ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ತಡೆಯಲು ವಿಫಲವಾದ ಸರ್ಕಾರಕ್ಕೆ ಸಿದ್ದರಾಮಯ್ಯ ತರಾಟೆ

|
Google Oneindia Kannada News

ಬೆಂಗಳೂರು, ಮಾರ್ಚ್ 13: ಕರ್ನಾಟಕದಲ್ಲಿ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿದೆ. ಇದುವರೆಗೂ 5 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ. ಕಲಬುರಗಿಯಲ್ಲಿ ವೃದ್ಧನೊಬ್ಬ ಕೊರೊನಾಗೆ ಬಲಿಯಾಗಿದ್ದು, ದೇಶದಲ್ಲೇ ಇದು ಮೊದಲ ಸಾವು ಎಂದು ಹೇಳಲಾಗಿದೆ.

ಹಾಗಾಗಿ, ರಾಜ್ಯದಲ್ಲಿ ಕೊರೊನಾ ಆತಂಕ ಕಾಡುತ್ತಿದೆ. ಆರೋಗ್ಯ ಇಲಾಖೆ ಎಷ್ಟೇ ಮುಂಜಾಗ್ರತೆ ತೆಗೆದುಕೊಳ್ಳುತ್ತಿದ್ದರು ವೈರಸ್ ಹರಡುವಿಕೆ ನಿಯಂತ್ರಿಸಲು ಕಷ್ಟ ಆಗುತ್ತಿದೆ. ಕಲಬುರಗಿ ವೃದ್ಧನ ಸಾವು, ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗಿರುವ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಗುಡುಗಿದ್ದಾರೆ.

ಕೊರೊನಾ ಬಗ್ಗೆ ರಾಹುಲ್ ಎಚ್ಚರಿಸಿದ್ದರು, ಮೋದಿ ಸರ್ಕಾರ ನಿರ್ಲಕ್ಷ್ಯ ಮಾಡಿತಾ?ಕೊರೊನಾ ಬಗ್ಗೆ ರಾಹುಲ್ ಎಚ್ಚರಿಸಿದ್ದರು, ಮೋದಿ ಸರ್ಕಾರ ನಿರ್ಲಕ್ಷ್ಯ ಮಾಡಿತಾ?

'ಕೊರೊನಾ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆ ವಿಫಲವಾಗಿದೆ' ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದಾರೆ. ಮುಂದೆ ಓದಿ....

ಇದು ಸರ್ಕಾರದ ವೈಫಲ್ಯ

ಇದು ಸರ್ಕಾರದ ವೈಫಲ್ಯ

'ಸಿಎಂ ಮಾಧ್ಯಮಗಳ ಎದುರು ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ ಎಂದಿದ್ದರು. ಜನರು ಭಯಪಡುವ ಅಗತ್ಯ ಇಲ್ಲ ಎಂದಿದ್ದರು. ಈಗ ಇಡೀ ದೇಶದಲ್ಲಿ ಕಲಬುರಗಿಯಲ್ಲಿ ಮಾತ್ರ ಕೊರೋನಾ ಕಾರಣದಿಂದ ಒಂದು ಸಾವಾಗಿದೆ. ಕಲಬುರ್ಗಿಯಲ್ಲಿ ಸಾವಿಗೀಡಾದ ವ್ಯಕ್ತಿಯನ್ನು ಏರ್ಪೊರ್ಟ್ ನಲ್ಲಿ ಸ್ಕ್ರೀನಿಂಗ್ ಮಾಡಿಲ್ಲ ..'' ಎಂದು ಸರ್ಕಾರ ವಿರುದ್ಧ ಗುಡುಗಿದ್ದಾರೆ.

ಕಲಬುರಗಿಯಲ್ಲಿ ಟೆಸ್ಟ್ ಸೆಂಟರ್ ತೆಗೆಯೋಕೆ ಆಗಿಲ್ವಾ

ಕಲಬುರಗಿಯಲ್ಲಿ ಟೆಸ್ಟ್ ಸೆಂಟರ್ ತೆಗೆಯೋಕೆ ಆಗಿಲ್ವಾ

''ಕರೋನಾ ಬಹಳ ಭಯಾನಕ ರೋಗ. ವಿದೇಶಗಳಲ್ಲಿ ಸಾವಿರಾರು ಜನ ಸತ್ತಿದ್ದಾರೆ. ಈ ರೋಗ ನಮ್ಮ ದೇಶಕ್ಕೂ ಬಂದಿದೆ. ನಮ್ಮದು ಬಡ ದೇಶ. ರಿಜಿಸ್ಟನ್ಸ್ ಫವರ್ ಕಡಿಮೆ ಇರುವ ಜನ ನಮ್ಮಲ್ಲಿ ಇದ್ದಾರೆ. ಕಲಬುರಗಿಯಲ್ಲಿ ಒಂದು ಕರೋನಾ ಟೆಸ್ಟ್ ಸೆಂಟರ್ ತೆಗೆಯೋಕೆ ಆಗಿಲ್ವಾ'' ಎಂದು ಪ್ರಶ್ನಿಸಿದ್ದಾರೆ.

ಭಾರತದಲ್ಲಿ ಕೊರೊನಾ 'ಅಟ್ಟಹಾಸ': ಕೇರಳ ಟಾಪ್, ಕರ್ನಾಟಕ ಎಷ್ಟು?ಭಾರತದಲ್ಲಿ ಕೊರೊನಾ 'ಅಟ್ಟಹಾಸ': ಕೇರಳ ಟಾಪ್, ಕರ್ನಾಟಕ ಎಷ್ಟು?

 ನಿಮ್ಮ ಅಧಿಕಾರಿಗಳು ಏನು ಮಾಡ್ತಿದ್ರಿ?

ನಿಮ್ಮ ಅಧಿಕಾರಿಗಳು ಏನು ಮಾಡ್ತಿದ್ರಿ?

''ನೀವು ಬ್ಯುಸಿ ಇದ್ರಿ ಸರಿ. ನಿಮ್ಮ ಅಧಿಕಾರಗಳು ಏನ್ ಮಾಡ್ತಾ ಇದ್ರು. ಅಧಿಕಾರಿಗಳ ಹತ್ರ ಮಾಡಿಸಬೇಕಲ್ಲ. ಕೂಡಲೆ ರಾಮುಲು ನೀವು ಕಲಬುರಗಿಗೆ ಹೋಗಿ ಬನ್ನಿ. ಅವರ ಆತಂಕ ದೂರ ಮಾಡಿ. ಎಲ್ಲಾ ಜಿಲ್ಲೆ ಜಿಲ್ಲೆಗಳಿಗೆ ಹೋಗಿ. ನಿಮ್ಮ ಅಧಿಕಾರಿಗಳನ್ನು ಮನೆ ಮನೆಗೆ ಹೋಗಲು ಹೇಳಿ'' ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

 ತುರ್ತಾಗಿ ಕ್ರಮ ಕೈಗೊಳ್ಳಿ

ತುರ್ತಾಗಿ ಕ್ರಮ ಕೈಗೊಳ್ಳಿ

'ಈ ಮೊದಲು ಅಧಿಕಾರಿಗಳು ಮನೆ ಮನೆಗೆ ಹೋಗ್ತಾ ಇದ್ರು. ಆಶಾ ಕಾರ್ಯಕರ್ತರನ್ನು ಮನೆ ಮನೆಗೆ ಕಳುಹಿಸಿ. ತುರ್ತಾಗಿ ಕ್ರಮ ಕೈಗೊಳ್ಳಿ. ಸರ್ಕಾರದ ಮೇಲೆ ಜನರಿಗೆ ವಿಶ್ವಾಸ ಬರುವ ನಿಟ್ಟಿನಲ್ಲಿ ಕೆಲಸ ಮಾಡಿ' ಎಂದು ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ತರಾಟೆ ತೆಗೆದುಕೊಂಡಿದ್ದಾರೆ.

English summary
Karnataka state government and specially health department was failure to avoid to coronavirus said congress leader Siddaramaiah in Vidhana soudha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X