• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದರ್ಶನ್ ಸ್ಟೈಲ್ ನಲ್ಲಿ ಡೈಲಾಗ್ ಹೇಳಿದ ಸಿದ್ದರಾಮಯ್ಯ: ವಿರೋಧಿಗಳಿಗೆ ಎಚ್ಚರಿಕೆ!

|
Google Oneindia Kannada News
   Salaga Movie : ದುನಿಯಾ ವಿಜಯ್ ಸಿನಿಮಾ ಅಂದ್ರೆ ಸಿದ್ದುಗೆ ತುಂಬಾ ಇಷ್ಟ ಅಂತೆ..! | FILMIBEAT KANNADA

   ಮಾಜಿ ಸಿಎಂ ಸಿದ್ದರಾಮಯ್ಯ ಕರ್ನಾಟಕ ರಾಜಕೀಯದಲ್ಲಿ ಟಗರು ಇದ್ದಂತೆ. ಎದುರಿಗೆ ಬರೋರನ್ನ ಗುಮ್ಕೊಂಡು ಹೋಗ್ತಾ ಇರ್ತಾರೆ. ಆದ್ರೀಗ ಸಿದ್ದರಾಮಯ್ಯ ಆಪ್ತರು ಎನಿಸಿಕೊಂಡಿದ್ದವರೇ ಅವರ ವಿರುದ್ಧ ಕಿಡಿಕಾರುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲೇ ಇರುವ ರೋಷನ್ ಬೇಗ್, ರಾಮಲಿಂಗಾರೆಡ್ಡಿ ತಮ್ಮ ನಾಯಕನ ವಿರುದ್ಧವೇ ಪರೋಕ್ಷವಾಗಿ ಟೀಕಿಸುತ್ತಿದ್ದಾರೆ.

   ಆ ಕಡೆ ಸಿದ್ದರಾಮಯ್ಯ ಅವರಿಂದಲೇ ದೇವೇಗೌಡರು ತುಮಕೂರಿನಲ್ಲಿ ಸೋಲಬೇಕಾಯಿತು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಕೂಡ ಆರೋಪಿಸಿದ್ದರು. ಮೈತ್ರಿ ಸರ್ಕಾರವನ್ನ ಬೀಳಿಸಲು ಸಿದ್ದರಾಮಯ್ಯ ಅವರೇ ಪಣ ತೊಟ್ಟಿದ್ದಾರೆ ಎಂಬ ಮಾತು ಕೂಡ ದೊಡ್ಡದಾಗಿ ಚರ್ಚೆಯಾಗಿತ್ತು.

   ಸಿಎಂ ಹುದ್ದೆಗೆ ಸಿದ್ದರಾಮಯ್ಯ ಸೂಚಿಸಿದ ಇಬ್ಬರು ನಾಯಕರು ಯಾರು? ಸಿಎಂ ಹುದ್ದೆಗೆ ಸಿದ್ದರಾಮಯ್ಯ ಸೂಚಿಸಿದ ಇಬ್ಬರು ನಾಯಕರು ಯಾರು?

   ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸಿದ್ದರಾಮಯ್ಯ 'ಆನೆ ನಡೆದಿದ್ದೇ ದಾರಿ' ಎಂದು ನುಗ್ಗಿಕೊಂಡು ಹೋಗ್ತಿದ್ದಾರೆ. ಇಷ್ಟೆಲ್ಲಾ ರಾಜಕೀಯ ಬೆಳವಣಿಗೆಯ ಮಧ್ಯೆ ಸಿನಿಮಾ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ ದರ್ಶನ್ ಸಿನಿಮಾದ ಡೈಲಾಗ್ ಹೇಳಿ ವಿರೋಧಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ, ಸಿದ್ದರಾಮಯ್ಯ ಹೇಳಿದ ಆ ಡೈಲಾಗ್ ಯಾವುದು? ಮುಂದೆ ಓದಿ....

   'ಆನೆ ನಡೆದಿದ್ದೆ ದಾರಿ' ಎಂದ ಸಿದ್ದರಾಮಯ್ಯ

   'ಆನೆ ನಡೆದಿದ್ದೆ ದಾರಿ' ಎಂದ ಸಿದ್ದರಾಮಯ್ಯ

   ಬೆಂಗಳೂರಿನ ಗುಟ್ಟಳ್ಳಿ ಬಳಿಯಿರುವ ಬಂಡಿಮಹಾಕಾಳಮ್ಮ ದೇವಸ್ಥಾನದಲ್ಲಿ ದುನಿಯಾ ವಿಜಯ್ ನಟನೆಯ ಸಲಗ ಸಿನಿಮಾದ ಮುಹೂರ್ತ ಕಾರ್ಯಕ್ರಮ ಜರುಗಿತು. ಈ ಸಮಾರಂಭಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅತಿಥಿಯಾಗಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ''ಆನೆ ನಡೆದಿದ್ದೆ ದಾರಿ, ಒಂಟಿ ಸಲಗ ತುಂಬಾ ಡೇಂಜರ್'' ಅಂದ್ರು.

   ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಗಟ್ಟಿ, ಬಿಜೆಪಿ ಲೆಕ್ಕಾಚಾರ ಬುಡಮೇಲು!ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಗಟ್ಟಿ, ಬಿಜೆಪಿ ಲೆಕ್ಕಾಚಾರ ಬುಡಮೇಲು!

   ಒಂಟಿ ಸಲಗ ಕಥೆ ಹೇಳಿದ ಸಿದ್ದರಾಮಯ್ಯ

   ಒಂಟಿ ಸಲಗ ಕಥೆ ಹೇಳಿದ ಸಿದ್ದರಾಮಯ್ಯ

   ಸಲಗ ಸಿನಿಮಾದ ಕುರಿತು ಮಾತನಾಡಿದಾಗ ಈ ಡೈಲಾಗ್ ಹೇಳಿದಾದರೂ, ಮಾತು ಮುಂದುವರಿಸಿದ ಸಿದ್ದರಾಮಯ್ಯ ''ಗುಂಪಿನಲ್ಲಿ ಆನೆಗಳು ಬಂದ್ರೆ ಎಲ್ಲವೂ ಸುಮ್ಮನೆ ಹೋಗಿಬಿಡುತ್ತೆ. ಆದರೆ ಒಂಟಿ ಸಲಗಕ್ಕೆ ಭಯ, ಆತಂಕ ಇರುತ್ತೆ. ತನ್ನ ರಕ್ಷಣೆಗಾಗಿ ಅಟ್ಯಾಕ್ ಮಾಡುತ್ತೆ. ಅದಕ್ಕೆ ಹೇಳೋದು ಒಂಟಿ ಸಲಗದ ವಿಷ್ಯಕ್ಕೆ ಹೋಗಬಾರದು' ಎಂದರು. ಮೇಲ್ನೋಟಕ್ಕೆ ಇದು ಸಲಗ ಸಿನಿಮಾ ಬಗ್ಗೆ ಹೇಳಿದ್ದು ಎನಿಸಿದರೂ, ವೈಯಕ್ತಿಕ ತಮ್ಮ ವಿರೋಧಿಗಳಿಗೆ ಎಚ್ಚರಿಕೆ ಕೊಟ್ಟರು ಎನ್ನಲಾಗಿದೆ.

   ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ 'ಸಲಗ'

   ಸಿನಿಮಾ ಮೇಲೆ ಹೆಚ್ಚು ಆಸಕ್ತಿ ಹೊಂದಿದ್ದಾರೆ

   ಸಿನಿಮಾ ಮೇಲೆ ಹೆಚ್ಚು ಆಸಕ್ತಿ ಹೊಂದಿದ್ದಾರೆ

   ಹಾಗ್ನೋಡಿದ್ರೆ ಸಿದ್ದರಾಮಯ್ಯ ಅವರಿಗೆ ಸಿನಿಮಾ ಮೇಲೆ ಮತ್ತು ಚಿತ್ರರಂಗದ ಮೇಲೆ ಹೆಚ್ಚು ಆಸಕ್ತಿ ಇದೆ. ಹೆಚ್ಚು ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಾರೆ. ಬಿಡುವಿನ ವೇಳೆಯಲ್ಲಿ ಸಿನಿಮಾಗಳನ್ನ ಕೂಡ ನೋಡ್ತಾರೆ. ಹಾಗಾಗಿ, ಡೈಲಾಗ್ ಗಳ ಬಗ್ಗೆಯೂ ಅರಿವಿರುತ್ತೆ.

   ದರ್ಶನ್ ಹೇಳಿದ್ದಷ್ಟೇ ಪವರ್ ಫುಲ್ ಆಗಿತ್ತು

   ದರ್ಶನ್ ಹೇಳಿದ್ದಷ್ಟೇ ಪವರ್ ಫುಲ್ ಆಗಿತ್ತು

   ಅಂದ್ಹಾಗೆ, 'ಆನೆ ನಡೆದಿದ್ದೇ ದಾರಿ' ಡೈಲಾಗ್ ನಟ ದರ್ಶನ್ ಅಭಿನಯದ ಯಜಮಾನದಲ್ಲಿದೆ. ವಿಲನ್ ಗೆ ಟಕ್ಕರ್ ಕೊಡುವ ದರ್ಶನ್ ''ಆನೆ ನಡೆದಿದ್ದೇ ದಾರಿ, ಬರ್ತಾ ಇದ್ದೀನಿ...ತಾಕತ್ ಇದ್ರೆ ಕಟ್ಟಾಕು'' ಎಂದು ಹೇಳ್ತಾರೆ. ಸಿದ್ದರಾಮಯ್ಯ ಅವರಿಗೆ ಈ ಡೈಲಾಗ್ ಗೊತ್ತಿತ್ತೋ ಇಲ್ವೋ. ಅಥವಾ ಸಂದರ್ಭದಲ್ಲಿ ಬಂತು ಎಂದು ಹೇಳಿದ್ರೋ ಅದು ಗೊತ್ತಿಲ್ಲ. ಆದರೆ ದರ್ಶನ್ ಅವರಷ್ಟೆ ಪವರ್ ಫುಲ್ ಆಗಿ ಹೇಳಿದ್ರು ಅನ್ನೋವುದು ವಿಶೇಷ.

   English summary
   Karnataka ex Chief minister siddaramaiah has attend the salaga movie muhurat at bandimahakalmma temple in guttalli. salaga is duniya vijay starrer and debut directional movie.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X