ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಲ್ಕ್‌ಬೋರ್ಡ್‌ನಿಂದ ನಮ್ಮ ಮೆಟ್ರೋ ಕಾಮಗಾರಿ ಆರಂಭ

|
Google Oneindia Kannada News

ಬೆಂಗಳೂರು, ಜುಲೈ 23: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನೀಲಿ ಮಾರ್ಗದ ಸಿಲ್ಕ್‌ ಬೋರ್ಡ್ ಹಾಗೂ ಕೆಆರ್ ಪುರಂ ಭಾಗದ ಪ್ಯಾಕೇಜ್ 1ರ ಭೂಮಿ ಪೂಜೆ ಕಾರ್ಯಕ್ರಮ ನೆರವೇರಿದ್ದು, ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಫೇಸ್‌ 2ಎ ಅಡಿ ಬರುವ ಸಿಲ್ಕ್‌ಬೋರ್ಡ್‌ನಿಂದ ಕೆಆರ್‌ ಪುರಂವರೆಗಿನ 18.3 ಕಿ.ಮೀ ಕಾಮಗಾರಿಗಳನ್ನು ಎರಡು ಪ್ಯಾಕೇಜ್‌ಗಳಾಗಿ ವಿಭಾಗಿಸಲಾಗಿದ್ದು, ಮೊದಲ ಪ್ಯಾಕೇಜ್‌ನ್ನುಅಫ್ಕೋನ್ಸ್ ಇನ್‌ಫ್ರಾಸ್ಟ್ರಕ್ಚರ್ ಮತ್ತು ಎರಡನೇ ಪ್ಯಾಕೇಜ್‌ನ್ನು ಶಂಕರ ನಾರಾಯಣ ಕನ್‌ಸ್ಟ್ರಕ್ಷನ್ಸ್ ಲಿಮಿಟೆಡ್ ಪಡೆದುಕೊಂಡಿದೆ.

 ಕೆ.ಆರ್ ಪುರಂ ನಮ್ಮ ಮೆಟ್ರೋ ಕಾಮಗಾರಿ ಯಾವಾಗ ಶುರು? ಕೆ.ಆರ್ ಪುರಂ ನಮ್ಮ ಮೆಟ್ರೋ ಕಾಮಗಾರಿ ಯಾವಾಗ ಶುರು?

ಮೆಟ್ರೋ ಕಾಮಗಾರಿಗೆ 5,227 ಕೋಟಿ ರೂ. ವೆಚ್ಚ ತಗುಲಲಿದೆ. ಅಫ್ಕೋನ್ಸ್ ಇನ್‌ಫ್ರಾಸ್ಟ್ರಕ್ಚರ್ ಮತ್ತು ಶಂಕರನಾರಾಯಣ ಕನ್‌ಸ್ಟ್ರಕ್ಷನ್ ಕಾಮಗಾರಿ ನಡೆಸಲಿದೆ. ಕೆಆರ್ ಪುರಂ, ಮಹದೇವಪುರ, ಡಿಆರ್‌ಡಿಒ, ಕ್ರೀಡಾ ಸಂಕೀರ್ಣ, ದೊಡ್ಡನೆಕ್ಕುಂದಿ, ಇಸ್ರೋ, ಮಾರತ್‌ಹಳ್ಳಿ, ಕಾಡು ಬೀಸನಹಳ್ಳಿ-ಬೆಳ್ಳಂದೂರು, ಇಬ್ಬಲೂರು, ಆಗರ ಕೆರೆ, ಎಚ್‌ಎಸ್‌ಆರ್ ಬಡಾವಣೆ, ಸಿಲ್ಕ್‌ಬೋರ್ಡ್ ನಿಲ್ದಾಣಗಳು ಇರಲಿವೆ.

 ಏನೇನು ಕಾಮಗಾರಿ?

ಏನೇನು ಕಾಮಗಾರಿ?

ಮೊದಲ ಪ್ಯಾಕೇಜ್‌ನಲ್ಲಿ ಸಿಲ್ಕ್‌ಬೋರ್ಡ್‌ನಿಂದ 9.85 ಕಿ,ಮೀ ಎಲಿವೇಟೆಡ್ ಕಾಮಗಾರಿ ನಡೆಯಲಿದ್ದು, ಸೆಂಟ್ರಲ್ ಸಿಲ್ಕ್‌ ಬೋರ್ಡ್ ನಿಲ್ದಾಣ, ಎಚ್‌ಎಸ್‌ಆರ್‌ ಲೇಔಟ್, ಅಗರ, ಇಬ್ಬಲೂರು, ಬೆಳ್ಳಂದೂರು, ಕಾಡುಬೀಸನಹಳ್ಳಿ ಮೆಟ್ರೋ ನಿಲ್ದಾಣ ಮತ್ತು ಸಿಲ್ಕ್‌ಬೋರ್ಡ್ 2.84 ಕಿ.ಮೀ ಫ್ಲೈಓವರ್ ನಿರ್ಮಾಣವಾಗಲಿದೆ. ಗುರುವಾರ ಕಾಡುಬೀಸನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಭೂಮಿ ಪೂಜೆ ನಡೆದಿದ್ದು, ಪಿಲ್ಲಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರೊಂದಿಗೆ ಮೊದಲ ಪ್ಯಾಕೇಜ್‌ನ ಕಾಮಗಾರಿ ಕೂಡ ಪ್ರಾರಂಭವಾದಂತಾಗಿದೆ.

 ಎರಡನೇ ಪ್ಯಾಕೇಜ್ ಪಿಲ್ಲಿಂಗ್ ಕಾಮಗಾರಿ ಶುರುವಾಗಿತ್ತು

ಎರಡನೇ ಪ್ಯಾಕೇಜ್ ಪಿಲ್ಲಿಂಗ್ ಕಾಮಗಾರಿ ಶುರುವಾಗಿತ್ತು

ಕಳೆದ ವಾರ ಎರಡನೇ ಪ್ಯಾಕೇಜ್‌ನ ಪಿಲ್ಲಿಂಗ್ ಕಾಮಗಾರಿಯನ್ನು ಪ್ರಾರಂಭಿಸಲಾಗಿತ್ತು. ಪಿಲ್ಲಿಂಗ್ ಕಾಮಗಾರಿ ನಡೆದ 28 ದಿನಗಳ ಬಳಿಕ ಉಳಿದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಹೀಗಾಗಿ ಆಗಸ್ಟ್ ಕೊನೆಯ ವಾರದಿಂದ ಮೆಟ್ರೋದ ಈ ಭಾಗಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ.

 ಮಣ್ಣಿನ ಪರೀಕ್ಷೆ

ಮಣ್ಣಿನ ಪರೀಕ್ಷೆ

18 ಕಡೆ ಈಗಾಗಲೇ ಮಣ್ಣಿನ ಪರೀಕ್ಷೆ ನಡೆಸಲಾಗಿದೆ. ಇನ್ನು 12 ಕಡೆ ಮಣ್ಣಿನ ಪರೀಕ್ಷೆ ನಡೆಸುತ್ತಿದ್ದೇವೆ. ಟೆಂಡರ್ ಕರೆಯುವ ಮೊದಲು ಕೂಡ ಮಣ್ಣಿನ ಪರೀಕ್ಷೆ ನಡೆಸಿದ್ದೆವು. ಪರೀಕ್ಷೆಯ ಫಲಿತಾಂಶ ಉತ್ತಮವಾಗಿದ್ದು, 15ರಿಂದ 20 ಮೀಟರ್‌ಗಳಲ್ಲಿ ಕಲ್ಲು ಸಿಕ್ಕಿದೆ. ಬಲಿಷ್ಠ ಕಲ್ಲು ಸಿಗದ ಭಾಗದಲ್ಲಿ ಫ್ರಿಕ್ಷನ್ ಪೈಲ್ಸ್‌ಗಳನ್ನು ನಿರ್ಮಿಸುತ್ತಿದ್ದು, ಈ ಭಾಗದ ಮೆಟ್ರೋ ಕಾಮಗಾರಿ ವೇಗವಾಗಿ ಸಾಗುವ ವಿಶ್ವಾಸವನ್ನು ಎಂಜಿನಿಯರ್ ವ್ಯಕ್ತಪಡಿಸಿದ್ದಾರೆ.
ಪ್ಯಾಕೇಜ್ 2 ಕೋಡಿಬೀಸನಹಳ್ಳಿಯಿಂದ ಕೆಆರ್ ಪುರದವರೆಗಿನ 9.77 ಕಿ.ಮೀ ಕಾಮಗಾರಿ ನಡೆಯಲಿದ್ದು, 7 ನಿಲ್ದಾಣಗಳು ಬರಲಿವೆ. ಈ ಎರಡೂ ಕಾಮಗಾರಿಗಳ ಮುಕ್ತಾಯಕ್ಕೆ 30 ತಿಂಗಳು ಗಡುವುದು ನೀಡಲಾಗಿದೆ.

 ಪೈಲ್ ನಿರ್ಮಾಣ ಕಾರ್ಯ

ಪೈಲ್ ನಿರ್ಮಾಣ ಕಾರ್ಯ

ಪೈಲ್ ನಿರ್ಮಾಣದ ಸಂದರ್ಭದಲ್ಲಿ ನಾವು 30 ಮೀಟರ್ ರಂಧ್ರ ಕೊರೆದು ಸ್ಟೀಲ್ ಮತ್ತು ಕಾಂಕ್ರೀಟ್‌ಗಳಿಂದ ಅದನ್ನು ತುಂಬುತ್ತೇವೆ, ಅದರ ಮೇಲೆ ಸಾಮಾನ್ಯವಾಗಿ ಕೂರುವ ಭಾರಕ್ಕಿಂತ ಎರಡು ಪಟ್ಟು ಹೆಚ್ಚು ಭಾರ ಹಾಕುತ್ತೇವೆ. ಅಂದರೆ 700 ಮೆಟ್ರಿಕ್ ಟನ್ ಭಾರ ಹೊರುವ ಪೈಲ್ ಮೇಲೆ 1500ಮೆಟ್ರಿಕ್ ಟನ್ ಭಾರ ಹಾಕುತ್ತೇವೆ. ಮೇಲಿನ ಭಾರದ ಜತೆಗೆ ಬದಿಯಿಂದಲೂ ಒತ್ತಡ ಹೇರುವ ಪ್ರಕ್ರಿಯೆ ನಡೆಯುತ್ತದೆ ಎಂದು ಎಂಜಿನಿಯರ್ ರಾಘವೇಂದ್ರ ಹೇಳಿದ್ದಾರೆ.

Recommended Video

ಬರುವಾಗ ಒಟ್ಟಿಗೇ ಬಂದಿದೀವಿ ಹೋಗುವಾಗ್ಲೂ ಒಟ್ಟಿಗೆ ಹೋಗ್ತೀವಿ | Oneindia Kannada

English summary
Bengaluru Silk Board- KR Puram Namma Metro Work Begins From July 22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X