ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ರಿಜೆಕ್ಟೆಡ್ ಗೂಡ್ಸ್ : ಸದಾನಂದ ಗೌಡ

|
Google Oneindia Kannada News

Recommended Video

ಸಿದ್ದರಾಮಯ್ಯನನ್ನು ಮೈಸೂರು ಜನ ಓಡಿಸಿದ್ದಾರೆ..! ಬಾದಾಮಿ ಜನ ಬಾಡಿಗೆ ಮನೆ ಕೊಡುತ್ತಿಲ್ಲ..!

ಬೆಂಗಳೂರು, ಏಪ್ರಿಲ್ 06 : 'ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಿಜೆಕ್ಟೆಡ್ ಗೂಡ್ಸ್. ಕಾಂಗ್ರೆಸ್‍ನಲ್ಲೇ ಅವರನ್ನು ಯಾರೂ ಕ್ಯಾರೇ ಎನ್ನುತ್ತಿಲ್ಲ. ಉತ್ತರ ನೀಡಲೂ ಅವರು ಅರ್ಹರಲ್ಲ' ಎಂದು ಡಿ.ವಿ.ಸದಾನಂದ ಗೌಡ ಟೀಕಿಸಿದರು.

ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದ ಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ವಾಕ್ಸಮರ ನಡೆಯುತ್ತಿದೆ. 'ಕಾಮಾಲೆ ಕಣ್ಣಿನವರಿಗೆ ಲೋಕವೆಲ್ಲಾ ಹಳದಿಯಾಗಿ ಕಾಣಿಸುತ್ತದೆ' ಎಂದು ಸದಾನಂದ ಗೌಡರು ಕುಟುಕಿದ್ದಾರೆ.

ರೈಲ್ವೆ ಖಾತೆ ಏಕೆ ಹೋಯಿತು ಅಂದ್ರು ಡಿವಿಎಸ್ ನಗ್ತಾರೆ : ಸಿದ್ದರಾಮಯ್ಯರೈಲ್ವೆ ಖಾತೆ ಏಕೆ ಹೋಯಿತು ಅಂದ್ರು ಡಿವಿಎಸ್ ನಗ್ತಾರೆ : ಸಿದ್ದರಾಮಯ್ಯ

'ನಾನು ಈ ಕ್ಷೇತ್ರದವನಲ್ಲ ಎಂದು ಹೋದಲ್ಲೆಲ್ಲಾ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಕಾಂಗ್ರೆಸ್‍ನಲ್ಲೇ ಅವರನ್ನು ಯಾರೂ ಕ್ಯಾರೇ ಎನ್ನುತ್ತಿಲ್ಲ. ಉತ್ತರ ನೀಡಲೂ ಅವರು ಅರ್ಹರಲ್ಲ' ಎಂದು ಟೀಕಿಸಿದರು.

Sadananda Gowda

'ಸಿದ್ದರಾಮಯ್ಯ ಈಗ ಸಿಎಂ ಆಗಿಲ್ಲ. ಪ್ರತಿಪಕ್ಷ ನಾಯಕರಲ್ಲ. ಅವರಿಗೆ ಗೂಟದ ಕಾರಿನ ಮೇಲೆ ಬಹಳ ಆಸಕ್ತಿ. ಪೊಲೀಸ್ ಜೀಪ್‍ಗಳು ಹಿಂಬಾಲಿಸಬೇಕು ಎಂದು ಬಯಸುತ್ತಾರೆ. ಈಗ ಅವರ ಬಳಿ ಇದ್ಯಾವುದೂ ಇಲ್ಲ. ಅದಕ್ಕಾಗಿ ಭ್ರಮನಿರಸನಗೊಂಡು ಬಾಯಿಗೆ ಬಂದಂತೆ ಮಾತನಾಡುತ್ತಾರೆ' ಎಂದು ಲೇವಡಿ ಮಾಡಿದರು.

ಬ್ಯಾಟರಾಯನಪುರದಲ್ಲಿ ಬಿರುಸಿನ ಪ್ರಚಾರ ನಡೆಸಿದ ಸದಾನಂದ ಗೌಡಬ್ಯಾಟರಾಯನಪುರದಲ್ಲಿ ಬಿರುಸಿನ ಪ್ರಚಾರ ನಡೆಸಿದ ಸದಾನಂದ ಗೌಡ

'ನನ್ನ ಪ್ರಗತಿ ವರದಿ ಅವರಿಗೆ ಕಳುಹಿಸೋಣ ಎಂದರೆ ಜನರು ಸಿದ್ದರಾಮಯ್ಯ ಅವರನ್ನು ಮೈಸೂರಿನಿಂದ ಓಡಿಸಿದ್ದಾರೆ. ವಿಧಾನಸೌಧದಲ್ಲೂ ಅವರಿಗೆ ಅಡ್ರೆಸ್ ಇಲ್ಲ. ಬಾದಾಮಿಯಲ್ಲಿ ಸಿದ್ದರಾಮಯ್ಯಗೆ ಯಾರೂ ಬಾಡಿಗೆ ಮನೆ ಕೊಡುತ್ತಿಲ್ಲ' ಎಂದು ವ್ಯಂಗ್ಯವಾಡಿದರು.

ದ್ವಾರಕನಾಥ್ ಗುರೂಜಿ ಭೇಟಿಯಾದ ಡಿ.ವಿ.ಸದಾನಂದ ಗೌಡದ್ವಾರಕನಾಥ್ ಗುರೂಜಿ ಭೇಟಿಯಾದ ಡಿ.ವಿ.ಸದಾನಂದ ಗೌಡ

'ಸಿದ್ದರಾಮಯ್ಯ ಅವರ ಬಾಡಿ ಲಾಂಗ್ವೇಜ್ ಏನು ಎಂದು ನಾಡಿನ ಜನರಿಗೆ ಗೊತ್ತಿದೆ. ಸಮ್ಮಿಶ್ರ ಸರಕಾರ ಉರುಳಿದರೆ ಸಾಕು ಎಂದು ಕಾಯುತ್ತಿದ್ದಾರೆ. ಅಂತಹವರ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ' ಎಂದು ಹೇಳಿದರು.

English summary
Bangalore North Lok sabha seat BJP candidate D.V.Sadananda Gowda said that Former CM of Karnataka Siddaramaiah rejected goods. Even Congress leaders can't take his direction seriously.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X