• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿದ್ದರಾಮಯ್ಯನವರನ್ನು 70ಸಾವಿರ ಲೀಡ್ ನಿಂದ ಗೆಲ್ಲಿಸಿಕೊಂಡು ಬರ್ತೀನಿ

|
Google Oneindia Kannada News

ಬೆಂಗಳೂರು, ಮೇ 26: ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು ಎನ್ನುವ ವಿಚಾರ ಆರೇಳು ತಿಂಗಳಿಂದಲೂ ಇದೆ. ಬಿಜೆಪಿ ಪಕ್ಷದ ವಿಚಾರ ನನು ಹೇಗೆ ಪ್ರತಿಕ್ರಿಯೆ ನೀಡಲು ಸಾಧ್ಯ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದರು.

"ನನ್ನ ಕ್ಷೇತ್ರದಲ್ಲಿ ನಡೆದ ಅನ್ನದಾನದ ಕಾರ್ಯಕ್ರಮಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಕರೆದಿದ್ದೆ. ಲಾಕ್ ಡೌನ್ ವಿಸ್ತರಣೆಯಾದರೆ ಮತ್ತೆ ಮೂವತ್ತು ಸಾವಿರ ಜನರಿಗೆ ಊಟ ಹಾಕಬೇಕೆಂದಿದ್ದೇನೆ, ಆಗ, ಮತ್ತೆ ನಮ್ಮ ಅಧ್ಯಕ್ಷರನ್ನು ಕರೆಯುತ್ತೇನೆ ಎಂದು ಜಮೀರ್ ಸ್ಪಷ್ಟನೆಯನ್ನು ನೀಡಿದರು.

ಸಿದ್ದರಾಮಯ್ಯ ಮೇಲೆ ಜಮೀರ್ ಅತಿಯಾದ ಗುರುಭಕ್ತಿ: ಹೈಕಮಾಂಡ್ ಕೆಂಗಣ್ಣುಸಿದ್ದರಾಮಯ್ಯ ಮೇಲೆ ಜಮೀರ್ ಅತಿಯಾದ ಗುರುಭಕ್ತಿ: ಹೈಕಮಾಂಡ್ ಕೆಂಗಣ್ಣು

"ನಾನು ಯಾವುದೇ ಒಳ್ಳೆಯ ಕೆಲಸವನ್ನು ಮಾಡಿದರೂ ಸಿದ್ದರಾಮಯ್ಯನವರನ್ನು ಬಿಟ್ಟು ಯಾವ ಕೆಲಸವನ್ನೂ ಮಾಡುವುದಿಲ್ಲ. ಕ್ಷೇತ್ರದ ಕಾರ್ಯಕರ್ತರು ಸಿದ್ದರಾಮಯ್ಯನವರನ್ನು ಕರೆಸಿ ಎಂದು ಒತ್ತಡ ಹಾಕುತ್ತಾರೆ. ಹಾಗಾಗಿ, ಸಿದ್ದರಾಮಯ್ಯನವರನ್ನು ನಾನು ಕರೆಯುತ್ತಿದ್ದೇನೆ" ಎಂದು ಜಮೀರ್ ಹೇಳಿದರು.

"ರಾಜ್ಯದೆಲ್ಲಡೆ ನಾನು ಪ್ರವಾಸ ಮಾಡಿದ್ದೇನೆ, ಜನರು ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತಿದ್ದಾರೆ. ಬಾದಾಮಿಯಲ್ಲಿ ಬೇಡ, ನನ್ನ ಕ್ಷೇತ್ರ ಚಾಮರಾಜಪೇಟೆಯಲ್ಲಿ ನೀವು ನಿಲ್ಲಿ ಎಂದು ನಾನೇ ಸಿದ್ದರಾಮಯ್ಯನವರಿಗೆ ಹೇಳಿದ್ದೇನೆ" ಎಂದು ಜಮೀರ್ ಅಹ್ಮದ್ ಖಾನ್ ಪುನರುಚ್ಚಿಸಿದ್ದಾರೆ.

"ಸಿದ್ದರಾಮಯ್ಯನವರಿಂದ ರಾಜ್ಯಕ್ಕೆ ಒಳ್ಳೆಯದಾಗಬೇಕಿದೆ. ನೀವು ಬರೀ ನಾಮಪತ್ರ ಸಲ್ಲಿಸಿ ಹೋಗಿ, ನಿಮ್ಮನ್ನು ಎಪ್ಪತ್ತು ಸಾವಿರ ಲೀಡ್ ನಲ್ಲಿ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು" ಎಂದು ಜಮೀರ್ ವಿಶ್ವಾಸದ ಮಾತನ್ನಾಡಿದ್ದಾರೆ.

ಕಾರವಾರ; ಕೊವ್ಯಾಕ್ಸಿನ್ 2ನೇ ಡೋಸ್ ಪಡೆಯಲು ಜನರ ಹಿಂದೇಟುಕಾರವಾರ; ಕೊವ್ಯಾಕ್ಸಿನ್ 2ನೇ ಡೋಸ್ ಪಡೆಯಲು ಜನರ ಹಿಂದೇಟು

ನಾನು ಸಿದ್ದರಾಮಯ್ಯನವರನ್ನು ಚಾಮರಾಜಪೇಟೆಯಿಂದ ಗೆಲ್ಲಿಸಿಕೊಂಡು ಬರದಿದ್ದರೆ, ರಾಜಕೀಯ ನಿವೃತ್ತಿ ಪಡೆಯುತ್ತೇನೆ. ನನ್ನ ಆಹ್ವಾನಕ್ಕೆ ಸಿದ್ದರಾಮಯ್ಯನವರು ಇನ್ನೂ ಏನನ್ನೂ ಹೇಳಲಿಲ್ಲ ಎಂದು ಜಮೀರ್ ಅಹ್ಮದ್ ಖಾನ್ ಹೇಳಿದರು.

English summary
Siddaramaiah Will Be CM Once Again says Zameer Ahmed Khan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X