ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೈಟ್ ಅಳತೆ ಇನ್ನುಮುಂದೆ ಆನ್‌ಲೈನ್‌ನಲ್ಲೇ ಸಿಗುತ್ತೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 20: ಒಂದೇ ನಿವೇಶನ ಇಬ್ಬರಿಗೆ ಹಂಚಿಕೆ, ಮಾರಾಟ, ಬೋಗಸ್ ಪ್ರಕರಣ ತಡೆಗೆ ಬಿಡಿಎ ಕ್ರಮ ಕೈಗೊಂಡಿದೆ.

ಆನ್‌ಲೈನ್‌ನಲ್ಲೇ ಇನ್ನುಮುಂದೆ ಸೈಟ್ ಅಳತೆ ಸೇರಿದಂತೆ ಇತರೆ ಮಾಹಿತಿ ಲಭ್ಯವಾಗಲಿದೆ. ಆಡಳಿತದಲ್ಲಿ ಪಾರದರ್ಶಕತೆ ತರಲು ಮುಂದಾಗಿರುವ ಬಿಡಿಎ, ನಿವೇಶನಗಳ ಖಚಿತ ಸಳತೆ ವರದಿಯನ್ನು(ಇ-ಆಫೀಸ್) ಮೂಲಕ ನೀಡಲಿದೆ ಎಂದು ಬಿಡಿಎ ಆಯುಕ್ತ ಡಾ. ಜಿ.ಸಿ. ಪ್ರಕಾಶ್ ತಿಳಿಸಿದ್ದಾರೆ.

ಬಿಡಿಎ ಭೂಸ್ವಾಧೀನಪಡಿಸಿಕೊಂಡು ರಚಿಸಿರುವ ಬಡಾವಣೆಗಳಲ್ಇ ನಿವೇಶನಗಳನ್ನು ರಚಿಸಿ,ಅರ್ಹರಿಂದ ಕಾಲಕಾಲಕ್ಕೆ ಅರ್ಜಿ ಆಹ್ವಾನಿಸಿ , ವಸತಿ ನಿವೇಶನಗಳನ್ನು ನೀಡುವ ಉದ್ದೇಶದಿಂದ ಇ-ಆಪೀಸ್ ರಚಿಸಲಾಗಿದೆ.

Site Measurement Is Only Available Online

ಈವರೆಗೂ ಬಿಡಿಎ ಕಡತಗಳನ್ನು ಲಿಖಿತ ರೂಪದಲ್ಲಿ ಟಿಪ್ಪಣಿಗಳು ಹಾಗೂ ಹಂಚಿಕೆಯಾಗಿರುವ , ಹಂಚಿಕೆಯಾಗಬೇಕಿರುವ ನಿವೇಶನಗಳ ಬಗ್ಗೆ ಖಚಿತ ಅಳತೆ ವರದಿ, ಆಯವ್ಯಯ ಅಂದಾಜು ವೆಚ್ಚಗಳ ಮಾಹಿತಿಯನ್ನು ಮಂಡಿಸಲಾಗುತ್ತದೆ.ಅದನ್ನು ಸಂಪೂರ್ಣವಾಗಿ ಗಣಕೀಕರಣಗೊಳಿಸಿರುವ ಕ್ರಮ ಕೈಗೊಳ್ಳಲಾಗಿದ್ದು, ಎಲ್ಲಾ ಕಡತಗಳನ್ನು ಸ್ಕ್ಯಾನ್ ಮಾಡಿ ದಾಖಲಿಸಲಾಗುತ್ತದೆ.

ಬಿಡಿಎಯಿಂದ ಹಂಚಿಕೆಯಾಗಿರುವ ಶುದ್ಧ ಕ್ರಯಪತ್ರ ನೋಂದಣಿ, ನಿವೇಶನ ವರ್ಗಾವಣೆ, ನಕ್ಷೆ ಮಂಜೂರಾತಿ , ಬದಲಿ ನಿವೇಶನ ಹಾಗೂ ಇನ್ನಿತರೆ ಕೆಲಸ ಕಾರ್ಯಗಳಿಗೆ ಪ್ರಾಧಿಕಾರಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.

ಒಂದೇ ನಿವೇಶನ ಖಚಿತ ಅಳತೆ ವರದಿಯನ್ನು ಇಬ್ಬರು ಹಂಚಿಕೆದಾರರಿಗೆ ನೀಡಿರುವ ಹಾಗೂ ಕೆಲವು ಖಚಿತ ಅಳತೆ ವರದಿಗಳನ್ನು ನಕಲು ಮಾಡಿರುವ ಪ್ರಕರಣಗಳ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

English summary
The BDA has taken steps to dispose of the bogus case to two people in a single location.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X