ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಎಂಎ ಮೇಲೆ ಮುಂದುವರೆದ ಎಸ್‌ಐಟಿ ದಾಳಿ: ಭಾರಿ ಪ್ರಮಾಣದ ಚಿನ್ನ ವಶ

|
Google Oneindia Kannada News

ಬೆಂಗಳೂರು, ಜೂನ್ 20: ಐಎಂಎ ವಂಚನೆ ಪ್ರಕರಣವನ್ನು ಕೈಗೆತ್ತಿಕೊಂಡಿರುವ ರಾಜ್ಯ ಎಸ್‌ಐಟಿ (ವಿಶೇಷ ತನಿಖಾ ತಂಡ)ವು ಇಂದೂ ಸಹ ಐಎಂಎ ಆಭರಣ ಮಳಿಗೆಗಳ ಮೇಲೆ ದಾಳಿ ಮುಂದುವರೆಸಿದೆ.

ಇಂದು ಶಿವಾಜಿನಗರದ ಐಎಂಎ ಚಿನ್ನಾಭರಣ ಮೇಲೆ ದಾಳಿ ನಡೆಸಿದ ಎಸ್‌ಐಟಿಯು ಭಾರಿ ಪ್ರಮಾಣದ ಚಿನ್ನಾಭರಣವನ್ನು ವಶಪಡಿಸಿಕೊಂಡಿದೆ.

ಬೀಗ ಹಾಕಿದ್ದ ಶಿವಾಜಿನಗರದ ಐಎಂಎ ಚಿನ್ನಾಭರಣ ಅಂಗಡಿಯ ಬೀಗ ಮುರಿದು ಒಳ ಪ್ರವೇಶಿಸಿದ ಎಸ್‌ಐಟಿ ತಂಡವು, ಷೋಕೋಸಿನಲ್ಲಿಟ್ಟದ್ದ ಚಿನ್ನದ ಜೊತೆಗೆ ದಾಸ್ತಾನು ಮಾಡಿಡಲಾಗಿದ್ದ ಚಿನ್ನವನ್ನೂ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

SIT raid continue on IMA jewels, lots of gold seized

ಹಲವು ವ್ಯಾಪಾರಿಗಳಿಂದ ಕೆಜಿಗಟ್ಟಲೆ ಚಿನ್ನವನ್ನು ಐಎಂಎ ಖರೀದಿಸಿತ್ತು, ಎನ್ನಲಾಗಿದ್ದು, ಚಿನ್ನದ ಬಿಸ್ಕತ್ತುಗಳು, ವಜ್ರದ ಹರಳುಗಳನ್ನು ಎಸ್‌ಐಟಿಯು ವಶಪಡಿಸಿಕೊಂಡು ತನ್ನ ಸುಪರ್ಧಿಗೆ ತೆಗೆದುಕೊಂಡಿದೆ.

ರೋಷನ್ ಬೇಗ್ ಅಮಾನತಿನ ಹಿಂದಿನ ಬಲವಾದ ಗುಮಾನಿ ಇದೇ! ರೋಷನ್ ಬೇಗ್ ಅಮಾನತಿನ ಹಿಂದಿನ ಬಲವಾದ ಗುಮಾನಿ ಇದೇ!

ಜೂನ್ 18ರಂದು ಜಯನಗರದಲ್ಲಿರುವ ಐಎಂಎ ಆಭರಣ ಮಳಿಗೆ ಮೇಲೆ ಹಾಗೂ ಐಎಂಎ ಮಾಲೀಕ ಮನ್ಸೂರ್‌ ಖಾನ್‌ನ ಮೂರನೇ ಹೆಂಡತಿ ಮನೆ ಮೇಲೆ ದಾಳಿ ನಡೆಸಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಆಸ್ತಿ ಪತ್ರಗಳನ್ನು ಎಸ್‌ಐಟಿ ವಶಕ್ಕೆ ಪಡೆದುಕೊಂಡಿದೆ.

ಐಎಂಎ ಮಾಲೀಕ ಮನ್ಸೂರ್‌ನ ಈವರೆಗೆ ಜಪ್ತಿ ಆಗಿರುವ ಆಸ್ತಿಯ ವಿವರ ಐಎಂಎ ಮಾಲೀಕ ಮನ್ಸೂರ್‌ನ ಈವರೆಗೆ ಜಪ್ತಿ ಆಗಿರುವ ಆಸ್ತಿಯ ವಿವರ

ಇಂದು ಜಾರಿ ನಿರ್ದೇಶನಾಲಯವು ಮನ್ಸೂರ್‌ ಖಾನ್‌ಗೆ ಸಮನ್ಸ್‌ ನೀಡಿದ್ದು, ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ. ಆದರೆ ಮನ್ಸೂರ್ ಖಾನ್ ದೇಶ ಬಿಟ್ಟು ಪರಾರಿ ಆಗಿದ್ದು, ಅವರು ಹಾಜರಾಗುವುದು ಅಸಾಧ್ಯ ಎನ್ನಲಾಗಿದೆ.

English summary
Karnataka SIT raids on IMA jewels Shivajinagar today. SIT seized many kg's of gold. SIT investing IMA fraud case. IMA owner Mansoor Khan flees from India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X