ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಎಂಎ ಮಾಲೀಕ ಮನ್ಸೂರ್‌ನ ಈವರೆಗೆ ಜಪ್ತಿ ಆಗಿರುವ ಆಸ್ತಿಯ ವಿವರ

|
Google Oneindia Kannada News

ಬೆಂಗಳೂರು, ಜೂನ್ 18: ಐಎಂಎ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡವು ಐಎಂಎ ಮಳಿಗೆ ಮತ್ತು ಐಎಂಎ ಮಾಲೀಕ ಮನ್ಸೂರ್ ಖಾನ್ ರ ಮೂರನೇ ಹೆಂಡತಿ ಮನೆ ಮೇಲೆ ದಾಳಿ ನಡೆಸಿ ಆಸ್ತಿ ವಶಪಡಿಸಿಕೊಂಡಿತ್ತು. ಈಗ ಅದರ ಮಾಹಿತಿ ಬಿಡುಗಡೆಗೊಳಿಸಿದೆ.

ಎಸ್‌ಐಟಿ ತಂಡವು ನಿನ್ನೆ ಜಯನಗರದಲ್ಲಿರುವ ಐಎಂಎ ಜ್ಯುವೆಲ್ಸ್‌ ಮಳಿಗೆ ಮೇಲೆ ದಾಳಿ ಮಾಡಿದ್ದರು. ಇಲ್ಲಿ 13 ಕೋಟಿ ಮೌಲ್ಯದ ಚಿನ್ನಾಭರಣ, 17.6 ಕೋಟಿ ಮೌಲ್ಯದ 5864 ಕ್ಯಾರೆಟ್ ವಜ್ರ, 1.5 ಕೋಟಿ ಮೌಲ್ಯದ 520 ಕೆಜಿ ಬೆಳ್ಳಿ, 1.5 ಕೋಟಿ ಮೌಲ್ಯದ ಸೆಲ್ಟರ್ ವಜ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಐಎಂಎ ಮನ್ಸೂರ್‌ ಖಾನ್‌ ಪತ್ತೆಗೆ ಇಂಟರ್‌ಪೋಲ್ ನೆರವು ಕೇಳಿದ ಸಿಐಡಿ ಐಎಂಎ ಮನ್ಸೂರ್‌ ಖಾನ್‌ ಪತ್ತೆಗೆ ಇಂಟರ್‌ಪೋಲ್ ನೆರವು ಕೇಳಿದ ಸಿಐಡಿ

ಮನ್ಸೂರ್ ಖಾನ್‌ನ ಮೂರನೇ ವಿಚ್ಛೇದಿತ ಪತ್ನಿಯ ಶಿವಾಜಿನಗರದ ಗುಲ್ಷನ್‌ ಅಪಾರ್ಟ್‌ಮೆಂಟ್‌ನ ಮನೆಯ ಮೇಲೂ ದಾಳಿ ನಡೆಸಿದ್ದ ಎಸ್‌ಐಟಿ, ಅಲ್ಲಿ 39.5 ಲಕ್ಷ ಮೌಲ್ಯದ ಚಿನ್ನಾಭರಣ, 1.5 ಕೆಜಿ ಬೆಳ್ಳಿ, 2.90 ಲಕ್ಷ ನಗದು ವಶಪಡಿಸಿಕೊಂಡಿದ್ದು, ಇವುಗಳೆಲ್ಲದರ ಒಟ್ಟು ಮೌಲ್ಯ 40 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

SIT seized IMA fraud case accused Mansoor Khans property

ಇಷ್ಟಲ್ಲದೆ, ತಿಲಕ್‌ ನಗರದ ಆರ್‌ಕೆ ಗಾರ್ಡನ್‌ನಲ್ಲಿ ಹೊಂದಿರುವ 1.20 ಕೋಟಿ ಮೌಲ್ಯದ ಅಪಾರ್ಟ್‌ಮೆಂಟ್‌ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ.

English summary
SIT today released the information of IMA fraud case accused Mansoor Khan's property seize. SIT raid on IMA Jewels jaynagar and Mansoor Khan's 3rd wife's home and seized 34.43 crore worth property.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X