ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯಗೆ ವಿಸಿಕೆ ಪಕ್ಷದ 'ಅಂಬೇಡ್ಕರ್ ಸುದಾರ್' ಪ್ರಶಸ್ತಿ

|
Google Oneindia Kannada News

ಬೆಂಗಳೂರು ಜುಲೈ 22: ತಮಿಳುನಾಡು ರಾಜ್ಯದ ವಿಡುಥಲೈ ಚಿರುಥೈಗಳ್ ಕಟ್ಚಿ (ವಿಸಿಕೆ) ಪಕ್ಷ ಕೊಡಮಾಡುವ 'ಅಂಬೇಡ್ಕರ್ ಸುದಾರ್' ಪ್ರಶಸ್ತಿಯನ್ನು ಈ ವರ್ಷ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವೀಕರಿಸಲಿದ್ದಾರೆ.

ಈ ಕುರಿತ ಮಾಹಿತಿಯನ್ನು ಟ್ವಿಟ್‌ನಲ್ಲಿ ಹಂಚಿಕೊಂಡಿರುವ ಸಿದ್ದರಾಮಯ್ಯ ಅವರು, 'ಅಂಬೇಡ್ಕರ್ ಸುದಾರ್' ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಿದ್ದಕ್ಕೆ ವಿಡುದಲೈ ಚಿರುದೈಗಳ್ ಕಟ್ಚಿ (ವಿಸಿಕೆ) ಪಕ್ಷದ ಮುಖಂಡರಿಗೆ ಧನ್ಯವಾದ ತಿಳಿಸಿದ್ದಾರೆ.

ಶುಕ್ರವಾರ ಬೆಂಗಳೂರಿಗೆ ಆಗಮಿಸಿದ ತಮಿಳುನಾಡಿನ ವಿಡುದಲೈ ಚಿರುದೈಗಳ್ ಕಟ್ಚಿ (ವಿಸಿಕೆ) ಪಕ್ಷದ ಸಂಸದರಾದ ತಿರುಮಾವಲವನ್ ಹಾಗೂ ಇನ್ನಿತರ ಮುಖಂಡರು ಸಿದ್ದರಾಮಯ್ಯರನ್ನು ಭೇಟಿ ಮಾಡಿದರು. ಪ್ರಶಸ್ತಿಗೆ ಆಯ್ಕೆ ಮಾಡಿರುವ ಕುರಿತು ತಿಳಿಸಿ ಸನ್ಮಾನಿಸಿದ್ದಲ್ಲದೇ ಪ್ರಶಸ್ತಿ ಸ್ವೀಕರಿಸಲು ಜುಲೈ 30ರಂದು ಚೆನ್ನೈಗೆ ಆಗಮಿಸುವಂತೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.

Siddaramaiah will be receive VCK Ambedkar Sudar award on July 30

ವಿಡುದಲೈ ಚಿರುದೈಗಳ್ ಕಟ್ಚಿ (ವಿಸಿಕೆ) ಸಂಸ್ಥಾಪಕ ಥೊಲ್ ತಿರುಮಾವಲವನ್ ಅವರು ಈಗಾಗಲೇ ತಮ್ಮ ಪಕ್ಷದಿಂದ ಪ್ರತಿವರ್ಷ ನೀಡುವ ವಿವಿಧ ಪ್ರಶಸ್ತಿಗಳಿಗೆ ಆಯ್ಕೆ ಮಾಡಿದ್ದರು ಕುರಿತು ಪ್ರಕಟಿಸಿದ್ದರು. ಅದರಂತೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡರ ಸಿದ್ದರಾಮಯ್ಯ 'ಅಂಬೇಡ್ಕರ್ ಸುದಾರ್' ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

ಇದರ ಜತೆಗೆ ವಿಸಿಕೆ ಪಕ್ಷದ 'ಪೆರಿಯಾರ್ ಒಲಿ' ಪ್ರಶಸ್ತಿಯನ್ನು ಮಾನವ ಹಕ್ಕುಗಳ ಹೋರಾಟಗಾರ ಹಾಗೂ ಬರಹಗಾರ ಎಸ್.ವಿ. ರಾಜದೊರೈ ಅವರು ಸ್ವೀಕರಿಸಲಿದ್ದಾರೆ. 'ಕಾಮರಸರ್ ಕತಿರ್' ಪ್ರಶಸ್ತಿಗೆ ಕೈಗಾರಿಕೋದ್ಯಮಿ ವಿ.ಜಿ. ಸಂತೋಷಂ ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನು 'ಐಯೋತಿ ಥಾಸ್ ಆಧವನ್' ಪ್ರಶಸ್ತಿಗೆ ಮಾಜಿ ಐಎಎಸ್ ಅಧಿಕಾರಿ ಚೆಲ್ಲಪ್ಪನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವಿಸಿಕೆ ಪಕ್ಷದ ಸಂಸ್ಥಾಪಕ ಥೊಲ್ ತಿರುಮಾವಲವನ್ ತಿಳಿಸಿದ್ದಾರೆ.

'ಕ್ವೈಡ್-ಎ-ಮಿಲ್ಲತ್ ಪಿರೈ' ಪ್ರಶಸ್ತಿಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ನಾಯಕ ತೆಹ್ಲಾನ್ ಬಾಖವಿ ಅವರನ್ನು ಆಯ್ಕೆ ಮಾಡಲಾಗಿದೆ. ಪುರಾತತ್ವ ಶಾಸ್ತ್ರಜ್ಞ ಪ್ರೊ. 'ಮಾರ್ಕ್ಸ ಮನಿ' ಪ್ರಶಸ್ತಿಯನ್ನು ಮರಣೋತ್ತರವಾಗಿ ಬರಹಗಾರ ಜವಾಹರ್ ಅವರಿಗೆ ನೀಡಲಾಗುವುದು. ಈ ಎಲ್ಲ ಪ್ರಶಸ್ತಿ ಪುರಸ್ಕೃತರರು ಜುಲೈ 30ರಂದು ಚೆನ್ನೈನಲ್ಲಿ ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ಪ್ರಶಸ್ತಿ ಮತ್ತು ಗೌರವ ಸ್ವೀಕರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

Recommended Video

3 ರನ್ ಗಳಿಂದ Shikhar Dhawan ಶತಕ ವಂಚಿತ ,ಅದೇ 3 ರನ್ ಗಳಿಂದ ಗೆದ್ದ Team India | *Cricket | OneIndia Kannada

English summary
Karnataka former CM Siddaramaiah will be receive Viduthalai Chiruthaigal Katchi (VCK) party's 'Ambedkar Sudar' award on July 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X