ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೌರಿ ಲಂಕೇಶ್ ಹತ್ಯೆ : 6 ಸಾವಿರ ಪುಟದ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಕೆ

|
Google Oneindia Kannada News

ಬೆಂಗಳೂರು, ನವೆಂಬರ್ 23 : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ. 2017ರ ನವೆಂಬರ್ 5ರಂದು ಗೌರಿ ಲಂಕೇಶ್ ಅವರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು.

ಗೌರಿ ಲಂಕೇಶ್ ಹತ್ಯೆ : 5 ಸಾವಿರ ಪುಟದ ಹೆಚ್ಚುವರಿ ಚಾರ್ಜ್‌ಶೀಟ್ ಸಿದ್ಧ ಗೌರಿ ಲಂಕೇಶ್ ಹತ್ಯೆ : 5 ಸಾವಿರ ಪುಟದ ಹೆಚ್ಚುವರಿ ಚಾರ್ಜ್‌ಶೀಟ್ ಸಿದ್ಧ

ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಶುಕ್ರವಾರ 1ನೇ ಸೆಷನ್ಸ್‌ ಕೋರ್ಟ್‌ಗೆ 6 ಸಾವಿರ ಪುಟಗಳ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸಿದೆ. ತನಿಖಾಧಿಕಾರಿ ಅನುಚೇತ್ ನೇತೃತ್ವದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.

ಗೌರಿ ಲಂಕೇಶ್‌ ಹತ್ಯೆಗೆ ವಾಹನ ಒದಗಿಸಿದ್ದ 'ಮೆಕ್ಯಾನಿಕ್‌' ಬಂಧನ ಗೌರಿ ಲಂಕೇಶ್‌ ಹತ್ಯೆಗೆ ವಾಹನ ಒದಗಿಸಿದ್ದ 'ಮೆಕ್ಯಾನಿಕ್‌' ಬಂಧನ

ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 651 ಪುಟಗಳ ಚಾರ್ಜ್‌ಶೀಟ್ ಅನ್ನು ಮೊದಲು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. 134 ಸಾಕ್ಷಿಗಳ ಹೇಳಿಕೆ, ಎಫ್‌ಎಸ್ಎಲ್ ವರದಿ ಅನ್ವಯ ಮೊದಲು ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು.

ಪಿತೃ ಪಕ್ಷ ಪ್ರಯುಕ್ತ ಗೌರಿ ಲಂಕೇಶ್ ಗೆ ಗಯಾದಲ್ಲಿ ಪಿಂಡ ಪ್ರದಾನ ಪಿತೃ ಪಕ್ಷ ಪ್ರಯುಕ್ತ ಗೌರಿ ಲಂಕೇಶ್ ಗೆ ಗಯಾದಲ್ಲಿ ಪಿಂಡ ಪ್ರದಾನ

SIT files additional charge sheet in Gauri Lankesh murder case

ಮೊದಲು ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲಿ ಕೆ.ಟಿ.ನವೀನ್ ಕುಮಾರ್ ಆರೋಪಿಯಾಗಿದ್ದ. ಆರೋಪಿಗಳಿಗೆ ನವೀನ್ ಗೌರಿ ಲಂಕೇಶ್ ಅವರ ಮನೆ, ಕಚೇರಿಯನ್ನು ತೋರಿಸಿದ್ದ ಎಂದು ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿತ್ತು.

ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 16 ಆರೋಪಿಗಳನ್ನು ಬಂಧಿಸಲಾಗಿದೆ. ನಿಹಾಲ್ ಅಲಿಯಾಸ್ ದಾದಾ ಎಂಬ ಆರೋಪಿಗಾಗಿ ಪೊಲೀಸರು ಇನ್ನೂ ಹುಡುಕಾಟ ನಡೆಸುತ್ತಿದ್ದಾರೆ. ಹೆಚ್ಚುವರಿ ಚಾರ್ಜ್‌ಶೀಟ್‌ನಲ್ಲಿ ಆರೋಪಿಗಳನ್ನು ಬದಲಾಯಿಸಲಾಗಿದೆ.

2017ರ ನವೆಂಬರ್ 5ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸದ ಮುಂದೆ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಗುಂಡು ಹಾರಿಸಿದ ಆರೋಪಿ ಪರುಶರಾಮ್ ವಾಘ್ಮೋರೆಯನ್ನು ಸಹ ಬಂಧಿಸಲಾಗಿದೆ.

English summary
The Special Investigation Team (SIT) has filed a 6000 page additional charge sheet before 1 session court Bengaluru in senior journalist Gauri Lankesh murder case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X