ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಿಂದ ಮೈಸೂರಿಗೆ ವಾರದಲ್ಲಿ 6 ದಿನ ಮೆಮು ರೈಲು ಸಂಚಾರ

|
Google Oneindia Kannada News

ಬೆಂಗಳೂರು, ಜುಲೈ 20: ವಾರಕ್ಕೆ 4 ದಿನ ಮಾತ್ರ ಬೆಂಗಳೂರು-ಮೈಸೂರು ನಡುವೆ ಸಂಚರಿಸುತ್ತಿದ್ದ ಮೆಮು ರೈಲು ಇನ್ನುಮುಂದೆ ಆರು ದಿನಗಳ ಕಾಲ ಸಂಚರಿಸಲಿದೆ.

ಹೌದು ಈ ಕುರಿತು ಸಂಸದ ಪ್ರತಾಪ್ ಸಿಂಹ್ ಸ್ಪಷ್ಟನೆ ನೀಡಿದ್ದು, ಬೆಂಗಳೂರು-ಮೈಸೂರು ನಡುವೆ ವಾರದಲ್ಲಿ ನಾಲ್ಕು ದಿನ ಸಂಚರಿಸುತ್ತಿದ್ದ ಮೆಮು ರೈಲು ಜುಲೈ 27ರಿಂದ ಭಾನುವಾರ ಹೊರತುಪಡಿಸಿ ವಾರದ ಆರು ದಿನಗಳೂ ಸಂಚರಿಸಲಿದೆ.

ಬೆಂಗಳೂರು-ಮೈಸೂರು ನಡುವೆ ಇನ್ನೆರಡು ಮೆಮು ರೈಲು ಸಂಚಾರ ಬೆಂಗಳೂರು-ಮೈಸೂರು ನಡುವೆ ಇನ್ನೆರಡು ಮೆಮು ರೈಲು ಸಂಚಾರ

ಮೆಮು ರೈಲು ಸಂಚಾರದ ವೇಳಾಪಟ್ಟಿಯಲ್ಲೂ ಭಾರಿ ಬದಲಾವಣೆ ಮಾಡಲಾಗಿದೆ. ಮಧ್ಯಮ ವರ್ಗದವರಿಗೆ ಅನುಕೂಲವಾಗುವಂತೆ ನಿಗದಿ ಮಾಡಲಾಗಿದೆ ಎನ್ನಲಾಗಿದೆ. ಕಾಚಿಗುಡ ಸೂಪರ್‌ಫಾಸ್ಟ್‌ ರೈಲು ಬೆಂಗಳೂರಿನಿಂದ ಮೈಸೂರಿಗೆ ವಿಸ್ತರಣೆಯಾದ ಬಳಿಕ ಹೈದರಾಬಾದ್ ಜತೆಗಿನ ವಹಿವಾಟು ಉದ್ಯಮ ವಲಯಕ್ಕೆ ಸುಲಲಿತವಾಗಲಿದೆ .

 Six days menu trains service between Bengaluru-Mysuru

ಇದೇ ರೀತಿ ಚೆನ್ನೈ ಎಕ್ಸ್‌ಪ್ರೆಸ್‌ ವಿಸ್ತರಣೆಯಾದ ಬಳಿಕ ಐಟಿ ಉದ್ಯೋಗಿಗಳಿಗೆ ವರವಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ಸಂಜೆ 5.20ಕ್ಕೆ ಹೊರಟು ರಾತ್ರಿ 8.20ಕ್ಕೆ ತಲುಪಲಿದೆ. ಮೈಸೂರಿನಿಂದ ಬೆಂಗಳೂರಿಗೆ ರಾತ್ರಿ 8.30ಕ್ಕೆ ಹೊರಟು ರಾತ್ರಿ 11.25ಕ್ಕೆ ತಲುಪಲಿದೆ ಎಂದು ಸಂಸದ ಪ್ರತಾಪ್ ಸಿಂಹ ತನ್ನ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

English summary
Bengaluru-mysuru passangers will get menu train service for six days in a week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X