ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೂನ್ 2ನೇ ವಾರದಲ್ಲಿ ಆರು ಬೋಗಿಯ ಮೆಟ್ರೋ ನಿರೀಕ್ಷೆ

By Nayana
|
Google Oneindia Kannada News

ಬೆಂಗಳೂರು, ಮೇ 28: ನಮ್ಮ ಮೆಟ್ರೋ ಆರು ಬೋಗಿ ಜೋಡಣೆ ಕಾರ್ಯದ ಕುರಿತು ಪ್ರಯಾಣಿಕರು ಕಾತುರರಾಗಿದ್ದಾರೆ. ಕಳೆದ ಎರಡು ತಿಂಗಳಿಂದ ಎಂದಿನಿಂದ ಆರು ಬೋಗಿ ಅಳವಡಿಸುತ್ತಾರೆ, ಪ್ರಯಾಣಿಕರ ದಟ್ಟಣೆ ಯಾವಾಗ ಕಡಿಮೆಯಾಗುತ್ತುದೆ ಎನ್ನುವ ಕುತೂಹಲ ಎಲ್ಲರಲ್ಲಿದೆ.

ಆದರೆ ಭಾರ ಹೊತ್ತು ಆರು ಬೋಗಿಗಳ ರೈಲು ಸಂಚರಿಸುವ ಸಾಮರ್ಥ್ಯ ಹೊಂದಿದೆಯಾ ಎಂದು ತಿಳಿಯಲು ಎಲೆಕ್ಟ್ರೊ ಮ್ಯಾಗ್ನೆಟಿಕ್ ಕಂಪಾಟಿಬಿಲಿಟಿ ಪರೀಕ್ಷೆಗೆ ಒಳಪಡಿಸಲಾಗಿದೆ. ಅದರ ವರದಿ ತಡವಾಗಿರುವುದರಿಂದ ಮೇ ತಿಂಗಳಾಂತ್ಯಕ್ಕೆ ಆರು ಬೋಗಿ ಮೆಟ್ರೋ ರೈಲು ಸೇವೆ ಲಭ್ಯವಾಗುವುದಿಲ್ಲ.

6 ಬೋಗಿ ಮೆಟ್ರೋ ರೈಲಿಗೆ ಸುರಕ್ಷತಾ ಕಮಿಷನರ್‌ ಅನುಮತಿ ಇನ್ನೂ ಸಿಕ್ಕಿಲ್6 ಬೋಗಿ ಮೆಟ್ರೋ ರೈಲಿಗೆ ಸುರಕ್ಷತಾ ಕಮಿಷನರ್‌ ಅನುಮತಿ ಇನ್ನೂ ಸಿಕ್ಕಿಲ್

ಇಎಂಸಿ ವರದಿ ನಂತರ ಅದನ್ನು ರೈಲ್ವೆ ಸುರಕ್ಷತಾ ಆಯುಕ್ತರ ಒಪ್ಪಿಗೆಗೆ ಕಳುಹಿಸಲಾಗುತ್ತದೆ. ಒಟ್ಟಾರೆ ಜೂನ್ ಎರು ಅಥವಾ ಮೂರನೇ ವಾರದಲ್ಲಿ ಆರು ಬೋಗಿಯ ಮೆಟ್ರೋ ಪ್ರಯಾಣಿಕರಿಗೆ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Six coach of Namma Metro service still waiting is on!

ಆರು ಬೋಗಿಗಳ ರೈಲು ನಿರ್ದಿಷ್ಟ ಪ್ರಮಾಣದ ತೂಕವನ್ನು ಹೊತ್ತು ಸಂಚರಿಸಬಲ್ಲದೇ ಎಂಬುದನ್ನು ಖಾತರಿಪಡಿಸಿಕೊಳ್ಳಲಾಗುತ್ತದೆ. ಬ್ಯಾಗ್‌ಗಳನ್ನು ಇಟ್ಟು ಸಂಚರಿಸುವ ಮೂಲಕ ರೈಲಿನ ಬೋಗಿಯ ಒಯ್ಯುವ ಸಾಮರ್ಥ್ಯವನ್ನು ಪರೀಕ್ಷೆಗೊಳಪಡಿಸಲಾಗಿದೆ.

ನಿಗದಿತ ಭಾರ ಹೊತ್ತು, ನಿಗದಿತ ದೂರವನ್ನುಆರು ಬೋಗಿಯ ರೈಲು ಯಶ್ವಿಯಾಗಿ ಕ್ರಮಿಸಲಿದೆಯೇ ಎನ್ನುವುದು ಎಂಇಸಿ ಪರೀಕ್ಷೆಯಿಂದ ತಿಳಿಯುತ್ತದೆ. ಈಗಾಗಲೇ ಈ ಪರೀಕ್ಷೆಯನ್ನು ಪೂರ್ಣಗೊಳಿಸಲಾಗಿದ್ದು, ರೈಲ್ವೆ ಸುರಕ್ಷತಾ ಆಯೋಗಕ್ಕೆ ವರದಿ ಕಳುಹಿಸಲಾಗಿದೆ.

English summary
As railway safety commissionaire yet to certify six coach of Namma Metro service, the commuters have to wait for at least a month for extended service, BMRCL sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X