ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತತ್ತರಿಸಿದ ಕೇರಳ: ಸರಳ ಓಣಂ ಆಚರಣೆಗೆ ಬೆಂಗಳೂರು ಕೇರಳಿಗರ ನಿರ್ಧಾರ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 24: ಕೇರಳದಲ್ಲಿ ಭಾರಿ ಮಳೆಯಿಂದ ಪ್ರವಾಹಕ್ಕೆ ಸಿಲುಕಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕೇರಳಿಗರು ಓಣಂ ಹಬ್ಬವನ್ನು ಸರಳವಾಗಿ ಆಚರಿಸಲು ತೀರ್ಮಾನಿಸಿದ್ದಾರೆ.

ಪ್ರಕೃತಿ ವಿಕೋಪದಿಂದಾಗಿ ಲಕ್ಷಾಂತರ ಮಂದಿ ಸಂತ್ರಸ್ತರಾಗಿದ್ದಾರೆ, ಮನೆ, ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ, ಇಂತಹ ಸಂದರ್ಭದಲ್ಲಿ ವಿಜೃಂಭಣೆಯಿಂದ ಓಣಂ ಆಚರಣೆ ಮಾಡುವುದು ಸೂಕ್ತವಲ್ಲ ಎಂದು ಭಾವಿಸಿರುವ ಕೇರಳಿಗರು ಸರಳ ಓಣಂ ಆಚರಣೆಗೆ ಮುಂದಾಗಿದ್ದಾರೆ.

ಪ್ರವಾಹಕ್ಕೆ ತಮಿಳುನಾಡು ಕಾರಣ ಎಂದು ಆರೋಪಿಸಿದ ಕೇರಳ ಪ್ರವಾಹಕ್ಕೆ ತಮಿಳುನಾಡು ಕಾರಣ ಎಂದು ಆರೋಪಿಸಿದ ಕೇರಳ

ಕೇರಳಿಗರ ಪ್ರಮುಖ ಹಬ್ಬ ಓಣಂ, ಜಾತಿ ಬೇಧವಿಲ್ಲದೆ ಆಚರಿಸಿರುವ ಹಬ್ಬ ಇದಾಗಿದೆ. ಈ ಹಬ್ಬದ ಸಂದರ್ಭದಲ್ಲಿ ಹಲವಾರು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಮಲಯಾಳಿಗಳೆಲ್ಲರೂ ಒಂದಾಗಿ ಆಚರಿಸುತ್ತಾರೆ.ನಗರದಲ್ಲಿ ಸುಮಾರು 12ಲಕ್ಷ ಕೇರಳಿಯರಿದ್ದು, ಐವತ್ತಕ್ಕೂ ಎಚ್ಚು ಸಂಘಟನೆಗಳಿವೆ, ಈ ಎಲ್ಲಾ ಸಂಘಟನೆಗಳು ಈ ಬಾರಿ ತಮ್ಮ ಸಮುದಾಯಗಳ ಜನರಿಗೆ ತಿಳಿವಳಿಕೆ ನೀಡಿ ಕೇರಳ ಸಂತ್ರಸ್ತರಿಗೆ ನೆರವಾಗುವಂತೆ ಮನವಿ ಮಾಡಿದ್ದಾರೆ.

Simple Onam celebration in Bengaluru this time!

ಮಲಯಾಳಿಗರ ಓಣಂ ಹಬ್ಬಕ್ಕೆ ಪೌರಾಣಿಕ ಹಿನ್ನೆಲೆಮಲಯಾಳಿಗರ ಓಣಂ ಹಬ್ಬಕ್ಕೆ ಪೌರಾಣಿಕ ಹಿನ್ನೆಲೆ

ಆಗಸ್ಟ್ 25ರಂದು ಓಣಂ ಆಚರಿಸಲಾಗುತ್ತದೆ. ಅಂದು ಎಲ್ಲರಿಗೂ ತಮ್ಮ ಮನೆಗಳಲ್ಲಿ ಸರಳವಾಗಿ ಹಬ್ಬ ಆಚರಿಸಿಕೊಳ್ಳುತ್ತಾರೆ. ಈಗಾಗಲೇ ಕೇರಳ ಸಂತ್ರಸ್ತರಿಗೆ ಇಪ್ಪತ್ತು ಟ್ರಕ್ ನಲ್ಲಿ ಪರಿಹಾರ ಸಾಮಗ್ರಿಗಳನ್ನು ರವಾನಿಸಲಾಗಿದೆ. ಕೆಎಂಸಿಸಿ ಸೇರಿದಂತೆ ನೂರಾರು ಮಂದಿ ದೇಣಿಗೆ ನೀಡಿದ್ದಾರೆ.

English summary
Keralites who are living in Bengaluru have decided to celebrate Onam festival because deadly rain and flood hit entire Kerala state recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X