• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಸಾಜ್ ಪಾರ್ಲರ್ ಹೆಸರಿನಲ್ಲಿ ಸುಲಿಗೆ ಮಾಡಿದ್ದ ಆರು ಮಂದಿ ಬಂಧನ

|

ಬೆಂಗಳೂರು, ಜನವರಿ 22: ಮಸಾಜ್ ಪಾರ್ಲರ್ ನಲ್ಲಿ ಮಜಾ ಮಾಡೋಕೆ ಹೋಗಿದ್ದ ಯುವಕನಿಗೆ ಯುವತಿ ಜತೆಗಿರುವ ಅಶ್ಲೀಲ ಚಿತ್ರ ತೋರಿಸಿ ಸುಲಿಗೆ ಮಾಡಿದ್ದ ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಶಿವಕುಮಾರ್, ಮೈಕಲ್ ರಾಜ್ ರಘು ಸೆಲ್ವರಾಜ್, ತಿಮ್ಮಪ್ಪ ಹಾಗೂ ಮನು ಕುಮಾರ್ ಬಂಧಿತ ಆರೋಪಿಗಳು.

ಜಯನಗರದ ನಿವಾಸಿ ಪ್ರೀತಮ್ ಬಾಡಿ ಮಸಾಜ್ ಮಾಡಿಸಿಕೊಳ್ಳಲು ಅಂತರ್ಜಾಲ ತಾಣದಲ್ಲಿನಂಬರ್ ಹುಡುಕಿ ಕರೆ ಮಾಡಿದ್ದರು. ಜಯನಗರದ ಪಂಪ್ ಹೌಸ್ ಬಳಿ ಬರುವಂತೆ ಮೊಬೈಲ್ ನಲ್ಲಿ ಪ್ರೀತಮ್ ಗೆ ಸೂಚಿಸಲಾಗಿತ್ತು. ಅದರಂತೆ ಪ್ರೀತಮ್ ಪಂಪ್ ಹೌಸ್ ಬಳಿ ಬಂದು ಕಾಯುತ್ತಿದ್ದರು. ಈ ವೇಳೆ ಕಾರಿನಲ್ಲಿ ಹುಡುಗಿಯನ್ನು ಕೂರಿಸಿ ಹದಿನೈದು ಸಾವಿರ ತೆಗೆದುಕೊಂಡಿದ್ದರು. ಆನಂತರ ಮನೆಯೊಂದಕ್ಕೆ ಕರೆದುಕೊಂಡು ಹೋಗಿ ಯುವತಿಯನ್ನು ಬಿಟ್ಟಿದ್ದರು. ಪ್ರೀತಮ್ ನ ಖಾಸಗಿ ಕ್ಷಣಗಳ ವಿಡಿಯೋ ಮತ್ತು ಚಿತ್ರ ತೆಗೆದಿದ್ದ ಕಿರಾತಕರು ನಾಲ್ಕು ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇಲ್ಲದಿದ್ದರೆ ಯುವತಿಯೊಂದಿಗೆ ಇರುವ ಅಶ್ಲೀಲ ಚಿತ್ರಗಳನ್ನು ಸಂಬಂಧಿಕರಿಗೆ ಕಳುಸುವುದಾಗಿ ಹೆದರಿಸಿದ್ದಾರೆ.

ಮರ್ಯಾದೆಗೆ ಅಂಜಿದ ಪ್ರೀತಮ್ ತನ್ನಲ್ಲಿದ್ದ ಚಿನ್ನದ ಸರ, ಉಂಗುರ ಹಾಗೂ ಒಂದೂವರೆ ಲಕ್ಷ ರೂಪಾಯಿ ಹಣವನ್ನು ಕೊಟ್ಟಿದ್ದಾರೆ. ಇಷ್ಟಾದರೂ ಬಿಡದ ಕಿರಾತಕರು ಲಾಡ್ಜ್ ಗೆ ಕರೆದುಕೊಂಡು ಹೋಗಿ ಕೂಡಿ ಹಾಕಿದ್ದಾರೆ. ಪ್ರೀತಮ್ ನ ಸ್ನೇಹಿತನಿಗೆ ಕರೆ ಮಾಡಿ ಖಾಸಗಿ ಹೋಟೆಲ್ ಗೆ ಕರೆಸಿಕೊಂಡು ಒಂದೂವರೆ ಲಕ್ಷ ರೂಪಾಯಿ ಸುಲಿಗೆ ಮಾಡಿ ಬಿಟ್ಟು ಕಳಿಸಿದ್ದಾರೆ. ಇದರಿಂದ ನೊಂದ ಪ್ರೀತಮ್ ಕುಮಾರಸ್ವಾಮಿ ಬಡಾವಣೆ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಹಣ ಹಾಗೂ ಚಿನ್ನದ ಉಂಗುರ ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಮಸಾಜ್ ಪಾರ್ಲರ್ ಗೆ ಬರುವರ ವಿಡಿಯೋ ಮಾಡಿ ಸುಲಿಗೆ ಮಾಡುವ ಗ್ಯಾಂಗ್ ಗಳು ಕೂಡ ಹುಟ್ಟಿಕೊಂಡಿವೆ. ಬಹುತೇಕರು ಮರ್ಯಾದೆಗೆ ಅಂಜಿ ದೂರು ನೀಡುವುದಿಲ್ಲ. ಮಸಾಜ್ ಪಾರ್ಲರ್ ಗೆ ಹೋಗಿ ಸುಲಿಗೆಗೆ ಒಳಗಾಗುವರನ್ನು ಪೊಲೀಸರು ಬಯ್ಯುವುದು ಸಾಮಾನ್ಯ. ಹೀಗಾಗಿ ಎಷ್ಟೋ ಪ್ರಕರಣಗಳು ವರದಿಯೇ ಆಗುವುದಿಲ್ಲ. ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿರುವ ಆರೋಪಿಗಳು ಹಲವಾರು ಮಂದಿಗೆ ಇದೇ ರೀತಿ ಸುಲಿಗೆ ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

English summary
Kumaraswamy Layout Police have arrested six accused that honey trapped, extorted spa visitors. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X