• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜೆಪಿ ನಗರದಲ್ಲಿ ರೇಷ್ಮೆ, ಹತ್ತಿ ಬಟ್ಟೆಗಳ ಪ್ರದರ್ಶನ ಮಾರಾಟ

By Prasad
|

ಬೆಂಗಳೂರು, ಜೂ. 12 : ದೇಶದಾದ್ಯಂತ ಇರುವ ಕಾಟನ್ ಸಿಲ್ಕ್ ವೀವರ್ಸ್ ವೆಲ್‌ಫೇರ್ ಅಸೋಸಿಯೇಶನ್‌ನ ಕುಶಲ ಕಲಾವಿದರಿಂದ, ವಿನ್ಯಾಸಕಾರರಿಂದ ಸಿದ್ಧಗೊಂಡ ಸಾಂಪ್ರದಾಯಿಕ ಶುದ್ಧ ರೇಷ್ಮೆ ಮತ್ತು ಹತ್ತಿ ಬಟ್ಟೆಯ ಉಡುಪುಗಳು, ಸೀರೆಗಳ ಪ್ರದರ್ಶನ, ಮಾರಾಟ ಜೂನ್ 13ರಿಂದ 22ರವರೆಗೆ ಬೆಂಗಳೂರಿನಲ್ಲಿ ಏರ್ಪಡಿಸಲಾಗಿದೆ.

ಪ್ರದರ್ಶನ ಮತ್ತು ಮಾರಾಟಕ್ಕೆ 'ಸೈಕೋ' ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟ ನಟಿ ಅನಿತಾ ಭಟ್ ಅವರು, ಜೂನ್ 13ರ ಮಧ್ಯಾಹ್ನ ಹನ್ನೆರಡು ಗಂಟೆಗೆ ಚಾಲನೆ ನೀಡಲಿದ್ದಾರೆ. ಪ್ರದರ್ಶನ ಜೆ.ಪಿ.ನಗರ 3ನೇ ಹಂತ, ಬನ್ನೇರುಘಟ್ಟ ರಸ್ತೆಯ ಶಿಲ್ಪಾ ಕಲಾ ಮಂಟಪದಲ್ಲಿ (ಜಯದೇವ ಆಸ್ಪತ್ರೆ ಸಮೀಪ ಶಾಪರ್ಸ್ ಸ್ಟಾಪ್ ಎದುರುಗಡೆ) ಆಯೋಜಿಸಲಾಗಿದೆ.

ಕುಶಲಕರ್ಮಿಗಳು ಮತ್ತು ವಿನ್ಯಾಸಕಾರರಿಗೆ ಮಧ್ಯವರ್ತಿಗಳಿಲ್ಲದೆ ಉತ್ತಮ ಮಾರುಕಟ್ಟೆ ಒದಗಿಸುವುದೇ ಈ ಪ್ರದರ್ಶನದ ಉದ್ದೇಶ. ಹೀಗಾಗಿ ಇದಕ್ಕೆ ವೀವ್ಸ್ ಆಫ್ ಇಂಡಿಯಾ ಎಂಬ ಹೆಸರಿಡಲಾಗಿದೆ. ಕಾಟನ್ ಸಿಲ್ಕ್ ವೀವರ್ಸ್ ಅಸೋಸಿಯೇಷನ್ ಸ್ಥಾಪನೆಗೊಂಡದ್ದು ಕುಶಲಕರ್ಮಿಗಳು, ವಿನ್ಯಾಸಕಾರರು, ಸಾಮಾಜಿಕ ಕಾರ್ಯಕರ್ತರು, ಶಿಕ್ಷಣ ತಜ್ಞರು ಮತ್ತು ಪರಿಸರವಾದಿಗಳಿಂದ.

Silk and Cotton expo in JP Nagar, Bengaluru

ಸಾಂಪ್ರದಾಯಿಕ ರೇಷ್ಮೆ, ಹತ್ತಿ ಬಟ್ಟೆಯ ನೇಯ್ಗೆ ಮತ್ತು ಕಸೂತಿಯನ್ನು ಉತ್ತೇಜಿಸಲು ಹಾಗೂ ಸಮಕಾಲೀನ ಮತ್ತು ಆರ್ಥಿಕವಾಗಿ ಪ್ರಸ್ತುತವಾದ ಪರಿಸರಕ್ಕೆ ಅವರನ್ನು ಸಜ್ಜುಗೊಳಿಸುವುದಕ್ಕಾಗಿ ಈ ಸಂಘ ಜನ್ಮತಳೆದಿತ್ತು. ಅದರ ಫಲ ಇದೀಗ ಆಕರ್ಷಕ ವಿನ್ಯಾಸದ ರೇಷ್ಮೆ ಮತ್ತು ಹತ್ತಿ ಬಟ್ಟೆಗಳ ರೂಪದಲ್ಲಿ ಕಂಗೊಳಿಸಿದೆ.

ಈ ಪ್ರದರ್ಶನದಲ್ಲಿ 100ಕ್ಕೂ ಅಧಿಕ ವಿನ್ಯಾಸಕಾರರು ಮತ್ತು ನೇಯ್ಗೆಯವರು ಪಾಲ್ಗೊಂಡಿದ್ದಾರೆ. ಬನಾರಸ್ ಸಿಲ್ಕ್, ಗಡವಾಲ್, ಧರ್ಮಾವರಂ, ಜಾರ್ಜಿಯಸ್ ಉಪ್ಪಡಾಗಳು, ಜಾಮ್‌ದಾನಿ, ಜಮಾವರ್ಸ್, ಸಂಬಲ್ಪುರಿಗಳು ಸೇರಿವೆ. ದೇಶದ ನಾನಾ ಭಾಗದ ಸೊಗಡನ್ನು ಹೊತ್ತ ಸೀರೆ, ಉಡುಪುಗಳು, ಸಿಲ್ಕ್ ಸೀರೆ ಮತ್ತು ಕಾಟನ್ ಸೀರೆ ಪರಿಕರಗಳು, ಸೂಟ್ ಉಡುಪಿ ಸಾಮಗ್ರಿಗಳು, ಫ್ಯಾಷನ್ ಆಭರಣ, ಮನೆಯಲ್ಲೇ ಸಿದ್ಧಗೊಂಡ ವಿನ್ಯಾಸದ ಬಟ್ಟೆಗಳು ಇಲ್ಲಿ ಲಭ್ಯ ಇವೆ.

ಪ್ರದರ್ಶನಕಾರರಿಗೆ ಭಾರತದ ಬಣ್ಣ, ವೈವಿಧ್ಯತೆ ಮತ್ತು ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ಅವಕಾಶ ದೊರೆತಿದೆ. ರಾಜಸ್ತಾನ, ಆಂಧ್ರಪ್ರದೇಶ, ಕರ್ನಾಟಕ, ಬಿಹಾರ, ಒಡಿಶಾ, ಛತ್ತೀಸ್‌ಗಡ, ಮಧ್ಯಪ್ರದೇಶ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ ಸಹಿತ 14 ರಾಜ್ಯಗಳ ಕರಕುಶಲ ಕರ್ಮಿಗಳು ಮತ್ತು ವಿನ್ಯಾಸಕಾರರು ತಮ್ಮ ಕೌಶಲದ 1.50 ಲಕ್ಷಕ್ಕೂ ಅಧಿಕ ಉತ್ಪನ್ನಗಳನ್ನು ಇಲ್ಲಿ ಮಾರಾಟಕ್ಕೆ ಇಟ್ಟಿದ್ದಾರೆ.

ಕೈಮಗ್ಗ ಉದ್ಯಮದಲ್ಲಿ ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ಮತ್ತು ನೇಕಾರರಿಗೆ ಉತ್ತೇಜನ ನೀಡುವುದು ಈ ಕೈಮಗ್ಗ ಪ್ರದರ್ಶನದ ಉದ್ದೇಶ ಎಂದು ಹೇಳುತ್ತಾರೆ ವೀವ್ಸ್ ಆಫ್ ಇಂಡಿಯಾದ ಸಂಘಟಕ ಜಯೇಶ್ ಕುಮಾರ್ ಗುಪ್ತಾ. ಹೆಚ್ಚಿನ ಮಾಹಿತಿಗೆ 094122 58826.

English summary
Cotton Silk weavers welfare association has organized mega fair and sale of cotton and silk materials in JP Nagar in Bengaluru from June 13 to 22. Psycho fame Kannada actress Anitha Bhat will be inaugurating the exhibition cum sale. Weavers from 14 states in India are participating in this Weaves of India expo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more