆ ತರುವ ಯೋಜನೆಯನ್ನು ಆಯುಕ್ತರು ಅನುಷ್ಠಾನಗೊಳಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ಬಿಬಿಎಂಪಿ ವಲಯವಾರು ಉಸ್ತುವಾರಿ ವಹಿಸಿಕೊಂಡಿದ್ದ ಸಚಿವರು ಹೊಣೆ ಎಂಬುದು ಕಾರಣ. ಸುಮಾರು 200 ಕೋಟಿ ರು ಹಗರಣ ಇದು ಎಂದು ವಿಪಕ್ಷಗಳು ಕೂಗೆತ್ತಿದ್ದರೂ ಪರಿಸ್ಥಿತಿ ಬದಲಾಗಲಿಲ್ಲ.

ಲಾಕ್ಡೌನ್, ಸೀಲ್ ಡೌನ್, ಪರೀಕ್ಷೆ ಹೆಚ್ಚಳ ಗೊಂದಲ

ಲಾಕ್ಡೌನ್, ಸೀಲ್ ಡೌನ್, ಪರೀಕ್ಷೆ ಹೆಚ್ಚಳ ಗೊಂದಲ

ಲಾಕ್ಡೌನ್, ಸೀಲ್ ಡೌನ್, ಪರೀಕ್ಷೆ ಹೆಚ್ಚಳ ಎಲ್ಲಾ ನಿರ್ಣಯಗಳು ಗೊಂದಲವಾಗಿಬಿಟ್ಟಿದೆ. ಲಾಕ್ಡೌನ್ ವಿಸ್ತರಿಸಿ, ಸೋಂಕು ಹರಡದಂತೆ ತಡೆಗಟ್ಟಿ ಎಂದು ತಜ್ಞರು ನೀಡಿದ ಸಲಹೆಯನ್ನು ಬದಿಗೊತ್ತಿ, ದುಡ್ಡು ಮಾಡುವುದೇ ಮುಖ್ಯ ಎಂದು ಸರ್ಕಾರ ಖಡಕ್ಕಾಗಿ ಹೇಳಿದ್ದು, ಕೊವಿಡ್ 19 ವೇಗ ಹೆಚ್ಚಳ ತಡೆಗಟ್ಟಲು ಯಾವ ಮಾರ್ಗ ಅನುಸರಿಸಬೇಕು ಎಂಬುದು ತಿಳಿಯದ ಸರ್ಕಾರ, ನಿಯಂತ್ರಣಕ್ಕಾಗಿ ಇದ್ದ ಅವಕಾಶವನ್ನೆಲ್ಲ ಆರ್ಥಿಕ ಕಾರಣದಿಂದ ಸರ್ಕಾರ ಬದಿಗೊತ್ತಿದ್ದು ಮಾರಕವಾಗತೊಡಗಿದೆ.

ಬೆಂಗಳೂರಿನ ಪ್ರತಿ ವಾರ್ಡ್‌ನಲ್ಲಿ ರ‍್ಯಾಪಿಡ್‌ ಆ್ಯಂಟಿಜೆನ್ ಟೆಸ್ಟ್‌ಬೆಂಗಳೂರಿನ ಪ್ರತಿ ವಾರ್ಡ್‌ನಲ್ಲಿ ರ‍್ಯಾಪಿಡ್‌ ಆ್ಯಂಟಿಜೆನ್ ಟೆಸ್ಟ್‌

ಅಧಿಕಾರಿಗಳ ಮೇಲೆ ರಾಜಕಾರಣಿಗಳ ಒತ್ತಡ

ಅಧಿಕಾರಿಗಳ ಮೇಲೆ ರಾಜಕಾರಣಿಗಳ ಒತ್ತಡ

ಬಿಬಿಎಂಪಿ ಆಯುಕ್ತರು ಸೇರಿದಂತೆ ಅಧಿಕಾರಿಗಳ ಮೇಲೆ ರಾಜಕಾರಣಿಗಳ ಒತ್ತಡ ಹೆಚ್ಚಾಗಿದ್ದರಿಂದ ಬೆಂಗಳೂರಿನ ವಿವಿಧ ಕಾಮಗಾರಿಗಳ ಮೇಲೆ ನಿಯಂತ್ರಣ ಹೊಂದಿದ್ದ ಸಚಿವರುಗಳು ಆಯುಕ್ತರ ಮೇಲೆ ಒತ್ತಡ ಹೇರಿ ಕೊವಿಡ್ 19ಗೆ ಸಂಬಂಧಪಡದ ಇತರೆ ಕಾಮಗಾರಿಗಳಿಗೆ ಸಂಬಂಧಿಸಿದ ಕಡತಗಳನ್ನು ಕ್ಲಿಯರ್ ಮಾಡುವಂತೆ ಒತ್ತಡ ಹೇರಿದ ಆರೋಪಗಳಿವೆ. ಈ ತಿಕ್ಕಾಟದಲ್ಲಿ ಬಲಿಯಾಗಿದ್ದು ಮಾತ್ರ ಬೆಂಗಳೂರಿನ ಜನತೆ.

ಕೋವಿಡ್-19: ಬಾಡಿಗೆ ಹಾಸಿಗೆ ಖರೀದಿಗೆ ಸರ್ಕಾರದ ಆದೇಶ!ಕೋವಿಡ್-19: ಬಾಡಿಗೆ ಹಾಸಿಗೆ ಖರೀದಿಗೆ ಸರ್ಕಾರದ ಆದೇಶ!

English summary
Lack of coordination among government agencies and ministers, transfer of officers Chaos galore with Bruhat Bengaluru Mahanagara Palike (BBMP). Here are Six reasons how BBMP lost Covid-19 pandemic battle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X