• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತೆರೆಮರೆಯ ಸಾಧಕರಿಗೆ ಮಾ.7ರಂದು ಪ್ರಣಾಮ್ ಕಾರ್ಯಕ್ರಮ

|

ಬೆಂಗಳೂರು, ಮಾರ್ಚ್ 6: ಮಹಿಳಾ ಸಬಲೀಕರಣ, ಸೇವಾಬಸ್ತಿಗಳಲ್ಲಿ ಸಂಸ್ಕಾರವರ್ಧನೆ, ಮಕ್ಕಳ ಮನೋವಿಕಾಸ ಸೇರಿ ಹಲವು ಸೇವಾ ಚಟುವಟಿಕೆಗಳಲ್ಲಿ ತೊಡಗಿರುವ ಸೋದರಿ ನಿವೇದಿತಾ ಪ್ರತಿಷ್ಠಾನವು ಸಮಾಜದ ತೆರೆಮರೆಯ ಸಾಧಕರನ್ನು, ಅವರ ಜೀವನಗಾಥೆಯನ್ನು ಪರಿಚಯಿಸುತ್ತಿದೆ.

ಮಾರ್ಚ್ 7ರಂದು (ಭಾನುವಾರ) ಪ್ರಣಾಮ್' ಶೀರ್ಷಿಕೆಯಲ್ಲಿ ನಡೆಯಲಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಅಪೂರ್ವ ಸಾಧಕರು, ಪ್ರೇರಣಾಶಕ್ತಿಗಳು ಅವರ ಸಾಧನಾಪಥವನ್ನು ವಿವರಿಸಲಿದ್ದಾರೆ.

ಯಶವಂತಪುರದ ಬಾಪು ವಿದ್ಯಾ ಸಂಸ್ಥೆಯಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಗೆ ಪ್ರಣಾಮ್'ಗೆ ಚಾಲನೆ ಸಿಗಲಿದೆ. ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗೆ ಕಾದಾಡಿ ವೀರಮರಣವನ್ನಪ್ಪಿದ ಯೋಧ ಮೇಜರ್ ಅಕ್ಷಯ ಗಿರೀಶ್ ಅವರ ತಾಯಿ ಮೇಘನಾ ಗಿರೀಶ್ ಕುಮಾರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಮೊದಲ ದೃಷ್ಟಿಹೀನ ಲೆಕ್ಕ ಪರಿಶೋಧಕಿ (ಸಿಎ) ರಜನಿ ಗೋಪಾಲಕೃಷ್ಣ ಪಾಲ್ಗೊಳ್ಳಲಿದ್ದಾರೆ. ಯುವಾ ಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಉಪಸ್ಥಿತರಿರಲಿದ್ದಾರೆ.

English summary
The biography of the backstage Achievers will be introduced by Sister Nivedita Pratishtana Organisation in this special event titled “Pranam” on 7th March (Sunday).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X