ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೊರಗುಂಟೆಪಾಳ್ಯದಲ್ಲಿ ಶೀಘ್ರವೇ ಸಿಗ್ನಲ್ ರಹಿತ ರಸ್ತೆ

|
Google Oneindia Kannada News

ಬೆಂಗಳೂರು, ನವೆಂಬರ್ 29 : ಬೆಂಗಳೂರು-ತುಮಕೂರು ಸಂಪರ್ಕಿಸುವ ಗೊರಗುಂಟೆಪಾಳ್ಯ ರಸ್ತೆ ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಈ ರಸ್ತೆಯಲ್ಲಿ ಅಂಡರ್ ಪಾಸ್ ನಿರ್ಮಿಸಿ, ಶೀಘ್ರವೇ ಸಿಗ್ನಲ್ ರಹಿತಗೊಳಿಸಲು ಯೋಜನೆ ರೂಪಿಸಲಾಗುತ್ತಿದೆ.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ತುಮಕೂರು ಸಂಪರ್ಕಿಸುವ ಗೊರಗುಂಟೆಪಾಳ್ಯ ರಸ್ತೆಯ ಸಿಗ್ನಲ್ ಬಳಿ ಅಂಡರ್ ಪಾಸ್ ನಿರ್ಮಿಸಿ ಸಿಗ್ನಲ್ ಫ್ರೀ ರಸ್ತೆಯಾಗಿಸುವ ಕುರಿತು ಸ್ಥಳ ಪರಿಶೀಲನೆ ನಡೆಸಿದರು.

ಬೆಂಗಳೂರು-ಕನಕಪುರ 4 ಪಥದ ರಸ್ತೆ ಕಾಮಗಾರಿ ಮತ್ತೆ ಆರಂಭ ಬೆಂಗಳೂರು-ಕನಕಪುರ 4 ಪಥದ ರಸ್ತೆ ಕಾಮಗಾರಿ ಮತ್ತೆ ಆರಂಭ

ಈ ರಸ್ತೆಯಲ್ಲಿ ದಿನದಿಂದ ದಿನಕ್ಕೆ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆ. ಸಿಗ್ನಲ್ ದಾಟಿ ಜನರು ಮುಂದೆ ಸಾಗಲು ಪರದಾಡಬೇಕಿದೆ. ಆದ್ದರಿಂದ, ರಸ್ತೆಯನ್ನು ಸಿಗ್ನಲ್ ಫ್ರೀಯಾಗಿಸುವ ಯೋಜನೆಯನ್ನು ರೂಪಿಸಲಾಗಿದ್ದು, ಅಧಿಕಾರಿಗಳ ಜೊತೆ ಮಾತುಕತೆಯನ್ನು ಶಾಸಕರು ನಡೆಸಿದ್ದಾರೆ.

ಸ್ಮಾರ್ಟ್‌ ಸಿಟಿ ಯೋಜನೆ; ಬೆಂಗಳೂರಿನ 20 ರಸ್ತೆ ಅಭಿವೃದ್ಧಿ ಸ್ಮಾರ್ಟ್‌ ಸಿಟಿ ಯೋಜನೆ; ಬೆಂಗಳೂರಿನ 20 ರಸ್ತೆ ಅಭಿವೃದ್ಧಿ

Signal Free Road Soon AT Goraguntepalya

ಗೊರಗುಂಟೆಪಾಳ್ಯ ರಸ್ತೆಯ ಸಿಗ್ನಲ್ ಬಳಿ ನಮ್ಮ ಮೆಟ್ರೋ ಮಾರ್ಗವಿದೆ. ಆದ್ದರಿಂದ, ಫ್ಲೈ ಓವರ್ ನಿರ್ಮಿಸುವುದು ಅಸಾಧ್ಯವಾಗಿದೆ. ಅಂಡರ್ ಪಾಸ್ ನಿರ್ಮಾಣ ಮಾಡಲು ವಾಹನಗಳನ್ನು ಸಿಗ್ನಲ್ ಮುಕ್ತಗೊಳಿಸುವುದು ಚಿಂತನೆಯಾಗಿದೆ.

ಮಹಾನಗರದಲ್ಲಿ ರಸ್ತೆ ಅಪಘಾತ; ಬೆಂಗಳೂರಿಗೆ 3ನೇ ಸ್ಥಾನ ಮಹಾನಗರದಲ್ಲಿ ರಸ್ತೆ ಅಪಘಾತ; ಬೆಂಗಳೂರಿಗೆ 3ನೇ ಸ್ಥಾನ

ತುಮಕೂರು ರಸ್ತೆ ಮೂಲಕ ಬೆಂಗಳೂರಿಗೆ ಬರುವವರು ಗೊರಗುಂಟೆಪಾಳ್ಯ ರಸ್ತೆಯ ಸಿಗ್ನಲ್ ಬಳಿ ಸಂಚಾರ ದಟ್ಟಣೆ ಅನುಭವಿಸುವುದು ಸಾಮಾನ್ಯವಾಗಿದೆ. ಹಲವು ಬಾರಿ ಅಂಬ್ಯುಲೆನ್ಸ್‌ಗಳು ಸಹ ಇಲ್ಲಿ ಸಿಕ್ಕಿಹಾಕಿಕೊಳ್ಳುತ್ತವೆ.

Signal Free Road Soon AT Goraguntepalya

ಈ ರಸ್ತೆ ಆರ್. ಆರ್. ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಶಾಸಕ ಮುನಿರತ್ನ ಅವರು ಅಧಿಕಾರಿಗಳ ಜೊತೆ ಯೋಜನೆ ಬಗ್ಗೆ ಚರ್ಚಿಸಿದ್ದಾರೆ. ಯೋಜನೆಗೆ ಒಪ್ಪಿಗೆ ಸಿಕ್ಕಿದರೆ ಬಿಬಿಎಂಪಿ ಕಾಮಗಾರಿಯನ್ನು ಕೈಗೊಳ್ಳುವ ನಿರೀಕ್ಷೆ ಇದೆ.

English summary
Rajarajeshwari Nagar MLA Munirathna inspect the place to make Goraguntepalya road signal free. Goraguntepalya connects the Bengaluru and Tumkur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X