ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಮೀರ್ ಕೊಟ್ಟ ಆಫರ್‌ಗೆ ನೋ ಎಂದ ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ಆಗಸ್ಟ್ 16: ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ಇಡಿ ದಾಳಿ ಬಳಿಕ ಮೊದಲ ಬಾರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಭೇಟಿ ನೀಡಿದ್ದರು.

ಶಾಸಕ ಜಮೀರ್ ಅಹ್ಮದ್ ಮನೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಚಾಮರಾಜಪೇಟೆ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಜಮೀರ್ ಅಹ್ಮದ್ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಯಾವುದೇ ಕಾರಣಕ್ಕೂ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ತಿರಸ್ಕರಿಸಿದರು.
ಶಾಸಕ ಜಮೀರ್ ಅಹ್ಮದ್ ಈ ಹಿಂದೆಯೂ ಮುಂದಿನ ಸಿಎಂ ಸಿದ್ದರಾಮಯ್ಯನವರು ಚಾಮರಾಜಪೇಟೆ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂದು ಪದೇ ಪದೇ ಹೇಳುತ್ತಿದ್ದರು.

Breaking; ಜಮೀರ್ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ; ವಿಶೇಷ ಔತಣ! Breaking; ಜಮೀರ್ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ; ವಿಶೇಷ ಔತಣ!

ಇದಕ್ಕೆ ಪುಷ್ಠಿ ನೀಡುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಪದೇ ಪದೇ ಚಾಮರಾಜಪೇಟೆ ಕ್ಷೇತ್ರದ ಬೇರೆ ಬೇರೆ ಕಾರ್ಯಕ್ರಮಗಳಿಗೆ ಹೋಗುತ್ತಿದ್ದ ಕಾರಣ ಈ ಕ್ಷೇತ್ರದಿಂದಲೇ ಸ್ಪರ್ಧಿಸಬಹುದು ಎಂಬ ಮಾತು ರಾಜಕೀಯ ವಲಯದಿಂದ ಕೇಳಿ ಬರುತ್ತಿತ್ತು.

 ಬಾದಾಮಿ ಕ್ಷೇತ್ರ ಬದಲಿಸದಂತೆ ಮನವಿ

ಬಾದಾಮಿ ಕ್ಷೇತ್ರ ಬದಲಿಸದಂತೆ ಮನವಿ

ಕೆಲ ದಿನಗಳ ಹಿಂದೆ ಬಾದಾಮಿ ಕ್ಷೇತ್ರದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಖುದ್ದು ಸಿದ್ದರಾಮಯ್ಯ ಮನೆಗೆ ಹೋಗಿ ಯಾವುದೇ ಕಾರಣಕ್ಕೂ ಬಾದಾಮಿ ಕ್ಷೇತ್ರ ಬದಲಿಸದಂತೆ ಮನವಿ ಮಾಡಿದ್ದರು. ಆಗ ಸಿದ್ದರಾಮಯ್ಯ ನೀವು ನನ್ನ ಮೇಲಿನ ಪ್ರೀತಿಯಿಂದ ಬಾದಾಮಿಯಿಂದ ಬೆಂಗಳೂರಿಗೆ ಬಂದಿದ್ದೀರಿ. ನಾನು ಬಾದಾಮಿ ಬಿಟ್ಟು ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸಲ್ಲ ಎಂದು ಸಮಾಧಾನ ಪಡಿಸಿದ್ದರು.

ಇತ್ತ ಇಡಿ ದಾಳಿ ನಂತರ ಸಿದ್ದರಾಮಯ್ಯ ಹಾಗೂ ಜಮೀರ್ ಅಹ್ಮದ್ ನಡುವೆ ಮುನಿಸು ಉಂಟಾಗಿದೆ ಎಂದೇ ಹೇಳಲಾಗಿತ್ತು. ಇಡಿ ದಾಳಿ ಸಂದರ್ಭದಲ್ಲಿ ಸಿದ್ದರಾಮಯ್ಯ ತಮ್ಮ ಬೆನ್ನಿಗೆ ನಿಲ್ಲಲಿಲ್ಲ ಎಂದು ಜಮೀರ್ ಮುನಿಸಿಕೊಂಡಿದ್ದರು.
 ಜಮೀರ್ ಅಹ್ಮದ್‌ಗೆ ಫೋನ್ ಮಾಡಿದ ಸಿದ್ದರಾಮಯ್ಯ

ಜಮೀರ್ ಅಹ್ಮದ್‌ಗೆ ಫೋನ್ ಮಾಡಿದ ಸಿದ್ದರಾಮಯ್ಯ

ಇತ್ತ ಸಿದ್ದರಾಮಯ್ಯ ದೂರವಾಗುತ್ತಿದ್ದಂತೆಯೇ ಅತ್ತ ಜಮೀರ್ ಅಹ್ಮದ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಣದತ್ತ ವಾಲಿದ್ದರು. ಕೆಪಿಸಿಸಿ ಅಧ್ಯಕ್ಷರ ಮನೆಗೂ ಭೇಟಿ ನೀಡಿ, ಇಡಿ ದಾಳಿ ಸಂಬಂಧ ಚರ್ಚಿಸಿದ್ದರು.

ಅದನ್ನು ತಪ್ಪಿಸಲು ಸಿದ್ದರಾಮಯ್ಯರಿಂದಲೇ ಜಮೀರ್ ಅಹ್ಮದ್‌ಗೆ ಫೋನ್ ಮಾಡಿಸಿದ ಸಿದ್ದರಾಮಯ್ಯ ಆಪ್ತ ಬಣ ಜಮೀರ್ ಹಾಗೂ ಸಿದ್ದರಾಮಯ್ಯರ ಕಂದಕ ಸರಿಪಡಿಸಲು ಯಶಸ್ವಿಯಾಗಿದ್ದಾರೆ.
 ಬಾದಾಮಿಯಿಂದಲೇ ಸ್ಪರ್ಧೆ ಮಾಡುತ್ತೇನೆ

ಬಾದಾಮಿಯಿಂದಲೇ ಸ್ಪರ್ಧೆ ಮಾಡುತ್ತೇನೆ

ಇದರಿಂದಾಗಿಯೇ ವಿಪಕ್ಷ ನಾಯಕರೂ ಆಗಿರುವ ಸಿದ್ದರಾಮಯ್ಯ ಭಾನುವಾರ (ಆ.15)ರಂದು ಜಮೀರ್ ಅಹ್ಮದ್ ಮನೆಗೆ ಭೇಟಿ ನೀಡಿದ್ದರು. ಔತಣಕೂಟ ಸಂದರ್ಭದಲ್ಲಿ ತಮ್ಮ ಆಪ್ತರ ಮುಂದೆ ಎಲ್ಲ ಅಂತೆ ಕಂತೆ ಮಾತುಗಳಿಗೆ ಪೂರ್ಣವಿರಾಮ ಇಟ್ಟ ಸಿದ್ದರಾಮಯ್ಯ, ತಮ್ಮ ಮುಂದಿನ ಚುನಾವಣೆ ಸ್ಪರ್ಧೆ ಬಗ್ಗೆ ಮಾತನಾಡಿದ್ದಾರೆ.

ಚಾಮರಾಜಪೇಟೆಯಿಂದ ಸ್ಪರ್ಧೆ ಮಾಡುವ ಬಗ್ಗೆ ನಾನು ಯಾವತ್ತೂ ಯೋಚನೆ ಮಾಡಿಲ್ಲ. ಜಮೀರ್ ಏನೇ ಹೇಳಿರಬಹುದು, ಆದರೆ ನಾನು ಬಾದಾಮಿಯಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟವಾಗಿ ಆಪ್ತರ ಮುಂದೆ ಹೇಳಿದ್ದಾರೆ.

 ಚಾಮರಾಜಪೇಟೆ ಕ್ಷೇತ್ರಕ್ಕೆ ಮಾತ್ರ ಬರುವುದಿಲ್ಲ

ಚಾಮರಾಜಪೇಟೆ ಕ್ಷೇತ್ರಕ್ಕೆ ಮಾತ್ರ ಬರುವುದಿಲ್ಲ

ಬಾದಾಮಿ ಬಿಟ್ಟು ಸ್ಪರ್ಧೆ ಮಾಡಿದರೆ ವರುಣಾ ಅಥವಾ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೋಗುತ್ತೇನೆ. ಆದರೆ ಯಾವುದೇ ಕಾರಣಕ್ಕೂ ಚಾಮರಾಜಪೇಟೆಯಿಂದ ಕಣಕ್ಕೆ ಇಳಿಯವುದಿಲ್ಲ. ಜಮೀರ್ ವಿಶ್ವಾಸ ಏನೇ ಇರಬಹುದು. ಎಷ್ಟೇ ಪ್ರೀತಿ ತೋರಿಸಬಹುದು. ನನ್ನ ಸ್ಪರ್ಧೆ ಮಾತ್ರ ಬಾದಾಮಿಯಿಂದ ಎಂದು ಆಪ್ತರ ಮುಂದೆ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಈ ಖಡಕ್ ಮಾತುಗಳನ್ನು ಹೇಳುವ ಮೂಲಕ ಎಷ್ಟೇ ಸ್ನೇಹ ಕುದುರಿದರೂ ಚಾಮರಾಜಪೇಟೆ ಕ್ಷೇತ್ರಕ್ಕೆ ಮಾತ್ರ ಬರುವುದಿಲ್ಲ ಎಂದು ಹೇಳುವ ಮೂಲಕ ಜಮೀರ್ ಪ್ರೀತಿಯ ಆಹ್ವಾನಕ್ಕೆ ಸಿದ್ದರಾಮಯ್ಯ ಸಾಫ್ಟ್ ಆಗಿಯೇ ನೋ ಎಂದಿದ್ದಾರೆ.

Recommended Video

ಮಗನನ್ನು ರಾಜಕೀಯಕ್ಕೆ ತರಲು ಸೈಲೆಂಟಾಗಿ ಪ್ಲಾನ್ ಮಾಡ್ತಿದ್ದಾರಾ CM ಬೊಮ್ಮಾಯಿ? | Oneindia Kannada

English summary
Siddaramaiah to contest from Badami Constituency in upcoming assembly elections; rejected Zameer Ahmed Khan Request to Contest from Chamarajpet Constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X