ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚರ್ಚ್ ಸ್ಟ್ರೀಟ್ ದಾಳಿ ರುವಾರಿ: ಸಿಮಿ? ಅಲ್ ಉಮಾ?

By ವಿಕಾಸ್ ನಂಜಪ್ಪ
|
Google Oneindia Kannada News

ಉದ್ಯಾನನಗರಿ ಬೆಂಗಳೂರಿನಲ್ಲಿ ಭಾನುವಾರ ಚರ್ಚ್ ಸ್ಟ್ರೀಟ್ ನಲ್ಲಿ ಸಂಭವಿಸಿದ ಬಾಂಬ್‌ಸ್ಫೋಟದ ಹಿಂದೆ ನಿಷೇಧಿತ ಸಿಮಿ ಸಂಘಟನೆ ಅಥವಾ ಅಲ್ ಉಮಾ ಕೈವಾಡ ಇರುವ ಮಾಹಿತಿ ಹೊರ ಬಿದ್ದಿದೆ. ತನಿಖಾ ಸಂಸ್ಥೆಗಳು ಈ ಎರಡು ಸಂಘಟನೆಗಳ ಮೇಲೆ ಹೆಚ್ಚಿನ ಒತ್ತು ನೀಡಿ ತಮ್ಮ ತನಿಖೆ ಮುಂದುವರೆಸುತ್ತಿದ್ದಾರೆ. ಈ ನಡುವೆ ಬಂಧಿತ ಮೆಹ್ದಿ ಬಿಡುಗಡೆ ಒತ್ತಾಯಿಸಿ ವಿವಿಧ ಉಗ್ರ ಸಂಘಟನೆಗಳು ಒಗ್ಗೂಡಿ ಕಾರ್ಯಾಚರಣೆ ನಡೆಸಿರುವ ಸಾಧ್ಯತೆಯೂ ಕಂಡು ಬಂದಿದೆ.

ಮೇಲ್ನೋಟಕ್ಕೆ ಇದು ಭಯೋತ್ಪಾದಕರ ಕೃತ್ಯವೇ ಎಂಬುದು ಸಾಬೀತಾಗಿದೆ. ಸಿಮಿ ಸಂಘಟನೆಯ ಶಂಕಿತ ಉಗ್ರರು ಈ ದುಷ್ಕೃತ್ಯದಲ್ಲಿ ಪಾಲ್ಗೊಂಡಿರುವ ಸಾಧ್ಯತೆಯಿದೆ. ಕೆಲ ದಿನಗಳ ಹಿಂದೆ ಮಧ್ಯಪ್ರದೇಶದ ಖಂದ್ವಾ ಜೈಲ್‌ನಿಂದ ಸಿಮಿ ಸಂಘಟನೆಯ ಉಗ್ರರು ಪರಾರಿಯಾಗಿರುವುದು ಇದಕ್ಕೆ ಪುಷ್ಟಿ ನೀಡುತ್ತದೆ ಎಂಬ ಮಾಹಿತಿ ಗುಪ್ತಚರ ಇಲಾಖೆಯಿಂದ ಹೊರಬಿದ್ದಿದೆ. [ಬಾಂಬ್ ಬಿದ್ದರೂ ಬೆದರದ ಜನ, ಜೀವನ ಸರ್ವೇಸಾಮಾನ್ಯ]

ಹೊಸ ವರ್ಷಾಚರಣೆ ವೇಳೆ ದೇಶದ ವಿವಿಧೆಡೆ ಬಾಂಬ್ ಸ್ಫೋಟಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಬೇಕೆಂದು ಗುಪ್ತಚರ ಇಲಾಖೆ ಹಿರಿಯ ಅಧಿಕಾರಿಗಳು ಆಯಾ ರಾಜ್ಯಗಳ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದರು.

Who could have struck at Church Street?

ಅದರಂತೆ ಚರ್ಚ್ ಸ್ಟ್ರೀಟ್ ನಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ತಮಿಳುನಾಡು ಮೂಲದ ಅಲ್ ಉಮಾ ಸಂಘಟನೆ ಮುಖ್ಯವಾಗಿ ಬಿಜೆಪಿ ಹಾಗೂ ಆರೆಸ್ಸೆಸ್ ವಿರುದ್ಧ ಕಾರ್ಯಾಚರಣೆ ನಡೆಸುತ್ತಾ ಬಂದಿದ್ದು, ಜನನಿಬಿಡ ಚರ್ಚ್ ಸ್ಟ್ರೀಟ್ ನಲ್ಲಿ ಸ್ಫೋಟನಲ್ಲಿ ಅಲ್ ಉಮಾ ದಾಳಿ ನಡೆಸಿದ್ದೇ ದಿಟವಾದರೆ, ಮುಖ್ಯ ಕಾರಣ ಏನು ಎಂಬುದನ್ನು ತಿಳಿಯುವ ಕುತೂಹಲ ಎಲ್ಲರಲ್ಲೂ ಇದೆ.

ಪರಾರಿಯಾಗಿದ್ದ ಸಿಮಿ ಸಂಘಟನೆ ಉಗ್ರರು ತೆಲಂಗಾಣ, ಉತ್ತರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ತಮಿಳುನಾಡಿನಲ್ಲಿ ಬಾಂಬ್ ಸ್ಫೋಟಿಸುವ ಸಾಧ್ಯತೆಯಿದೆ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಎರಡು ಸಂಘಟನೆಗಳ ಕಾರ್ಯತಂತ್ರ ವಿಧಾನದತ್ತ ಒಂದು ಕಣ್ಣೋಟ ಇಲ್ಲಿದೆ: [ಬೆಂಗಳೂರಿನಲ್ಲಿ ಭೀತಿ ಹುಟ್ಟು ಹಾಕಿದ್ದು ಅಂಜುಮನ್ ಸಂಸ್ಥೆ]

ಅಲ್ ಉಮಾ(Al- Ummah) :
ಹಿಂದೂ ಸಂಘಟನೆತಮಿಳುನಾಡು ಮೂಲದ ಈ ಉಗ್ರ ಸಂಘಟನೆ ಆರಂಭವಾಯಿತು ಎನ್ನಲಾಗಿದೆ. ಬಾಬ್ರಿ ಮಸೀದಿ ಧ್ವಂಸ ಘಟನೆಯ ಸೇಡು ತೀರಿಸಿಕೊಳ್ಳಲು ಈ ಸಂಘಟನೆ ಕಾರ್ಯರೂಪಕ್ಕೆ ಬಂದಿದೆ. ತಮಿಳುನಾಡು ಸರ್ಕಾರ ಈಗಾಗಲೇ ಈ ಸಂಘಟನೆಯನ್ನು ನಿಷೇಧಿತ ಪಟ್ಟಿಗೆ ಸೇರಿಸಿದೆ. ಕೊಯಮತ್ತೂರಿನಲ್ಲಿ ನಡೆದ ಬಾಂಬ್ ಸ್ಫೋಟದ ನಂತರ ಅಲ್ ಉಮಾ ಬಗ್ಗೆ ಹೆಚ್ಚಿನ ಆತಂಕ ಶುರುವಾಯಿತು. [ಐಐಎಸ್ಸಿ ದಾಳಿ, ಚರ್ಚ್ ಸ್ಟ್ರೀಟ್ ಸ್ಫೋಟ ಕಾಕತಾಳೀಯ ]

ಅಲ್ ಉಮಾ ಸಂಘಟನೆ ಹಿಂದೂ ಸಂಘಟನೆ, ಮುಖಂಡರನ್ನು ಮುಖ್ಯವಾಗಿ ಟಾರ್ಗೆಟ್ ಮಾಡುವ ಮೂಲಕ ತನ್ನ ಕಾರ್ಯಾಚರಣೆ ಮುಂದುವರೆಸುತ್ತಾ ಬಂದಿದೆ. ಚೆನ್ನೈನ ಆರೆಸ್ಸೆಸ್ ಕಚೇರಿ ಮೇಲೆ ದಾಳಿ ನಡೆಸಿ 11 ಜನರನ್ನು ಹತ್ಯೆ ಮಾಡಿದ್ದು ಅಲ್ ಉಮಾ ಸಾಧನೆ.

Bengaluru Blast

1993ರಲ್ಲಿ ಕೊಯಮತ್ತೂರಿನ ಸೈಯದ್ ಅಹ್ಮದ್ ಬಾಷಾ ಹಾಗೂ ಎಚ್ ಜವಹಿರುಲ್ಲಾ ಅವರಿಂದ ಸ್ಥಾಪಿತವಾದ ಅಲ್ ಉಮಾ ಸಂಘಟನೆ 1998ರಲ್ಲಿ ಕೊಯಮತ್ತೂರಿನಲ್ಲಿ ಸ್ಫೋಟಕ್ಕೆ ಕಾರಣವಾಯಿತು. ಎಲ್ ಕೆ ಅಡ್ವಾಣಿ ಅವರನ್ನು ಟಾರ್ಗೆಟ್ ಮಾಡಿಕೊಂಡು ಹೂಡಿದ ಸಂಚು ಸ್ವಲ್ಪದರಲ್ಲಿ ವಿಫಲವಾಗಿತ್ತು.

2013ರಲ್ಲಿ ಬೆಂಗಳೂರಿಗೆ ಕಾಲಿಟ್ಟ ಈ ಉಗ್ರರು ಮಲ್ಲೇಶ್ವರ ಕಚೇರಿ ಬಳಿ ಬಾಂಬ್ ಸಿಡಿಸಿತ್ತು. ಈಗ ಚರ್ಚ್ ಸ್ಟ್ರೀಟ್ ಬಳಿ ಸ್ಫೋಟದ ಹಿಂದೆ ಅಲ್ ಉಮಾ ಕೈವಾಡದ ಶಂಕೆ ವ್ಯಕ್ತವಾಗಿದೆ. ಅದರೆ, ಇದರಿಂದ ಬಿಜೆಪಿಗೆ ಯಾವ ರೀತಿ ಸಂದೇಶ ಕಳಿಸಲು ಸಾಧ್ಯ ಎಂಬುದನ್ನು ಅಲ್ ಉಮಾ ಮುಖಂಡರೇ ವಿವರಿಸಬೇಕು.

ಸಿಮಿ
ಸಿಮಿ ಅಥವಾ Students Islamic Movement of India ಹಲವು ಬಾರಿ ನಿಷೇಧಕ್ಕೆ ಒಳಗಾದ ಸಂಘಟನೆ ಸಫ್ದಾರ್ ನಗೋರಿ ನೇತೃತ್ವದಲ್ಲಿ ಉಗ್ರವಾದಕ್ಕೆ ಮಾರು ಹೋದ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ ನ ಅಂಗವಾಗಿ ಕಾರ್ಯಾಚರಣೆ ನಡೆಸುತ್ತಾ ಬಂದಿದೆ. ಅಲ್ ಉಮಾ ದಂತೆ ರಾಜಕೀಯ ಮುಖಂಡರು ಅದರಲ್ಲೂ ಹಿಂದೂ ಮುಖಂಡರನ್ನು ಸಿಮಿ ಟಾರ್ಗೆಟ್ ಮಾಡುತ್ತಿದೆ.

ಬೋಧ್ ಗಯಾದಲ್ಲಿ ಸ್ಫೋಟ, ಪಾಟ್ನ, ಚೆನ್ನೈನಲ್ಲಿ ಸ್ಫೋಟದ ನಂತರ ವಿವಿಧ ನಗರಗಳಲ್ಲಿ ತನ್ನ ಚಟುವಟಿಕೆಯನ್ನು ಬಲಗೊಳಿಸಿಕೊಂಡಿದೆ. ಐಜಾಜುದ್ದೀನ್, ಮಹಮ್ಮದ್ ಅಸ್ಲಂ, ಅಮ್ಜದ್‌ಖಾನ್, ಜಾಕೀರ್‌ಹುಸೇನ್ ಸಾದಿಕ್, ಮೆಹಬೂಬ್ ಗುಡ್ಡು, ಅಬೂಫೈಸಲ್ ಅಕ್ಟೋಬರ್ 1ರಂದು ಜೈಲಿನಿಂದ ಪರಾರಿಯಾದ ಮೇಲೆ ಬೆಂಗಳೂರಿನ ಚರ್ಚ್‌ಸ್ಟ್ರೀಟ್ ಬಳಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಫೈಸಲ್ ನೇತೃತ್ವದಲ್ಲಿ ಸ್ಫೋಟ ನಡೆಸಿರುವ ಶಂಕೆ ವ್ಯಕ್ತವಾಗಿದೆ.

English summary
Chirch Street Blast: Looking at the ongoing investigations, it becomes clear that the police is focusing on two outfits believed to be involved in the Church Street blasts. The main focus is on the Al-Ummah at the moment while the police also do not rule out the possibility of the SIMI too being involved in it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X