ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರೋ ಇಂಡಿಯಾ ಅಗ್ನಿ ಅವಘಡ: 6 ಕಾರುಗಳ ಮಾಲೀಕರ ಸುಳಿವೇ ಇಲ್ಲ

|
Google Oneindia Kannada News

ಬೆಂಗಳೂರು, ಮಾರ್ಚ್ 7: ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ವೇಳೆ ಸುಟ್ಟು ಹೋಗಿದ್ದ 277 ಕಾರುಗಳ ಪೈಕಿ ಆರು ಕಾರುಗಳ ಮಾಲಿಕತ್ವ ಹಾಗೂ ಮಾಲೀಕರು ಪತ್ತೆಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಯಲಹಂಕದ ವಾಯುನೆಲೆಯಲ್ಲಿ ನಡೆದ ಏರೋ ಇಂಡಿಯಾ 2019 ವೈಮಾನಿಕ ಪ್ರದರ್ಶನದ ವೇಳೆ ಗೇಟ್ ನಂಬರ್ 5 ಪಾರ್ಕಿಂಗ್ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು 277 ಕಾರುಗಳು ಸುಟ್ಟು ಕರಕಲಾಗಿತ್ತು.

ಭಸ್ಮವಾದ ಕಾರಿನಲ್ಲಿ, ದಾಖಲೆ, ಪಾಸ್‌ಪೋರ್ಟ್, ಮನೆ ಕೀಗಾಗಿ ಹುಡುಕಾಟ ಭಸ್ಮವಾದ ಕಾರಿನಲ್ಲಿ, ದಾಖಲೆ, ಪಾಸ್‌ಪೋರ್ಟ್, ಮನೆ ಕೀಗಾಗಿ ಹುಡುಕಾಟ

ಕಾರುಗಳು ಸುಟ್ಟು ಸಂಪೂರ್ಣ ಕರಕಲಾಗಿದ್ದು, ಎಂಜಿನ್ ಸಂಖ್ಯೆ, ಚಾಸೀಸ್ ಸಂಖ್ಯೆಯನ್ನು ಕೂಡ ಗುರುತಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಾಲಿಕತ್ವ ಗೊತ್ತಾಗುತ್ತಿಲ್ಲ. ಅಲ್ಲದೇ ಆ ಕಾರುಗಳನ್ನು ತಮ್ಮದು ಎಂದು ಹೇಳಿಕೊಂಡು ಯಾರೂ ಕೂಡ ಬಂದಿಲ್ಲ.

Six car owner didnt claim their car after Aero India firing incident

ಹೀಗಾಗಿ ಕಾರುಗಳ ವಿಲೇವಾರಿ ಮತ್ತು ವಿಮೆ ಕ್ಲೇಮ್ ಆಗುತ್ತಿಲ್ಲ ಎಂದು ಯಲಹಂಕ ಪೊಲೀಸರು ತಿಳಿಸಿದ್ದಾರೆ. ಕಾರುಗಳು ಮಾಲೀಕರಿಗೆ ತ್ವರಿತವಾಗಿ ವಿಮೆ ಕ್ಲೇಮ್ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ವಿಮಾ ಕಂಪನಿಗಳು ಹಾಗೂ ಸಾರಿಗೆ ಇಲಾಖೆ ಮತ್ತು ಪೊಲೀಸರ ಸಹಯೋಗದಲ್ಲಿ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
Bengaluru police have clarified that six car owner didn't came nad claim their car ownership. These cars are completely destroyed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X