ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿರ್ದಯ ರಾಜಕಾರಣಕ್ಕೆ ಚಡಪಡಿಸುತ್ತಿದ್ದ ಅಂಬಿ: ಸಿದ್ದರಾಮಯ್ಯ ಒಗಟು ಟ್ವೀಟ್

|
Google Oneindia Kannada News

Recommended Video

ಅಂಬರೀಶ್ ಬಗ್ಗೆ ಟ್ವೀಟ್ ಮಾಡಿದ ಸಿದ್ದರಾಮಯ್ಯ

ಬೆಂಗಳೂರು, ಮೇ 30: ರೆಬೆಲ್ ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬ(ಮೇ 29)ದ ನಿಮಿತ್ತ ಅವರಿಗೆ ನೆನಪುಗಳ ನಮನ ಸಲ್ಲಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟ್ವೀಟ್ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಆ ಟ್ವೀಟ್ ನಲ್ಲಿ ಅವರು ಬಳಸಿದ 'ನಿರ್ದಯ ರಾಜಕಾರಣಕ್ಕೆ ಹೊಂದಿಕೊಳ್ಳಲಾಗದೆ ಚಡಪಡಿಸುತ್ತಿದ್ದ ಅಂಬರೀಶ್' ಎಂಬ ಸಾಲು ಒಗಟಾಗಿ ಪರಿಣಮಿಸಿ, ಅದರ ಅರ್ಥವನ್ನು ಹುಡುಕಲು ಪ್ರಯತ್ನಿಸುವಂತಾಗಿದೆ.

ಮೇ 29 ರಂದು ಮಾಜಿ ಸಚಿವ ದಿ.ಅಂಬರೀಶ್ ಅವರ ಹುಟ್ಟಿದ ದಿನವಾಗಿತ್ತು. ಈ ದಿನ ಅವರ ಹಲವು ಅಭಿಮಾನಿಗಳು, ರಾಜಕೀಯ ಒಡನಾಡಿಗಳು ಅವರನ್ನು ಸ್ಮರಿಸಿ ಟ್ವೀಟ್ ಮಾಡಿದ್ದರು. ಆದರೆ ಎಲ್ಲ ಟ್ವೀಟ್ ಗಳಿಗಿಂಯತ ಹೆಚ್ಚು ಗಮನ ಸೆಳೆದಿದ್ದು ಸಿದ್ದರಾಮಯ್ಯ ಅವರ ಟ್ವೀಟ್!

ಗೆಳೆಯ ಅಂಬರೀಶ್ ಕುರಿತು ಕುಮಾರಸ್ವಾಮಿ ಆತ್ಮೀಯ ಟ್ವೀಟ್ಗೆಳೆಯ ಅಂಬರೀಶ್ ಕುರಿತು ಕುಮಾರಸ್ವಾಮಿ ಆತ್ಮೀಯ ಟ್ವೀಟ್

ಅಂಬರೀಶ್ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ವಸತಿ ಸಚಿವರಾಗಿದ್ದ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅಂಬರೀಶ್ ನಡುವೆ ಭಿನ್ನಾಭಿಪ್ರಾಯ ಜಗಜ್ಜಾಹೀರಾಗಿತ್ತು. ಕೊನೆಗೆ ವಿಧಾನಸಭೆ ಚುನಾವಣೆಯಲ್ಲೂ ಅವರು ಸ್ಪರ್ಧಿಸುವುದಕ್ಕೆ ಒಲ್ಲೆ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.

ಸಿದ್ದರಾಮಯ್ಯ ಟ್ವೀಟ್

"'ಸ್ನೇಹಕ್ಕೆ ಮತ್ತೊಂದು ಹೆಸರು ಅಂಬರೀಶ್. ಜಾತಿ,ಧರ್ಮ,ಪಕ್ಷ, ಪ್ರದೇಶವನ್ನು ಮೀರಿದ ಗೆಳೆತನ ಅವರದ್ದು. ಬಡವರು, ಅಸಹಾಯಕರಿಗೆ ಸದಾ ಮಿಡಿಯುತ್ತಿದ್ದ ಉದಾರಿ ಅವರು. ಇಂದಿನ ನಿರ್ದಯಿ ರಾಜಕಾರಣಕ್ಕೆ ಹೊಂದಿಕೊಳ್ಳಲಾಗದೆ ಚಡಪಡಿಸುತ್ತಿದ್ದ ಅಂಬರೀಶ್ ಕೊನೆಗೂ ನಮ್ಮನ್ನು ಅಗಲಿ ಹೋಗಿಬಿಟ್ಟರು. ಹುಟ್ಟಹಬ್ಬದ ಸಂದರ್ಭದಲ್ಲಿ ಅವರಿಗೆ ನನ್ನ ನೆನಪುಗಳ ನಮನಗಳು" -ಸಿದ್ದರಾಮಯ್ಯ

ನಿಮ್ಮಿಂದ್ ಹಾರೈಕೆ?!

ಅಂಬರೀಶ್ ಇದ್ದಾಗ ಅವರ ಮಂತ್ರಿಗಿರಿ ಕಿತ್ತುಕೊಂಡ ನಿಮ್ಮಿಂದ ಇಂಥ ಹಾರೈಕೆ? ಎಂದೊಬ್ಬರು ಟ್ವೀಟ್ ಮಾಡಿದ್ದಾರೆ.

ಅಂಬರೀಶ್ ಸಮಾಧಿಗೆ ನಮಿಸಿ ಮಂಡ್ಯದತ್ತ ತೆರಳಿದ ಸುಮಲತಾ ಅಂಬರೀಶ್ ಸಮಾಧಿಗೆ ನಮಿಸಿ ಮಂಡ್ಯದತ್ತ ತೆರಳಿದ ಸುಮಲತಾ

ಆತ್ಮಕ್ಕೆ ಮೋಸ ಆಗುವಂತೆ ನಡೆದುಕೊಂಡಿದ್ದು ಯಾರು?

ಅವರ ಆತ್ಮಕ್ಕೆ ಮೋಸ ಆಗುವ ರೀತಿಯಲ್ಲಿ ನಡೆದುಕೊಂಡವರು ತಾವಲ್ಲವೇ?- ಚೇತನ್ ಅಂತಿಬೆಟ್ಟು

ಅದರಲ್ಲಿ ನೀವು ಸೇರುತ್ತೀರೋ?

ನಿರ್ದಯೀ ರಾಜಕಾರಣ ಮಾಡಿದ್ದು ಯಾರು
ದಯವಿಟ್ಟು ಹೇಳಿ
ಅದರಲ್ಲಿ ನೀವು ಸೇರುತ್ತೀರೋ ಇಲ್ವೋ ನೋಡೋಣ- ಚೌಕಿದಾರ್

ಸಚಿವ ಸ್ಥಾನ ಕಿತ್ತುಕೊಂಡಿದ್ದು ಯಾರು?

ಅಂಬರೀಶರನ್ನು ಸಚಿವ ಸ್ಥಾನದಿಂದ ಏಕಾಏಕಿ ಅವಮಾನದ ಮೂಲಕ‌ ಕಿತ್ತೆಸೆದು, ರಾಜಕೀಯದಿಂದಲೇ ನಿವೃತ್ತಿ ಘೋಷಿಸುವಂತೆ ಮಾಡಿದ ಅತೀ ಬುದ್ಧಿವಂತರು ನೀವೆ ಅಲ್ಲವೇ.

English summary
Former CM Siddaramaiah in his tweet on Kannada actor, rebel star Ambareesh said, He was struggling in this merciless politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X