ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊರ ವರ್ತುಲ ರಸ್ತೆ ಮೆಟ್ರೋ; ಮಹತ್ವದ ಹೆಜ್ಜೆ ಇಟ್ಟ ಬಿಎಂಆರ್‌ಸಿಎಲ್

|
Google Oneindia Kannada News

ಬೆಂಗಳೂರು, ಏಪ್ರಿಲ್ 23 : ಸೆಂಟ್ರಲ್ ಸಿಲ್ಕ್ ಬೋರ್ಡ್ - ಕೆ. ಆರ್. ಪುರ ಸಂಪರ್ಕಿಸುವ ನಮ್ಮ ಮೆಟ್ರೋ ಯೋಜನೆಯಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಬಿಎಂಆರ್‌ಸಿಎಲ್ ಭೂ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಿದ್ದು, ಕಾಮಗಾರಿಗೆ ವೇಗ ಸಿಗಲಿದೆ.

ಬಿಎಂಆರ್‌ಸಿಎಲ್ ಮಂಗಳವಾರ ಕೆ. ಆರ್. ಪುರದಲ್ಲಿ ಸುಮಾರು 1 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆ ಪ್ರಕಟಿಸಿದೆ. ಈ ಅಧಿಸೂಚನೆ ಅನ್ವಯ ನಿಗದಿತ ಸ್ಥಳದಲ್ಲಿ ಯಾವುದೇ ಕಾಮಗಾರಿಯನ್ನು ಆರಂಭಿಸುವಂತಿಲ್ಲ.

ಬೆಂಗಳೂರು; ಮೇ 3ರ ತನಕ ನಮ್ಮ ಮೆಟ್ರೋ ಸಂಚಾರ ಸ್ಥಗಿತ ಬೆಂಗಳೂರು; ಮೇ 3ರ ತನಕ ನಮ್ಮ ಮೆಟ್ರೋ ಸಂಚಾರ ಸ್ಥಗಿತ

ಕೆ. ಆರ್. ಪುರದ ಲೌರಿ ಮೆಮೋರಿಯಲ್ ಸ್ಕೂಲ್‌ಗೆ ಸೇರಿದ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ಇಲ್ಲಿ ಹೊರವರ್ತುಲ ರಸ್ತೆಯ ಪವರ್ ಸ್ಟೇಷನ್ ನಿರ್ಮಾಣವಾಗಲಿದೆ. ಇದರ ನಿರ್ಮಾಣ ಕಾರ್ಯ ಮುಕ್ತಾಯಗೊಳ್ಳುತ್ತಿದ್ದಂತೆ 18 ಕಿ. ಮೀ. ಮೆಟ್ರೋ ಮಾರ್ಗದ ಕಾಮಗಾರಿ ಚುರುಕಾಗಲಿದೆ.

ಕೊರೊನಾ; ಮೆಟ್ರೋ ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ಮುಖ್ಯ ಸೂಚನೆಕೊರೊನಾ; ಮೆಟ್ರೋ ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ಮುಖ್ಯ ಸೂಚನೆ

ಈ ಜಾಗವನ್ನು ಸ್ವಾಧೀನಪಡಿಸಿಕೊಂಡರೆ ಸೆಂಟ್ರಲ್ ಸಿಲ್ಕ್ ಬೋರ್ಡ್ - ಕೆ. ಆರ್. ಪುರ ಮೆಟ್ರೋ ಮಾರ್ಗದ ಎಲ್ಲಾ ಭೂ ಸ್ವಾಧೀನ ಕಾರ್ಯ ಮುಕ್ತಾಯವಾದಂತೆ ಆಗಲಿದೆ. 2019ರಿಂದ ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ 2ನೇ ಎ ಹಂತದ ಮಾರ್ಗಕ್ಕೆ ಭೂ ಸ್ವಾಧೀನ ಕಾರ್ಯ ಕೈಗೊಂಡಿತ್ತು.

ಕರ್ನಾಟಕ ಬಜೆಟ್ 2020; ನಮ್ಮ ಮೆಟ್ರೋ ಯೋಜನೆ ವಿಸ್ತರಣೆ ಕರ್ನಾಟಕ ಬಜೆಟ್ 2020; ನಮ್ಮ ಮೆಟ್ರೋ ಯೋಜನೆ ವಿಸ್ತರಣೆ

ಭೂ ಸ್ವಾಧೀನ ಕಾರ್ಯ ಆಗಿದೆ

ಭೂ ಸ್ವಾಧೀನ ಕಾರ್ಯ ಆಗಿದೆ

ಸೆಂಟ್ರಲ್ ಸಿಲ್ಕ್ ಬೋರ್ಡ್ - ಕೆ. ಆರ್. ಪುರ ಸಂಪರ್ಕಿಸುವ ಮಾರ್ಗದ ಭೂ ಸ್ವಾಧೀನ ಕಾರ್ಯ ಮುಕ್ತಾಯಗೊಂಡಿದೆ. ಎಲ್ಲೆಲ್ಲಿ ನಿಲ್ದಾಣ ಬರಲಿದೆಯೋ ಅದನ್ನು ವಶಕ್ಕೆ ಪಡೆಯಲಾಗಿದೆ. ಒಂದು ಜಾಗದ ವಿಚಾರ ಕೋರ್ಟ್ ಮೆಟ್ಟಿಲೇರಿತ್ತು. ಅದರ ವಿವಾದವೂ ಈಗ ಬಹೆಹರಿದಿದೆ. ಒಂದು ಎಕರೆ ಜಾಗದ ಸ್ವಾಧೀನ ಬಾಕಿ ಇತ್ತು ಎರಡು ಮೂರು ತಿಂಗಳಿನಲ್ಲಿ ಅದು ಬಗೆಹರಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

11 ಎರಕೆ ಭೂಮಿ ಸ್ವಾಧೀನ

11 ಎರಕೆ ಭೂಮಿ ಸ್ವಾಧೀನ

ಬಿಎಂಆರ್‌ಸಿಎಲ್ ಹೊರ ವರ್ತುಲ ರಸ್ತೆಯ ನಮ್ಮ ಮೆಟ್ರೋ ಮಾರ್ಗಕ್ಕಾಗು ಸುಮಾರು 11 ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಂಡಿದೆ. ಮೆಟ್ರೋ ನಿಲ್ದಾಣಗಳು ನಿರ್ಮಾಣವಾದ ಜಾಗದಲ್ಲಿ ಕೆಲಸ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಅವಶ್ಯಕತೆ ಬರಬಹುದು ಎನ್ನುತ್ತಾರೆ ಅಧಿಕಾರಿಗಳು.

ಟೆಂಡರ್ ವಿಳಂಬವಾಗುತ್ತಿದೆ

ಟೆಂಡರ್ ವಿಳಂಬವಾಗುತ್ತಿದೆ

ಬಿಎಂಆರ್‌ಸಿಎಲ್ ಹೊರವರ್ತುಲ ರಸ್ತೆಯ ನಮ್ಮ ಮೆಟ್ರೋ ಮಾರ್ಗದ ಟೆಂಡರ್ ಪ್ರಕ್ರಿಯೆ ಸೇರಿದಂತೆ ಇತರ ಕೆಲಸಗಳನ್ನು ಬಾಕಿ ಉಳಿಸಿದೆ. ಕಳೆದ ಡಿಸೆಂಬರ್‌ನಲ್ಲಿಯೇ ಟೆಂಡರ್ ಆಗಿದ್ದರೂ ಅದನ್ನು ಇನ್ನೂ ತೆರೆದಿಲ್ಲ. ಹೊರವರ್ತುಲ ಮೆಟ್ರೋ ಯೋಜನೆಗೆ ಕೇಂದ್ರ ಅನುದಾನ ನೀಡಲಿದೆಯೇ?, ಇಲ್ಲವೇ? ಎಂಬುದು ಇನ್ನೂ ಅಂತಿಮವಾಗಿಲ್ಲ.

5,994 ಕೋಟಿ ವೆಚ್ಚ

5,994 ಕೋಟಿ ವೆಚ್ಚ

ಹೊರವರ್ತುಲ ರಸ್ತೆ ನಮ್ಮ ಮೆಟ್ರೋ ಯೋಜನೆಗೆ 5,994 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಡಿಪಿಆರ್ ಸಿದ್ಧಪಡಿಸಿ ರಾಜ್ಯ ಸರ್ಕಾರದ ಒಪ್ಪಿಗೆ ಬಳಿಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೆ, ಮೆಟ್ರೋ ನಿಲ್ದಾಣಗಳ ನಿರ್ಮಾಣ ವೆಚ್ಚ ಕಡಿಮೆ ಮಾಡುವುದು ಸೇರಿದಂತೆ ಹಲವು ಬದಲಾವಣೆಗಳನ್ನು ಕೇಂದ್ರ ಸೂಚಿಸಿದೆ. ಆದ್ದರಿಂದ, ಯೋಜನೆಗೆ ಸಹಕಾರ ದೊರೆಯಲಿದೆಯೇ? ಕಾದು ನೋಡಬೇಕು.

English summary
BMRCL issued a preliminary notification to acquire 4,562 square metre of land in K. R. Puram. In this land power substation will be build for Central Silk Board and K. R. Puram metro line.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X