ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಗ್ರಹಾರದಿಂದ ಜಯದೇವ ಆಸ್ಪತ್ರೆಗೆ ಪಾರಿ ರಾಜನ್ ಶಿಫ್ಟ್

By Mahesh
|
Google Oneindia Kannada News

ಬೆಂಗಳೂರು, ಮೇ 27: ಬಹು ಕೋಟಿ ಲಾಟರಿ ಹಗರಣದ ಪ್ರಮುಖ ಆರೋಪಿ ಪಾರಿರಾಜನ್‌ ಅನಾರೋಗ್ಯ ಪೀಡಿತನಾಗಿದ್ದು, ಆತನನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಜಯದೇವ ಆಸ್ಪತ್ರೆಗೆ ದಾಖಲಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಈ ನಡುವೆ ಪಾರಿ ಕರೆ ವಿವರಗಳು ಈ ಪ್ರಕರಣದಲ್ಲಿ ಪ್ರಮುಖವಾಗಲಿದ್ದು, ಅನೇಕ ಹಿರಿಯ ಐಪಿಎಸ್ ಅಧಿಕಾರಿಗಳಿಗೆ ನಡುಕ ಹುಟ್ಟಿಸಿದೆ.

ಕೋಲಾರ ಉಪಕಾರಾಗೃಹದಲ್ಲಿದ ಪಾರಿ ರಾಜನ್‌ನನ್ನು ಅನಾರೋಗ್ಯದ ಕಾರಣದಿಂದಾಗಿ ಹೆಚ್ಚಿನ ಚಿಕಿತ್ಸೆ ನೀಡಲು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲಾಗಿದೆ. ಜೈಲಿನ ಅಧಿಕಾರಿಗಳು ರಾಜನ್‌ಗೆ ಕೈದಿ ಸಂಖ್ಯೆ 6693ನ್ನು ನೀಡಿದ್ದಾರೆ. [ಬಹುಕೋಟಿ ಲಾಟರಿ ಹಗರಣದ ತನಿಖೆ ಸಿಬಿಐ ಕೈಗೆ]

 Pari Rajan CDR is key in the Investigation

ಪಾರಿ ರಾಜನ್ ನನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬುಧವಾರ ಮಧ್ಯಾಹ್ನದ ವೇಳೆಗೆ ಜಯದೇವ ಹೃದ್ರೋಗ ಆಸ್ಪತ್ರೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗುತ್ತದೆ. ಎದೆನೋವು, ಮಧುಮೇಹ ಸಮಸ್ಯೆಯಿಂದ ಪಾರಿ ಬಳಲುತ್ತಿದ್ದಾರೆ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ. ಪಾರಿ ಗುಣಮುಖರಾದ ಕೂಡಲೇ ವಿಚಾರಣೆಗೆ ಒಳಪಡಿಸಲು ಸಿಐಡಿ ಮುಂದಾಗಿದೆ. [ಒಂದಂಕಿ ಲಾಟರಿ ದಂಧೆ: ಪಾರಿ 'ಕಿಂಗ್ ಪಿನ್' ಅಲ್ಲ]

ಬಹುಕೋಟಿ ಲಾಟರಿ ಹಗರಣದ ತನಿಖೆಯನ್ನು ಸಿಬಿಐ ನಡೆಸಲಿದೆ ಎಂದು ಕರ್ನಾಟಕ ಸರ್ಕಾರ ಮಂಗಳವಾರ ಆದೇಶ ನೀಡಿದೆ. ಅದರೆ, ಇನ್ನೂ ಆದೇಶದ ಪ್ರತಿ ದೆಹಲಿ ತಲುಪಿ ಅಲ್ಲಿಂದ ಚೆನ್ನೈ ಅಥವಾ ಮುಂಬೈ ವಿಭಾಗಕ್ಕೆ ಬಂದು ಅವರು ಟೀಂ ರಚನೆ ಮಾಡಿ ಬೆಂಗಳೂರಿಗೆ ಬರುವಷ್ಟರಲ್ಲಿ ಪಾರಿ ಬಾಯಿಂದ ಒಂದಷ್ಟು ಸತ್ಯ ಹೊರ ಹಾಕುವ ಪ್ರಯತ್ನವೂ ಸಾಗಿದೆ.

ಪಾರಿ ವಿಚಾರಣೆ ನಡೆಸಲು ಸಾಧ್ಯವೇ?

ಪಾರಿ ವಿಚಾರಣೆ ನಡೆಸಲು ಸಾಧ್ಯವೇ?

ಸಿಬಿಐ ತನಿಖೆ ಆರಂಭಕ್ಕೂ ಮುನ್ನ ಸಿಐಡಿ ತಂಡ ಪಾರಿ ರಾಜನ್ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಫೋನ್ ಕರೆ ಸಂವಾದದ ಪಟ್ಟಿಯಲ್ಲಿರುವ ಹೆಸರುಗಳ ಜೊತೆ ಪಾರಿ ಸಂಪರ್ಕ ಯಾವ ಮಟ್ಟದಲ್ಲಿತ್ತು ಎಂಬುದನ್ನು ಖಚಿತಪಡಿಸಿಕೊಂಡು ಸಿಐಡಿ ತನ್ನ ವರದಿಯನ್ನು ತಯಾರಿಸಲಿದ್ದು, ಇದೇ ವರದಿ ಸಿಬಿಐ ಕೈ ಸೇರಲಿದೆ. ಸರ್ಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವರದಿ ಕೂಡಾ ಸಂಪೂರ್ಣವಾಗಿ ಬಹಿರಂಗಗೊಂಡಿಲ್ಲ.

ಇಬ್ಬರು ಐಪಿಎಸ್ ಮಾತ್ರ ಅಮಾನತು ಏಕೆ?

ಇಬ್ಬರು ಐಪಿಎಸ್ ಮಾತ್ರ ಅಮಾನತು ಏಕೆ?

ಪಾರಿ ರಾಜನ್ ಬಂಧಿಸಲು ಬಂಗಾರಪೇಟೆಗೆ ತೆರಳುತ್ತಿದ್ದ ಎಸ್ ಐ ಪ್ರಕಾಶ್ ಎಂಬುವವರಿಗೆ ಅಲೋಕ್ ಕುಮಾರ್ ಅವರು ಎರಡು ಬಾರಿ ಫೋನ್ ಕರೆ ಮಾಡಿ ಪಾರಿ ಬಂಧಿಸದಂತೆ ಸೂಚಿಸಿದ್ದರು ಎಂಬ ಆರೋಪ ಸಿಐಡಿ ವರದಿಯಿಂದ ಸಾಬೀತಾಗಿದೆ. ಲಾಟರಿ ವಿಚಕ್ಷಣ ದಳದಲ್ಲಿದ್ದ ಎಸ್ಪಿ ಧರಣೇಶ್ ಅವರ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಇಬ್ಬರನ್ನು ಅಮಾನತುಗೊಳಿಸಿ ವಿಚಾರಣೆಗೊಳಪಡಿಸಲಾಗಿದೆ.

ಪಾರಿ ಸಿಡಿಆರ್ ನಲ್ಲಿ ಏನಿದೆ?

ಪಾರಿ ಸಿಡಿಆರ್ ನಲ್ಲಿ ಏನಿದೆ?

ಪಾರಿ ರಾಜನ್ ಫೋನ್ ಕರೆ ಸಂವಾದದ ಪಟ್ಟಿ ತೆಗೆದು ನೋಡಿದರೆ ಸುಮಾರು 6ಕ್ಕೂ ಅಧಿಕ ಹಿರಿಯ ಪೊಲೀಸ್ ಅಧಿಕಾರಿಗಳು, 39ಕ್ಕೂ ಅಧಿಕ ಐಪಿಎಸ್ ಗಳ ವೃತ್ತಿಗೆ ಕಟಂಕವಾಗಿರುವ ಪಾರಿ ರಾಜನ್ ಈ ದಂಧೆಯಲ್ಲಿ ಕೆಳ ಹಂತದ ಏಜೆಂಟ್ ಅಷ್ಟೇ ಎಂಬ ಸತ್ಯವನ್ನು ಸಿಐಡಿ ಮಧ್ಯಂತರ ವರದಿ ಬಹಿರಂಗಗೊಳಿಸಿದೆ.

ವರದಿಯಲ್ಲಿ ಹೆಸರುಳ್ಳ ಐಪಿಎಸ್ ಗಳು ಎಲ್ಲಿದ್ದಾರೆ?

ವರದಿಯಲ್ಲಿ ಹೆಸರುಳ್ಳ ಐಪಿಎಸ್ ಗಳು ಎಲ್ಲಿದ್ದಾರೆ?

ಬೆಂಗಳೂರು ನಗರದಲ್ಲೇ ಕಾರ್ಯನಿರ್ವಹಿಸುತ್ತಿರುವ ಇಬ್ಬರು ಎಡಿಜಿಪಿ, ನಾಲ್ವರು ಐಜಿಪಿ, ಮೂವರು ಡಿಸಿಪಿ, ಇಬ್ಬರು ಎಸ್ಪಿ (ನಾನ್‌ ಐಪಿಎಸ್‌) ಸೇರಿದಂತೆ ಪಾರಿರಾಜನ್‌ ಸಂಪರ್ಕದಲ್ಲಿ ಸುಮಾರು 39ಕ್ಕೂ ಅಧಿಕ ಅಧಿಕಾರಿ ಮತ್ತು ಸಿಬ್ಬಂದಿಯ ಪಟ್ಟಿ ರಾಜ್ಯ ಸರ್ಕಾರದ ಕೈ ಸೇರಿದೆ

ಐಜಿಪಿ, ಎಡಿಜಿಪಿ, ಆಯುಕ್ತರ ಹೆಸರು ಇದೆ

ಐಜಿಪಿ, ಎಡಿಜಿಪಿ, ಆಯುಕ್ತರ ಹೆಸರು ಇದೆ

ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಹಾಗೂ ಬೆಂಗಳೂರು ಪೊಲೀಸ್‌ ಆಯುಕ್ತರಾಗಿದ್ದ ಆಂಧ್ರಮೂಲದ ನಿವೃತ್ತ ಐಪಿಎಸ್‌ ಅಧಿಕಾರಿ, ಡಿಜಿಪಿ ಹಾಗೂ ಬೆಂಗಳೂರು ನಗರ ಆಯುಕ್ತರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ಪ್ರಸುತ್ತ ರಾಜಕೀಯದಲ್ಲಿ ಸಕ್ರಿಯವಾಗಿರುವ ಅಧಿಕಾರಿ ಮತ್ತು ಬೆಂಗಳೂರು ನಗರ ಆಯುಕ್ತ ಹಾಗೂ ರಾಜ್ಯ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ನಿವೃತ್ತರಾದ ಎಡಿಜಿಪಿ ಸೇರಿದಂತೆ ರಾಜಕಾರಣಿಗಳ ಸಂಪರ್ಕ ಬಗ್ಗೆ ಕೂಡಾ ವರದಿಯಲ್ಲಿ ಹೇಳಲಾಗಿದೆ.

ಪಾರಿ ಬರೀ ಏಜೆಂಟ್ ಎಂದಾದರೆ ಕಿಂಗ್ ಪಿನ್?

ಪಾರಿ ಬರೀ ಏಜೆಂಟ್ ಎಂದಾದರೆ ಕಿಂಗ್ ಪಿನ್?

ಪಾರಿ ರಾಜನ್ ಲಾಟರಿ ಹಗರಣದ ಕಿಂಗ್ ಪಿನ್ ಅಲ್ಲ ಬರೀ ಈ ಭಾಗದ ಏಜೆಂಟ್ ಅಷ್ಟೇ ಎಂಬ ವಿಷಯ ಬೆಳಕಿಗೆ ಬಂದಿದೆ. ಒಂದಂಕಿ ಲಾಟರಿ ಹಗರಣದ ಮುಖ್ಯ ರುವಾರಿಯ ಹೆಸರು 'ಮೈಕಲ್' ಎನ್ನಲಾಗಿದೆ. ಇದರ ಜೊತೆಗೆ ಈಗ ತೆಪ್ಪಗೆ ಮನೆ ಸೇರಿರುವ ತಮಿಳುನಾಡಿನ ಲಾಟರಿ ಕಿಂಗ್ ಪಿನ್ ಮಾರ್ಟಿನ್ ಹೆಸರು ಕೇಳಿ ಬಂದಿದೆ. ಇದೇ ನಿಜವಾದರೆ ಚೆನ್ನೈ, ಕೊಯಮತ್ತೂರು ಕಡೆಗೆ ತನಿಖಾ ತಂಡ ಮೊದಲಿಗೆ ಹೋಗಿ ಬರಬೇಕಾಗುತ್ತದೆ.

English summary
The Call Detail Records (CDR) of Pari Rajan shows he was in touch with many senior IPS officers. Pari Rajan is currently jailed in Parappana Agrahara and taken to Jayadeva Hospital on medical grounds. Karnataka government hand over Multi crore scam probe to CBI
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X