ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇಶಕ್ಕೊಂದೇ ತುರ್ತು ಸಹಾಯವಾಣಿ 112: ಯಡಿಯೂರಪ್ಪ ಇಂದು ಚಾಲನೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 31: ಇನ್ನುಮುಂದೆ ಕೇವಲ ಒಂದೇ ದೂರವಾಣಿ ಸಂಖ್ಯೆ ಡಯಲ್ ಮಾಡುವ ಮೂಲಕ ಎಲ್ಲಾ ಬಗೆಯ ತುರ್ತು ಸೇವೆಗಳನ್ನು ಪಡೆಯಬಹುದಾಗಿದೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಸೇವೆಗೆ ಇಂದು ಚಾಲನೆ ನೀಡಲಿದ್ದಾರೆ.

ಆ್ಯಂಬುಲೆನ್ಸ್‌, ಪೊಲೀಸ್‌ ಸಹಾಯವಾಣಿ ಮತ್ತು ಅಗ್ನಿಶಾಮಕ ದಳ ಸೇರಿ ಇತರ ತುರ್ತು ಸೇವೆಗಳು ಮುಂದಿನ ದಿನಗಳಲ್ಲಿ ಒಂದೇ ದೂರವಾಣಿ ಸಂಖ್ಯೆ ಮೂಲಕ ಸೇವೆ ಪಡೆಯಬಹುದಾಗಿದೆ.

ರಾಜ್ಯದಲ್ಲಿ ಇನ್ನು ಏನೇ ತುರ್ತು ಸೇವೆ ಬೇಕಿದ್ದರೂ 112ಕ್ಕೆ ಕರೆ ಮಾಡಿರಾಜ್ಯದಲ್ಲಿ ಇನ್ನು ಏನೇ ತುರ್ತು ಸೇವೆ ಬೇಕಿದ್ದರೂ 112ಕ್ಕೆ ಕರೆ ಮಾಡಿ

ನಮ್ಮ100 ಮೊದಲಿಗೆ 2017 ಆರಂಭಗೊಂಡಿತು. ಈ ಸಂಖ್ಯೆ ಇನ್ನು ಮುಂದೆ ಬದಲಾಗಲಿದ್ದು, ಇಡೀ ರಾಜ್ಯದಲ್ಲಿ 112 ಹೊಸ ನಂಬರ್ ಚಾಲನೆಗೆ ಬರಲಿದೆ. ಆ ಯೋಜನೆ ಕಳೆದ 2 ವರ್ಷಗಳಿಂದ ಪೆಂಡಿಂಗ್ ಉಳಿದುಕೊಂಡಿತ್ತು. ಈಗ ಎಲ್ಲಾ ಜಿಲ್ಲೆಗಳಲ್ಲಿ ಚಾಲನೆಗೆ ಬರಲಿದೆ. ಬೆಂಗಳೂರಿನಲ್ಲಿ ಯಶಸ್ವಿಯಾದರೇ ಮೈಸೂರು ಮತ್ತು ಮಂಗಳೂರು ಜಿಲ್ಲೆಗೂ ವಿಸ್ತರಣೆಯಾಗಲಿದೆ.

Single Emergency Helpline Number 112 To Be Launch In Bengaluru

ಮೊದಲೆಲ್ಲ ಪೊಲೀಸ್ ನೆರವು ಬೇಕಾದಲ್ಲಿ 100ಕ್ಕೆ, ಅಗ್ನಿಶಾಮಕ ನೆರವು ಬೇಕಾದಲ್ಲಿ 101ಕ್ಕೆ, ಆರೋಗ್ಯಕ್ಕೆ 108ಗೆ ಹೀಗೆ ಬೇರೆ ಬೇರೆ ಸೇವೆಗಳಿಗೆ ವಿವಿಧ ತುರ್ತು ಸಹಾಯವಾಣಿ ಸಂಖ್ಯೆ ಇತ್ತು.

ಆದರೆ ಇನ್ಮುಂದೆ ಎಲ್ಲಾ ವ್ಯವಸ್ಥೆಗೂ 112 ಏಕೈಕ ತುರ್ತು ಸಹಾಯವಾಣಿ ವ್ಯವಸ್ಥೆಯನ್ನು ಆರಂಭಿಸಲಾಗಿದೆ. ಈ ವಿನೂತನ ತುರ್ತು ಸಹಾಯವಾಣಿ ಸಂಖ್ಯೆಗೆ ಸಂಕಷ್ಟದಲ್ಲಿರುವ ಮಹಿಳೆಯರು ಸಹ ಡಯಲ್ ಮಾಡಿ ನೆರವು ಪಡೆಯಬಹುದಾಗಿದೆ. ಇಂದಿನಿಂದ ಕರ್ನಾಟಕದಲ್ಲಿ ಇದು ಜಾರಿಗೆ ಬರಲಿದೆ.

ಹೀಗಾಗಿ ಇನ್ಮುಂದೆ 100,101,102 ಹಾಗೂ 108 ಹಾಗೂ 118 ಸಂಖ್ಯೆ ಎಲ್ಲವೂ 112ಗೆ ರೀಡೈರೆಕ್ಟ್ ಆಗಲಿದೆ. ಈಗಾಗಲೇ ಈ ಯೋಜನೆಗೆ ದೆಹಲಿಯಲ್ಲಿ ಸೆಪ್ಟಂಬರ್ ತಿಂಗಳಿನಲ್ಲಿ ಹಾಗೂ ಉತ್ತರ ಪ್ರದೇಶದಲ್ಲಿ ಅಕ್ಟೋಬರ್ 26 ರಂದು ಚಾಲನೆ ದೊರೆತಿದೆ.

ಸದ್ಯ ಒಟ್ಟು ದೇಶದಲ್ಲಿ 16 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಆಂಧ್ರಪ್ರದೇಶ, ಉತ್ತರಾಖಂಡ, ಪಂಜಾಬ್, ಕೇರಳ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ, ತಮಿಳುನಾಡು, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಪುದುಚೇರಿ, ಲಕ್ಷದೀಪ, ಅಂಡಮಾನ್, ದಾದರ್ ನಗರ್ ಹವೇಲಿ, ದಿಯು ಮತ್ತು ದಮನ್‍ನಲ್ಲಿ ಸೇವೆ ಕಾರ್ಯರೂಪಕ್ಕೆ ಬರಲಿದೆ.

ಹೇಗೆ ಕೆಲಸ ಮಾಡುತ್ತೆ?

- 112 ಸಹಾಯವಾಣಿಗೆ ಕರೆ ಮಾಡಿದರೆ ನೇರವಾಗಿ ಜಿಲ್ಲಾ ಕಮಾಂಡ್ ಕೇಂದ್ರದೊಂದಿಗೆ ಸಂಪರ್ಕಿಸಲಾಗಿರುತ್ತದೆ. ಹೀಗೆ ಸಂತ್ರಸ್ತರಿಗೆ ಸಂಬಂಧ ಪಟ್ಟ ಪ್ರದೇಶಗಳಿಂದ ತಕ್ಷಣ ನೆರವು ಒದಗಿಸಲಾಗುತ್ತದೆ.

-ಸ್ಮಾರ್ಟ್ ಫೋನ್ ನಲ್ಲಿ 112 ನಂಬರ್ ಡಯಲ್ ಮಾಡಬಹುದು ಅಥವಾ ಪವರ್ ಬಟನ್ ಅನ್ನು ಮೂರು ಬಾರಿ ಒತ್ತಿ ತಕ್ಷಣವೇ ಇ.ಆರ್.ಸಿ. ಕರೆಯನ್ನು ಸಕ್ರಿಯಗೊಳಿಸಬಹುದು. ಹಾಗೆಯೇ ಫೀಚರ್ ಫೋನ್‍ನಲ್ಲಿ ಸಂಖ್ಯೆ 5 ಅಥವಾ 9 ಅನ್ನು ದೀರ್ಘವಾಗಿ ಒತ್ತಿದರೆ ಇ.ಆರ್.ಸಿ. ಕರೆಯನ್ನು ಸಕ್ರಿಯಗೊಳಿಸಬಹುದಾಗಿದೆ. ಸಂಬಂಧ ಪಟ್ಟ ರಾಜ್ಯಗಳ ಇಆರ್ ಎಸ್‍ಎಸ್ ಅಧಿಕೃತ ವೆಬ್‍ಸೈಟ್‍ಗೆ ಭೇಟಿ ನೀಡಿ ಅಲ್ಲಿ ನಿಮ್ಮ ಸಮಸ್ಯೆಯನ್ನು ಇ-ಮೇಲ್ ಹಾಗೂ ಎಸ್‍ಓಎಸ್ ಸಂದೇಶದ ಮೂಲಕ ರಾಜ್ಯ ಎ.ಆರ್‍ಸಿಗೆ ಕಳುಹಿಸಬಹುದು.

- 112 ಇಂಡಿಯಾ ಮೊಬೈಲ್ ಆಪ್ ಗೂಗಲ್ ಪ್ಲೇ ಸ್ಟೋರ್ ಹಾಗೂ ಆ್ಯಪಲ್ ಸ್ಟೋರ್ ಗಳಲ್ಲಿ ಲಭ್ಯವಿದೆ.

- ಈ ತುರ್ತುಸೇವೆಗಾಗಿ ನಿರ್ಭಯ ನಿಧಿಯಡಿ 321 ಕೋಟಿ ರೂಪಾಯಿಗಳ ಮೊತ್ತವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಆಯಿಸ್ ಕಾಲ್, ಮೆಸೇಜ್, ಇ ಮೇಲ್ ಕೂಡ ಮಾಡಬಹುದು.

ನಮ್ಮ100 ಕೇವಲ ನಗರಗಳನ್ನು ಮಾತ್ರ ಫೋಕಸ್ ಮಾಡುತ್ತಿತ್ತು, ಬೇರೆ ಜಿಲ್ಲೆಗಳಿಂದ ಕರೆಗಳು ಬಂದಾಗ ನಾವು ಸಂಬಂಧ ಪಟ್ಟ ವ್ಯಕ್ತಿಗಳಿಗೆ ಸಂಪರ್ಕಿಸುತ್ತಿದ್ದೆವು. ಈಗ ಸದ್ಯ ಪ್ರಮುಖ ಕೇಂದ್ರ ಬೆಂಗಳೂರಿನಲ್ಲಿದ್ದು ಕರೆಗಳು ಆಯಾಯಾ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗುವುದು ಎಂದು ಇಲ್ಲಾಕ್ಕಿಯಾ ಕರುಣಾಗರನ್ ಹೇಳಿದ್ದಾರೆ.
ಈ ಮೊದಲು ಕರೆ ವರ್ಗಾವಣೆ ಮಾಡಲು ಸುಮಾರು 8 ನಿಮಿಷ ಬೇಕಾಗಿತ್ತು, ಇನ್ನು ಮುಂದೆ ಕೇವಲ 5 ನಿಮಿಷಕ್ಕೆ ಕರೆ ಟ್ರಾನ್ಸ್ ಫರ್ ಮಾಡಬಹುದಾಗಿದೆ.

English summary
Chief Minister BS Yediyurappa Will Launch Single Emergency Helpline Number 112 Today October 31 In Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X