ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿರ್ಸಿ ಸರ್ಕಲ್ ಕಾಮಗಾರಿ ವಿಳಂಬ, ಬಿಬಿಎಂಪಿಯಿಂದ ನೋಟಿಸ್

|
Google Oneindia Kannada News

ಬೆಂಗಳೂರು, ಮೇ 13: ಮೈಸೂರು ರಸ್ತೆಯ ಸಿಸಿ ಸರ್ಕಲ್ ಮೇಲ್ಸೇತುವೆ ಕಾಮಗಾರಿ ವಿಳಂಬವಾಗುತ್ತಿರುವ ಕಾರಣ ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ.

ಪಾಲಿಕೆಯು ಏ.8 ಹಾಗೂ 23ರಂದು ಕಾರಣ ಕೇಳಿ ಶ್ರೀ ಸಾಯಿ ತ್ರಿಶಾ ಎಂಜಿನಿಯರಿಂಗ್ ಕಂಪನಿಗೆ ನೋಟಿಸ್ ಜಾರಿ ಮಾಡಿತ್ತು. ಇದಕ್ಕೆ ಕಂಪನಿಯು ಈವರೆಗೆ ಉತ್ತರ ನೀಡಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ ಮೇಲೆ ಭಾರಿ ವಾಹನಗಳ ಸಂಚಾರ ನಿಷೇಧ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ ಮೇಲೆ ಭಾರಿ ವಾಹನಗಳ ಸಂಚಾರ ನಿಷೇಧ

ಕಳೆದ ಡಿಸೆಂಬರ್ ಅಂತ್ಯದಲ್ಲಿ ಪುರಭವನ-ಮೈಸೂರು ಸರ್ತೆ ಕಡೆಗೆ ಕಾಮಗಾರಿ ಆರಂಭಿಸಲಾಗಿತ್ತು. ಸಂಚಾರ ದಟ್ಟಣೆ ಉಂಟಾದ ಹಿನ್ನೆಲೆಯಲ್ಲಿ ಹಗಲು ರಾತ್ರಿ ಕಾರ್ಯ ನಿರ್ವಹಿಸುತ್ತಿದ್ದ ಸಂಸ್ಥೆ ಒಂದು ತಿಂಗಳ ಅವಧಿಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕಿತ್ತು.

ಪೊಲೀಸರ ಅನುಮತಿ ನಿರಾಕರಣೆ

ಪೊಲೀಸರ ಅನುಮತಿ ನಿರಾಕರಣೆ

ಡಾಂಬರು ಹಾಕುವ ಮಾರ್ಗದಲ್ಲಿ ಸಂಚಾರ ಸ್ಥಗಿತಕ್ಕೆ ಪೊಲೀಸ್ ಇಲಾಖೆ ಒಪ್ಪಿಗೆ ನೀಡಿಲ್ಲ. ಇದರಿಂದ ಕಾಮಗಾರಿ ಅನಗತ್ಯವಾಗಿ ಕುಂಟುತ್ತಾ ಸಾಗಿದೆ. ಸದ್ಯ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಮಾಡಿರುವ ಕೆಲಸಕ್ಕೆ ಬಿಲ್ ಪಾವತಿ ಮಾಡದಿರುವುದು ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ.

ತಿಂಗಳಲ್ಲಿ ಕಾಮಗಾರಿ ಪೂರ್ಣ ಎಂದ ಪಾಲಿಕೆ

ತಿಂಗಳಲ್ಲಿ ಕಾಮಗಾರಿ ಪೂರ್ಣ ಎಂದ ಪಾಲಿಕೆ

ಬಾಕಿ ಇರುವ ಕಾಮಗಾರಿ ಆರಂಭಿಸಲು ನಮಗೆ ತೊಂದರೆ ಇಲ್ಲ, ಪೊಲೀಸರು ಅನುಮತಿ ನೀಡಿದಲ್ಲಿ ಶೀಘ್ರ ಕಾಮಗಾರಿ ಆರಂಭಿಸಿ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಹೆಬ್ಬಾಳದ ಮೂಲಕವೇ ಕೆಂಪೇಗೌಡ ಏರ್‌ಪೋರ್ಟ್‌ಗೆ ನಮ್ಮ ಮೆಟ್ರೋ ಹೆಬ್ಬಾಳದ ಮೂಲಕವೇ ಕೆಂಪೇಗೌಡ ಏರ್‌ಪೋರ್ಟ್‌ಗೆ ನಮ್ಮ ಮೆಟ್ರೋ

1.5 ಕಿ.ಮೀ ವರೆಗೆ ಡಾಂಬರು

1.5 ಕಿ.ಮೀ ವರೆಗೆ ಡಾಂಬರು

ಮೇಲ್ಸೇತುವೆಯ ರಾಯನ್ ವೃತ್ತ ದಿಂದ ಮೈಸೂರು ರಸ್ತೆಯ ಕಡೆಗೆ 1.5 ಕಿಮೀ ಡಾಂಬರು ಪದರ ತೆರವುಕಾರ್ಯ ಮುಗಿದಿದೆ. ಸಿರ್ಸಿ ಸರ್ಕಲ್ ಫ್ಲೈಓವರ್ ಮೇಲೆ ಗುಂಡಿಗಳು ಇರುವುದರಿಂದ ಮರುಡಾಂಬರೀಕರಣ ಮಾಡಲು ಬಿಬಿಎಂಪಿ ಕಾಮಗಾರಿ ಕೈಗೆತ್ತಿಕೊಂಡಿದೆ ಹೀಗಾಗಿ ಸಿರ್ಸಿ ಸರ್ಕಲ್ ಮೇಲ್ಸೇತುವೆ ಮೇಲೆ ವಾಹನ ನಿರ್ಬಂಧಿಸಲಾಗಿದೆ.

ಹೆಬ್ಬಾಳ ಜಂಕ್ಷನ್‌ನಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪನೆ ಹೆಬ್ಬಾಳ ಜಂಕ್ಷನ್‌ನಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪನೆ

ಕಾಮಗಾರಿ, ವೆಚ್ಚದ ಕುರಿತು ಮಾಹಿತಿ ಹೀಗಿದೆ

ಕಾಮಗಾರಿ, ವೆಚ್ಚದ ಕುರಿತು ಮಾಹಿತಿ ಹೀಗಿದೆ

ಸುಮಾರು 2.65 ಕಿ.ಮೀ ಉದ್ದವಿರುವ ಮೇಲ್ಸೇತುವೆಯ ದುರಸ್ತಿಗೆ 4.30 ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು, ನಾಗೇಶ್ ಮಾಯಣ್ಣ ಸಾಯಿ ತ್ರಿಷಾ ಇನ್‌ಫ್ರಾ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಕಾಮಗಾರಿ ಗುತ್ತಿಗೆ ನೀಡಲಾಗಿದೆ. ಈ ಅವಧಿಯಲ್ಲಿ ಪುರಭವನದಿಂದ ಮೈಸೂರು ರಸ್ತೆ ಮತ್ತು ಚಾಮರಾಜಪೇಟೆಯ ಕಡೆಗೆ ಸಾಗುವವರು ಪರ್ಯಾಯ ರಸ್ತೆಗಳಲ್ಲಿ ತೆರಳಬೇಕಾಗುತ್ತದೆ. ಒಂದು ಪದರ ಡಾಂಬರು ಕಿತ್ತು ಹಾಕಿ, 3 ಎಂಎಂ ದಪ್ಪದ ಡಾಂಬರು ಶೀಟ್ ಹೊದಿಸಲಾಗುತ್ತದೆ. ಬಳಿಕ 40 ಎಂಎಂ ದಪ್ಪದ ಬಿಟುಮಿನ್ ಹಾಕಲಾಗುವುದು ಎಂಜಿನಿಯರ್ ಒಬ್ಬರು ಮಾಹಿತಿ ನೀಡಿದ್ದಾರೆ.

ಹೆಬ್ಬಾಳ ಜಂಕ್ಷನ್ ನಲ್ಲಿ ಸದ್ಯದಲ್ಲೇ ಮಿನಿ ಪಾರ್ಕ್ ನಿರ್ಮಾಣ! ಹೆಬ್ಬಾಳ ಜಂಕ್ಷನ್ ನಲ್ಲಿ ಸದ್ಯದಲ್ಲೇ ಮಿನಿ ಪಾರ್ಕ್ ನಿರ್ಮಾಣ!

English summary
Resurfacing of Sirsi Circle flyover, also called Balagangadhara Swamiji flyover, has failed to meet its four-month deadline with the Mysuru Road-Town Hall Circle side of the stretch yet to be asphalted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X