ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್ ಮಾದರಿಯಲ್ಲಿ ಬೆಂಗಳೂರು ಸ್ಕ್ವೇರ್

|
Google Oneindia Kannada News

ಬೆಂಗಳೂರು, ಮಾರ್ಚ್ 2: ನ್ಯೂಯಾರ್ಕ್ ನ ಟೈಮ್ಸ್ ಸ್ಕ್ವೇರ್ ಮಾದರಿಯಲ್ಲಿ ಬೆಂಗಳೂರಿನ ರೆಸಿಡೆನ್ಸಿ ರಸ್ತೆ ಮತ್ತು ಬ್ರಿಗೆಡ್ ರಸ್ತೆ ಜಂಕ್ಷನ್ ನಲ್ಲಿ ಟವರ್ ವೊಂದನ್ನು ನಿರ್ಮಿಸಲು ಬಿಬಿಎಂಪಿ ಚಿಂತನೆ ನಡೆಸಿದೆ. ಈ ಕುರಿತಂತೆ ಬಿಬಿಎಂಪಿ ಅಧಿಕಾರಿಗಳು ಸಾಕಷ್ಟು ಸಿದ್ಧತೆ ಆರಂಭಿಸಿದ್ದಾರೆ.

ಗುರುವಾರ ಚರ್ಚ್ ಸ್ಟ್ರೀಟ್ ರಸ್ತೆ ಪುನರಾರಂಭಗೊಂಡ ವೇಳೆ ಮೇಯರ್ ಸಂಪತ್ ರಾಜ್ ಈ ವಿಷಯ ತಿಳಿಸಿದ್ದು, ನ್ಯೂಯಾರ್ಕ್ ಟೈಮ್ಸ್ ನ ಟೈಮ್ಸ್ ಸ್ಕ್ವೇರ್ ಮಾದರಿಯಲ್ಲಿ ಬ್ರಿಗೆಡ್ ರಸ್ತೆ ಮತ್ತು ರೆಸಿಡೆನ್ಸಿ ರಸ್ತೆ ಸಂಧಿಸುವ ಜಂಕ್ಷನ್ ನಲ್ಲಿ ಟವರ್ ಒಂದನ್ನು ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದಾರೆ.

ಚರ್ಚ್ ಸ್ಟ್ರೀಟ್ ನಲ್ಲಿ ನಡೆಯಿರಿ ಇಂಪಾದ ಸಂಗೀತ ಕೇಳಿರಿಚರ್ಚ್ ಸ್ಟ್ರೀಟ್ ನಲ್ಲಿ ನಡೆಯಿರಿ ಇಂಪಾದ ಸಂಗೀತ ಕೇಳಿರಿ

ಚರ್ಚ್ ಸ್ಟ್ರೀಟ್ ರಸ್ತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಉದ್ಘಾಟಿಸಬೇಕಿತ್ತಾದರೂ ಸಮಯದ ಅಭಾವದಿಂದ ಮೇಯರ್ ಸಂಪತ್ ರಾಜ್ ಚರ್ಚ್ ಸ್ಟ್ರೀಟ್ ಲೋಕಾರ್ಪಣೆ ಗೊಳಿಸಿದ ನಂತರ ಈ ವಿಷಯ ತಿಳಿಸಿದರು.

Similar to New York's time square corner in Bengaluru Soon

ಚರ್ಚ್ ಸ್ಟ್ರೀಟ್ ರಸ್ತೆಯ ಕಾಮಗಾರಿ ಹಲವು ತಿಂಗಳುಗಳಿಂದ ನೆನಗುದಿಗೆ ಬಿದ್ದಿತ್ತು. ಮಳೆ ಹಾಗೂ ಇನ್ನಿತರೆ ಕಾರಣಗಳಿಂದಾಗಿ ಟೆಂಡರ್ ಶ್ಯೂರ್ ಕಾಮಗಾರಿ ಪೂರ್ಣವಾಗಿರಲಿಲ್ಲ. ಅಲ್ಲದೆ ಚರ್ಚ್ ಸ್ಟ್ರೀಟ್ ಕಾಮಗಾರಿಗೆ ವಿಧಿಸಿದ್ದ ಡೆಡ್ ಲೈನ್ ಮುಗಿದ ನಂತರವೂ ಹಲವು ತಿಂಗಳುಗಳ ಕಾಲ ಕಾಮಗಾರಿ ವಿಳಂಬವಾಗಿತ್ತು.

ನಮಗೆ ನ್ಯೂಯಾರ್ಕ್ ನ ಟೈಮ್ಸ್ ಮಾದರಿಯಲ್ಲಿ ಬೆಂಗಳೂರು ಸ್ಕ್ವೆರ್ ನಿರ್ಮಿಸಬೇಕೆಂಬ ಆಲೋಚನೆ ಇದೆ. ಈಗಾಗಲೇ ಚರ್ಚ್ ಸ್ಟ್ರೀಟ್ ನ ಪ್ರವೇಶ ದ್ವಾರದಲ್ಲಿ ಈ ಕುರಿತಂತೆ ಸ್ಥಳ ಪರಿಶೀಲನೆ ನಡೆಸಲಾಗಿದೆ. ಬೆಂಗಳೂರು ವಿಶ್ವದ ಅತಿ ವೇಗದಲ್ಲಿ ಬೆಳೆಯುವ ನಗರವಾಗಿದ್ದು ಸೆಲೆಬ್ರೇಷನ್ ಗೆ ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್ ಹೆಸರು ಮಾಡಿವೆ. ಈ ನಿಟ್ಟಿನಲ್ಲಿ ಬೆಂಗಳೂರನಲ್ಲಿ ಟೈಮ್ಸ್ ಬೆಂಗಳೂರು ಸ್ಕ್ವೇರ್ ನಿರ್ಮಾಣಕ್ಕಾಗಿ ಸಿದ್ಧತೆ ನಡೆಸಿದ್ದು, ಈ ಬೆಂಗಳೂರು ಅದಕ್ಕಾಗಿ ಉಳಿದ ರಸ್ತೆಗಳನ್ನು ಟೆಂಡರ್ ಶ್ಯೂರ್ ನಿಂದ ಅಭಿವೃದ್ಧಿಪಡಿಸಲು ಚಿಂತನೆ ನಡೆದಿದೆ.

ಚರ್ಚ್ ಸ್ಟ್ರೀಟ್ ರಸ್ತೆ ಪ್ರಮುಖ ಸ್ಥಾನವಾಗಿದ್ದು ವಾಹನಮುಕ್ತ ಪ್ರದೇಶ ಎಂದು ಘೋಷಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ರಸ್ತೆಯಲ್ಲಿ ಭಾರಿಪ್ರವೇಶವನ್ನು ಶೀಘ್ರವೇ ನಿಷೇಧಿಸಲಾಗುವುದು, ಈ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರಗಳ ಜತೆಗೆ ಬಿಬಿಎಂಪಿ ಮಾತುಕತೆ ನಡೆಸಿದೆ. ಆದರೆ ಟ್ಯಾಕ್ಸಿ ಮತ್ತು ಬೈಕ್ ಗಳ ಮೂಲಕ ಈ ರಸ್ತೆಯನ್ನು ಸಂಪರ್ಕಿಸಲು ಸುಗಮವಾಗಿ ಕೂಡ ಕ್ರಮ ಕೈಗೊಳ್ಳಲಾಗುವುದು ಎಂದರು.

ಬೆಂಗಳೂರು: ಚರ್ಚ್ ಸ್ಟ್ರೀಟ್ ರಸ್ತೆ ಸಂಚಾರಕ್ಕೆ ಮುಕ್ತಬೆಂಗಳೂರು: ಚರ್ಚ್ ಸ್ಟ್ರೀಟ್ ರಸ್ತೆ ಸಂಚಾರಕ್ಕೆ ಮುಕ್ತ

ಚರ್ಚ್ ಸ್ಟ್ರೀಟ್ ರಸ್ತೆ ಅಭಿವೃದ್ಧಿ : ಬಿಬಿಎಂಪಿಗೆ 3ನೇ ಗಡುವು!ಚರ್ಚ್ ಸ್ಟ್ರೀಟ್ ರಸ್ತೆ ಅಭಿವೃದ್ಧಿ : ಬಿಬಿಎಂಪಿಗೆ 3ನೇ ಗಡುವು!

English summary
The city may soon house a landmark,on the lines of New York city's Times square, at the Residency road and Brigade road intersection in the central business district where a war memorial stands at present.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X