• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ದಿ ಲೈಫ್ ಅಂಡ್ ಟೈಮ್ಸ್ ಆಫ್ ಜಾರ್ಜ್ ಫರ್ನಾಂಡೀಸ್' ಕೃತಿ ಬಿಡುಗಡೆ ಮಾಡಿದ ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ಸೆಪ್ಟಂಬರ್ 25: ನನ್ನ ರಾಜಕೀಯ ಬದುಕಿನಲ್ಲಿ ಜಾರ್ಜ್ ಫರ್ನಾಂಡಿಸ್ ಅವರಿಗೆ ವಿಶೇಷ ಸ್ಥಾನ ಇದೆ. ಅವರ ಒಂದು ಮಾತಿನಿಂದಾಗಿ ನಾನು ಈವರೆಗೆ ಕೊಕೊ ಕೋಲಾ ಕುಡಿದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಕೇಂದ್ರದ ಮಾಜಿ ಸಚಿವ, ದಿವಂಗತ ಜಾರ್ಜ್ ಫರ್ನಾಂಡೀಸ್ ಅವರ ಜೀವನ ಚರಿತ್ರೆ ಕುರಿತ 'ದಿ ಲೈಫ್ ಅಂಡ್ ಟೈಮ್ಸ್ ಆಫ್ ಜಾರ್ಜ್ ಫರ್ನಾಂಡೀಸ್' ಪುಸ್ತಕವನ್ನು ಭಾನುವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಪೇಸಿಎಂ ಪೋಸ್ಟರ್' ಅಭಿಯಾನ: ಸಿದ್ದು, ಡಿಕೆಶಿ ವಿರುದ್ಧ ಎನ್‌ಸಿಆರ್ಪೇಸಿಎಂ ಪೋಸ್ಟರ್' ಅಭಿಯಾನ: ಸಿದ್ದು, ಡಿಕೆಶಿ ವಿರುದ್ಧ ಎನ್‌ಸಿಆರ್

ಮೈಸೂರಿನಲ್ಲಿ ನಾನು ಕಾನೂನು ವ್ಯಾಸಂಗ ಮಾಡುತ್ತಿದ್ದಾಗ ನನಗೆ ಶಿಕ್ಷಕರಾಗಿದ್ದವರು ಸಮಾಜವಾದಿ ಮತ್ತು ರೈತನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರು. ಅವರೇ ನನ್ನನ್ನು ರಾಜಕೀಯಕ್ಕೆ ಎಳೆದು ತಂದವರು. ಅವರ ಒತ್ತಾಯದಿಂದ ನಾನು ಸಮಾಜವಾದಿ ಪಕ್ಷ ಸೇರಿದ್ದೆ. ಅವರ ಮೂಲಕ ನನಗೆ ಜಾರ್ಜ್ ಫರ್ನಾಂಡಿಸ್ ಪರಿಚಯವಾಗಿದ್ದರು ಎಂದು ಸಿದ್ದರಾಮಯ್ಯ ತಿಳಿಸಿದರು.

ಜಾರ್ಜ್ ಫರ್ನಾಂಡೀಸ್ ಅವರು ಮೊರಾರ್ಜಿ ದೇಸಾಯಿ ಅವರು ಪ್ರಧಾನಿಯಾಗಿದ್ದಾಗ ಕೈಗಾರಿಕಾ ಸಚಿವರಾಗಿದ್ದರು. ಆಗ ಮೈಸೂರಿಗೆ ಒಮ್ಮೆ ಬಂದಿದ್ದರು. ಮೈಸೂರಿನ ತಮ್ಮೆಲ್ಲಾ ಸ್ನೇಹಿತರನ್ನು ಒಟ್ಟಿಗೆ ಸೇರಿಸಿಕೊಂಡು ನಾನು ಕೋಕೋ ಕೋಲಾ ವಿರುದ್ಧ ಹೋರಾಟವನ್ನು ಮಾಡುತ್ತೇನೆ. ಅದಕ್ಕೆ ನಿಮ್ಮ ಬೆಂಬಲ ಬೇಕು. ಅಲ್ಲದೇ ಮತ್ತ್ಯಾವತ್ತೂ ಕೊಕೊ ಕೋಲಾ ಕುಡಿಯುವುದಿಲ್ಲ ಎಂದು ಶಪಥ ಮಾಡಬೇಕು' ಎಂದು ಹೇಳಿದ್ದರು. ಅವರ ಒಂದು ಮಾತಿಗೆ ಒಪ್ಪಿ ಕೊಕೊ ಕೋಲಾ ಕುಡಿಯುವುದನ್ನು ಬಿಟ್ಟವನು ಈವರೆಗೂ ಮತ್ತೆ ಕುಡಿಯಲಿಲ್ಲ ಎಂದು ತಮ್ಮ ಹಾಗೂ ಜಾರ್ಜ್ ಫರ್ನಾಂಡೀಸ್ ಅವರ ಒಡನಾಟ ಬಗ್ಗೆ ವಿವರಿಸಿದರು.

ರಾಜಕೀಯ ಭಿನ್ನಾಭಿಪ್ರಾಯ ಇದ್ದರೂ ಒಳ್ಳೆ ಸ್ನೇಹವಿತ್ತು

ರಾಜಕೀಯ ಭಿನ್ನಾಭಿಪ್ರಾಯ ಇದ್ದರೂ ಒಳ್ಳೆ ಸ್ನೇಹವಿತ್ತು

ಫರ್ನಾಂಡೀಸ್ ಪರಿಚಯವಾದ ದಿನಗಳಿಂದ ಇತ್ತೀಚೆಗೆ ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿಯುವವರೆಗೆ ನನಗೆ ಅವರ ಜೊತೆ ಸ್ನೇಹಪೂರ್ವಕ ಒಡನಾಟ ಇತ್ತು. ಕೊನೆದಿನಗಳ ಅವರ ರಾಜಕೀಯ ನಿಲುವುಗಳ ಬಗ್ಗೆ ನನಗೆ ಭಿನ್ನಾಭಿಪ್ರಾಯವಿದ್ದರೂ ಸ್ನೇಹ ರಾಜಕೀಯವನ್ನು ಮೀರಿದ್ದ ಸಂಬಂಧ ಅವರೊಂದಿಗಿತ್ತು ಎಂದು ಸ್ಮರಿಸಿದರು.

ಜಾರ್ಜ್ ಫರ್ನಾಂಡೀಸ್ ಅವರಲ್ಲಿ ಸೈದ್ಧಾಂತಿಕ ಬದ್ಧತೆ ಇತ್ತು. ಅವರು ಶೂನ್ಯದಿಂದ ಬಹಳ ಎತ್ತರಕ್ಕೆ ಬೆಳೆದವರು. ಬರಿಗೈಲಿ ಮುಂಬೈಗೆ ಹೋಗಿ, ಅಲ್ಲಿ ಕಾರ್ಮಿಕ ಸಂಘಟನೆಯನ್ನು ಕಟ್ಟಿ, ರಾಜಕೀಯವಾಗಿ ಬೆಳೆದವರು. ದಕ್ಷಿಣ ಭಾರತದಿಂದ ಕೇಂದ್ರಕ್ಕೆ ಹೋಗಿ ರಾಜಕೀಯದಲ್ಲಿ ಯಶಸ್ಸು ಕಂಡ ಬೆರಳೆಣಿಕೆಯ ಮಂದಿಯಲ್ಲಿ ಅವರು ಒಬ್ಬರು. ಜಾರ್ಜ್ ಮೊದಲ ಚುನಾವಣೆಯಲ್ಲಿಯೇ ಮುಂಬೈನಲ್ಲಿ ಆಗಿನ ಕಾಂಗ್ರೆಸ್ ಪಕ್ಷದ ಜನಪ್ರಿಯ ನೇತಾರ ಎಸ್ .ಕೆ.ಪಾಟೀಲ್ ಅವರನ್ನು ಮಣಿಸಿ ಗೆಲುವು ಸಾಧಿಸಿ 'ಜಯಂಟ್ ಕಿಲ್ಲರ್' ಎಂದು ಹೆಸರಾದವರು.

ನನ್ನ ಚುನಾವಣೆ ಪ್ರವೇಶಕ್ಕೆ ಜಾರ್ಜ್ ಒತ್ತಾಯ

ನನ್ನ ಚುನಾವಣೆ ಪ್ರವೇಶಕ್ಕೆ ಜಾರ್ಜ್ ಒತ್ತಾಯ

ತುರ್ತು ಪರಿಸ್ಥಿತಿಯ ನಂತರ ನಡೆದ ಚುನಾವಣೆಯಲ್ಲಿ ಬಿಹಾರ ರಾಜ್ಯದ ಮುಜಫರ್ ಲೋಕಸಭಾ ಕ್ಷೇತ್ರದಿಂದ ಜೈಲಿನಿಂದಲೇ ಸ್ಪರ್ಧಿಸಿ ಗೆದ್ದರು. ನಂತರ ಆ ರಾಜ್ಯವನ್ನೇ ತಮ್ಮ ರಾಜಕೀಯದ ಅಖಾಡವನ್ನಾಗಿ ಮಾಡಿಕೊಂಡರು. ಕರ್ನಾಟಕದ ರಾಜಕಾರಣದ ಬಗ್ಗೆ ಆಸಕ್ತಿ ಹೊಂದಿದ್ದರಿಂದ ಅವರು 1984ರಲ್ಲಿ ಬೆಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಗೆಲುವು ಧಕ್ಕಲಿಲ್ಲ ಎಂದ ತಿಳಿಸಿದರು.

1980ರಲ್ಲಿ ನಾನು ಮೊದಲ ಬಾರಿ ಚುನಾವಣಾ ರಂಗ ಪ್ರವೇಶಿಸಲು ಜಾರ್ಜ್ ಅವರ ಒತ್ತಾಯವೂ ಇತ್ತು. ಚುನಾವಣೆ ನನಗೆ ಹೊಸತು, ಅನುಭವವೂ ಇರಲಿಲ್ಲ, ದುಡ್ಡೂ ಇರಲಿಲ್ಲ. ಸಾಂಕೇತಿಕವಾಗಿ ಸ್ಪರ್ಧಿಸಿ, ಸೋಲು-ಗೆಲುವು ಮುಖ್ಯ ಅಲ್ಲ ಎಂದು ನನ್ನ ಮನ ಒಲಿಸಿ ಚುನಾವಣೆಗೆ ನಿಲ್ಲಿಸಿದ್ದು, ಆಗ ನಾನು ಸೋತಿದ್ದೆ. ನಂತರ ಕಾರಣಾಂತರಗಳಿಂದ ನಾನು ಪಕ್ಷೇತರನಾಗಿ ಸ್ಪರ್ಧಿಸಬೇಕಾಯಿತು. ಆಗಲೂ ಚುನಾವಣೆಯ ಪ್ರಚಾರದಲ್ಲಿ ಜಾರ್ಜ್ ಬಂದು ಪ್ರಚಾರ ಮಾಡಿದ್ದರು. ಚುನಾವಣಾ ಖರ್ಚಿಗೆ ಆ ಕಾಲದಲ್ಲಿ ಜಾರ್ಜ್ ನನಗೆ ಹತ್ತು ಸಾವಿರ ರೂಪಾಯಿ ಕೊಟ್ಟಿದ್ದನ್ನು ಮರೆಯಲಾರೆ ಎಂದರು.

ದಕ್ಷಿಣದ ರಾಜಕಾರಣಿಗಳಿಗೆ ದೆಹಲಿ ಒಗ್ಗದು

ದಕ್ಷಿಣದ ರಾಜಕಾರಣಿಗಳಿಗೆ ದೆಹಲಿ ಒಗ್ಗದು

ದಕ್ಷಿಣ ಭಾರತದಲ್ಲಿರುವ ರಾಜಕಾರಣಿಗಳಿಗೆ ದೆಹಲಿ ಭೌಗೋಳಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಬಲು ದೂರ. ಇದಕ್ಕೆ ಭಾಷೆ ಜೊತೆಗೆ ಅಲ್ಲಿನ ಭಿನ್ನ ಸಂಸ್ಕೃತಿ, ಆಹಾರ ಪದ್ಧತಿ ಕೂಡಾ ಕಾರಣ. ಹೀಗಿದ್ದರೂ ಸಹ ಹಿಂದಿ ಮತ್ತು ಇಂಗ್ಲೀಷ್ ಒಳಗೊಂಡಂತೆ ಹಲವಾರು ಭಾಷೆಗಳನ್ನು ಬಲ್ಲ ಜಾರ್ಜ್ ಫರ್ನಾಂಡಿಸ್ ಉತ್ತರಭಾರತೀಯನೇ ಆಗಿಬಿಟ್ಟಿದ್ದರು. ಅವರಿಗೆ ನನಗೂ ರಾಜಕೀಯ ಭಿನ್ನಾಭಿಪ್ರಾಯಗಳಿದ್ದವು. ಕೊನೆ ದಿನಗಳಲ್ಲಿ ಸೈದ್ಧಾಂತಿಕವಾಗಿ ನಾವಿಬ್ಬರೂ ಪರಸ್ಪರ ವಿರುದ್ಧ ಧ್ರುವಗಳಲ್ಲಿದ್ದವರು. ಇದರ ಹೊರತಾಗಿಯೂ ನಾವಿಬ್ಬರು ಆಪ್ತ ಸ್ನೇಹಿತರಾಗಿದ್ದೆವು. ಹುಟ್ಟೂರನ್ನು ಮರೆಯದ ಅವರು, ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ಕರಾವಳಿ ಜನತೆಯ ಬಹುದಿನಗಳ ಕನಸಾದ 'ಕೊಂಕಣ ರೈಲ್ವೇ ಯೋಜನೆ' ಜಾರಿಗೊಳಿಸಿದರು. ಇದೇ ರೈಲಿನಲ್ಲಿ ನಾನು ಅವರು ಪ್ರಯಾಣಿಸಿದ್ದೇವು ಎಂದು ಸ್ಮರಿಸಿದರು.

ಸೆ.26ರಂದು 'ವಿಧಾನಸೌಧ ಚಲೋ' ನಡೆಸಲಿರುವ ಸಂಯುಕ್ತ ಕಿಸಾನ್ ಮೋರ್ಚಾಸೆ.26ರಂದು 'ವಿಧಾನಸೌಧ ಚಲೋ' ನಡೆಸಲಿರುವ ಸಂಯುಕ್ತ ಕಿಸಾನ್ ಮೋರ್ಚಾ

ಇಂದು ಸ್ವಾತಂತ್ರ್ಯ ಧಮನದ ಯತ್ನ

ಇಂದು ಸ್ವಾತಂತ್ರ್ಯ ಧಮನದ ಯತ್ನ

ಇಂದು ವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯವನ್ನು ಧಮನಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಇಂಥಾ ಸಂದಿಗ್ಧ ಸಮಯದಲ್ಲಿ ಜಾರ್ಜ್ ಫರ್ನಾಂಡೀಸ್ ಅವರು ನಮ್ಮೊಂದಿಗೆ ಇರಬೇಕಿತ್ತು. ನನ್ನ ರಾಜಕೀಯ ಜೀವನದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಜಾರ್ಜ್ ಫರ್ನಾಂಡೀಸ್ ಅವರ ಕುರಿತಾದ ಪುಸ್ತಕವನ್ನು ಅತ್ಯಂತ ಸಂತೋಷದಿಂದ ಲೋಕಾರ್ಪಣೆಗೊಳಿಸಿದ್ದೇನೆ ಎಂದರು.

English summary
Opposition party leader Siddaramaiah released the book 'The Life and Times of George Fernandes' on Sunday at Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X