ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿರುವುದು ಎಂಟೇ ಟ್ಯಾಕ್ಸಿ ಸೇವೆಗಳು!

|
Google Oneindia Kannada News

ಬೆಂಗಳೂರು, ಡಿ. 12 : ನಗರದಲ್ಲಿ ಸೇವೆ ನೀಡುತ್ತಿರುವ ಟ್ಯಾಕ್ಸಿಗಳಲ್ಲಿ ಕೇವಲ 8 ಕಂಪನಿಗಳು ಮಾತ್ರ ಸಾರಿಗೆ ಇಲಾಖೆ ಅಡಿಯಲ್ಲಿ ನೋಂದಾವಣೆಯಾಗಿವೆ! ಹೌದು.. ಸಾರಿಗೆ ಇಲಾಖೆ ಅಧಿಕಾರಿಗಳು ಈ ಮಾಹಿತಿಯನ್ನು ಬಹಿರಂಗ ಮಾಡಿದ್ದಾರೆ.

ಅಧಿಕಾರಿಗಳು ಹೇಳುವಂತೆ, ಮೇರು, ಒಲಾ, ಇಸಿ, ಕೆಎಸ್ ಟಿಡಿಸಿ, ರಾಪಿಡ್, ಸ್ಪೋಟ್ ಸಿಟಿ, ಬೆಂಗಳೂರು ಕ್ಲಬ್ಸ್ ಮತ್ತು ಮೆಗಾ ಕ್ಯಾಬ್ಸ್ ಗಳು ಮಾತ್ರ ಸರ್ಕಾರದ ನಿಯಮಗಳಿಗೆ ಬದ್ಧವಾಗಿ ಕೆಲಸ ಮಾಡುತ್ತಿವೆ.[ಕ್ಯಾಬ್ ಬ್ಯಾನ್: ಬೆಂಗಳೂರು ಟ್ಯಾಕ್ಸಿ ಚಾಲಕರು ಏನಂತಾರೆ?]

taxi

ಈ ಟ್ಯಾಕ್ಸಿಗಳು ಮಾತ್ರ ಕಾಲಕಾಲಕ್ಕೆ ಎಲ್ಲ ದಾಖಲಾತಿಗಳನ್ನು ನೀಡುತ್ತಿವೆ. ಉಳಿದವು ಕಾನೂನುಬಾಹಿರವಾಗಿಯೇ ಕಾರ್ಯನಿರ್ವಹಿಸುತ್ತಿವೆ. ಅಲ್ಲದೇ ಗ್ರಾಕರಿಂದ ಹಣ ಸುಲಿಗೆ ಮಾಡುತ್ತಿವೆ. ಇನ್ನು ಮುಂದೆ ನಿಗದಿಗಿಂತ ಹೆಚ್ಚು ಹಣ ವಸೂಲಿ ಮಾಡಿದ್ದು ಕಂಡುಬಂದರೆ ದಂಡ ವಿಧಿಸಲಾಗುವುದು. ಜತೆಗೆ ಅವುಗಳ ಓಡಾಟವನ್ನು ನಿಷೇಧಿಸಲಾಗುವುದು ಎಂದು ಸಾರಿಗೆ ಇಲಾಖೆ ಆಯುಕ್ತ ರಾಮೇಗೌಡ ಎಚ್ಚರಿಸಿದ್ದಾರೆ.

ರಾಜ್ಯ ಸರ್ಕಾರ ವಿಧಿಸಿರುವ ಸೂಚನೆಗಳನ್ನು ಪಾಲಿಸಲು ಡೆಡ್ ಲೈನ್ ನೀಡಲಾಗಿದೆ. ಅಷ್ಟರೊಳಗೆ ಎಲ್ಲಾ ಟ್ಯಾಕ್ಸಿ ಮಾಲೀಕರು ಸಕಲ ದಾಖಲಾತಿ ಒದಗಿಸಿ ಕಾಗದ ಪತ್ರ ತಯಾರುಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.[ಹಗ್ಗ ಕಟ್ಟಿ ಬರಿಗೈಯಲ್ಲಿ ಟ್ಯಾಕ್ಸಿ ಎಳೆದು ಭಾರೀ ಪ್ರತಿಭಟನೆ]

ಈ ಬಗ್ಗೆ ಪ್ರತಿಕ್ರಿಯಿಸಿರುವ ಟ್ಯಾಕ್ಸಿ ಸಂಸ್ಥೆಯೊಂದು, ನಾವು ಸರ್ಕಾರಿ ನಿಯಮಗಳಿಗೆ ಬದ್ಧವಾಗಿಯೇ ಕೆಲಸ ಮಾಡುತ್ತಿದ್ದೇವೆ, ಯಾವ ಆಧಾರದಲ್ಲಿ ಹೀಗೆ ಹೇಳಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ಅಲ್ಲದೇ ಸರ್ಕಾರದಿಂದ ಇಲ್ಲಿಯವರೆಗೆ ಯಾವುದೇ ಸುತ್ತೋಲೆ ಬಂದಿಲ್ಲ ಎಂದಿದೆ.

ನಗರದ ವಿವಿಧೆಡೆ ಗುರುವಾರ ದಾಳಿ ನಡೆಸಿದ ಸಾರಿಗೆ ಇಲಾಖೆ ಅಧಿಕಾರಿಗಳು 250 ಕ್ಕೂ ಹೆಚ್ಚು ಕ್ಯಾಬ್ ಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಡಿಜಿಟಲ್ ಮೀಟರ್ ಇಲ್ಲದಿರುವುದು, ಪರವಾನಿಗೆ ಉಲ್ಲಂಘನೆ, ಸಮರ್ಪಕ ದಾಖಲೆ ಕೊರತೆ, ಬೋರ್ಡ್ ಇಲ್ಲದಿರುವುದು ಹೀಗೆ ಕಾನೂನು ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸ್ ಇಲಾಖೆ ಹೊರಡಿಸಿರುವ ಅಧಿಸೂಚನೆ ಪರಿಶೀಲನೆಗೆ ಮುಂದಾದಾಗ ಹೊಸ ಹೊಸ ಮಾಹಿತಿಗಳು ಹೊರಬರುತ್ತಿವೆ.

English summary
Bengaluru: Only eight taxi service providers in the City are registered with the Transport department and hence can continue their operations, according to the officials of the Transport department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X