ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೈಕೋರ್ಟ್ ನಲ್ಲಿ ತೇಜಸ್ವಿಗೆ ಮುಖಭಂಗ, ಬರೋಬ್ಬರಿ ಆಯ್ತು ಎಂದ ಸಿದ್ದು!

|
Google Oneindia Kannada News

ತಮಗೆ ಅವಮಾನವಾಗುವಂಥ ಸುದ್ದಿಗಳನ್ನು ಹಾಕದಂತೆ ಮಾಧ್ಯಮಗಳ ವಿರುದ್ಧ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ತಂದಿದ್ದ ತಡೆ ಆಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದೆ.

ಪ್ರಜಾಪ್ರಭುತ್ವ ಸುಧಾರಣೆ ಸಂಸ್ಥೆ ಎಂಬ ಸಂಸ್ಥೆಯು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL)ಯ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಎಲ್ ನಾರಾಯಣ ಮೂರ್ತಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಚುನಾವಣಾ ಅಕ್ರಮ, ತೇಜಸ್ವಿ ಸೂರ್ಯ ವಿರುದ್ಧ ವಕೀಲರಿಂದ ದೂರುಚುನಾವಣಾ ಅಕ್ರಮ, ತೇಜಸ್ವಿ ಸೂರ್ಯ ವಿರುದ್ಧ ವಕೀಲರಿಂದ ದೂರು

28 ವರ್ಷ ವಯಸ್ಸಿನ ತೇಜಸ್ವಿ ಸೂರ್ಯ ಅವರನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೆಂದು ಘೋಷಿಸಲಾಗುತ್ತಿದ್ದಂತೆಯೇ ಅವರ ವಿರುದ್ಧ ಕೆಲವು ಆರೋಪಗಳು ಕೇಳಿಬಂದಿದ್ದವು.

Siddaramaiah welcomes Karnataka highcourts order on Tejasvi Surya

ಆ ನಂತರ ತಮ್ಮ ತೇಜೋವಧೆ ಮಾಡುವಂಥ ಸುದ್ದಿಗಳನ್ನು ಮಾಧ್ಯಮಗಳಲ್ಲಿ ಯಾವುದೇ ಪುರಾವೆ ಇಲ್ಲದೆ ಪ್ರಕಟಿಸಬಾರದು ಎಂದು ತೇಜಸ್ವಿ ಸೂರ್ಯ ಹೈಕೋರ್ಟ್ ನಿಂದ ತಡೆ ತಂದಿದ್ದರು.

ತೇಜಸ್ವಿ ಸೂರ್ಯ ವಿರುದ್ಧ ಮಹಿಳೆ ಆರೋಪ ಏನು, ಅದು ಎಲ್ಲಿಗೆ ಬಂತು?ತೇಜಸ್ವಿ ಸೂರ್ಯ ವಿರುದ್ಧ ಮಹಿಳೆ ಆರೋಪ ಏನು, ಅದು ಎಲ್ಲಿಗೆ ಬಂತು?

ಆದೇಶ ಸ್ವಾಗತಿಸಿದ ಸಿದ್ದರಾಮಯ್ಯ

ತೇಜಸ್ವಿ ಸೂರ್ಯ ಪ್ರಕರಣದಲ್ಲಿ ಕೋರ್ಟು ನೀಡಿದ ಆದೇಶವನ್ನು ಸ್ವಾಗತಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, "ನ್ಯಾಯಾಲಯ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಧ್ಯಮ ಸ್ವಾತಂತ್ರ್ಯವನ್ನು ಎತ್ತಿಹಿಡಿದಿದೆ. ಈ ನಿರ್ಬಂಧವನ್ನು ತೆರವುಗೊಳಿಸಿದ್ದರಿಂದ ಮಾಧ್ಯಮಗಳು ಸತ್ಯವನ್ನು ನಿರ್ಭಯವಾಗಿ ಬರೆಯಬಹುದು. ಅಕಸ್ಮಾತ್ ಅವರ ವಿರುದ್ಧ ಸಂತ್ರಸ್ಥರು ದೂರು ನಿದಿದ್ದರೆ ಅದು ಚುನಾವಣಾ ಆಯೋಗಕ್ಕೆ ತಿಳಿಯಬೇಕು" ಎಂದು ಟ್ವೀಟ್ ಮಾಡಿದ್ದಾರೆ.

English summary
BJP’s youngest candidate from Bangalore South constituency, Tejasvi Surya, got an injunction against media reporting anything that could be “defamatory” to him. On Friday, the Karnataka high court set aside this injunction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X