ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊವಿಡ್ ಭ್ರಷ್ಟಾಚಾರ: ಇಬ್ಬರು ಸಚಿವರಿಗೆ ಒಂದೇ ಉತ್ತರ ಕೊಟ್ಟ ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ಜುಲೈ 4: ಕರ್ನಾಟಕದಲ್ಲಿ ಕೊರೊನಾ ವೈರಸ್ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಹಾಗೂ ವೈದ್ಯಕೀಯ ಸಾಮಾಗ್ರಿಗಳ ಖರೀದಿಯಲ್ಲಿ ರಾಜ್ಯ ಸರ್ಕಾರ ಅವ್ಯವಹಾರ ನಡೆಸಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದರು.

ಈ ಆರೋಪಕ್ಕೆ ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವೈದ್ಯಕೀಯ ಸಚಿವ ಡಾ ಸುಧಾಕರ್ ಸ್ಪಷ್ಟನೆ ನೀಡಿದ್ದರು. ಸಿದ್ದರಾಮಯ್ಯ ಆರೋಪ ಸುಳ್ಳು, ಲೆಕ್ಕ ಕೊಡಲು ನಾವು ಸಿದ್ಧ, ಬೇಕಾದರೆ ನಮ್ಮ ಜೊತೆ ಪ್ರವಾಸ ಮಾಡಲಿ ಎಂದಿದ್ದರು. ಮತ್ತೊಬ್ಬ ಸಚಿವರು ''ಸಿದ್ದರಾಮಯ್ಯ ಅವರು ಯಾವುದಾದರೂ ಒಂದು ಆಸ್ಪತ್ರೆಯ ಜವಾಬ್ದಾರಿ ವಹಿಸಿಕೊಳ್ಳಲಿ'' ಎಂದು ಪ್ರತ್ಯುತ್ತರ ನೀಡಿದ್ದರು.

ವೈದ್ಯಕೀಯ ಸಾಮಾಗ್ರಿ ಖರೀದಿಯಲ್ಲಿ ಸರ್ಕಾರದಿಂದ 2,200 ಕೋಟಿ ಭ್ರಷ್ಟಾಚಾರವೈದ್ಯಕೀಯ ಸಾಮಾಗ್ರಿ ಖರೀದಿಯಲ್ಲಿ ಸರ್ಕಾರದಿಂದ 2,200 ಕೋಟಿ ಭ್ರಷ್ಟಾಚಾರ

ಸಚಿವರ ಈ ಹೇಳಿಕೆಗೆ ತಿರುಗೇಟು ನೀಡಿರುವ ಸಿದ್ದರಾಮಯ್ಯ ''ಇಬ್ಬರಿಗೂ ಒಂದೇ ಉತ್ತರ: ದಯವಿಟ್ಟು ರಾಜೀನಾಮೆ ನೀಡಿ, ನಾವು ಪ್ರವಾಸನೂ ಮಾಡ್ತೇವೆ, ಒಂದು ಆಸ್ಪತ್ರೆಯದ್ದಲ್ಲ, ಇಡೀ ರಾಜ್ಯದ ಹೊಣೆಯನ್ನೂ ಹೊರುತ್ತೇವೆ'' ಎಂದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ ''ಕೊರೊನಾ ಚಿಕಿತ್ಸೆಯಲ್ಲಿನ ಅವ್ಯವಹಾರದ ಆರೋಪಕ್ಕೆ ಒಬ್ಬ ಸಚಿವರು ಜತೆಯಲ್ಲಿ ಪ್ರವಾಸಕ್ಕೆ ಕರೆದಿದ್ದಾರೆ, ಇನ್ನೊಬ್ಬರು ಆಸ್ಪತ್ರೆಯ ಹೊಣೆ ಹೊರಲು ಹೇಳಿದ್ದಾರೆ. ಇವರಿಬ್ಬರಿಗೂ ಒಂದೇ ಉತ್ತರ: ದಯವಿಟ್ಟು ರಾಜೀನಾಮೆ ನೀಡಿ, ನಾವು ಪ್ರವಾಸನೂ ಮಾಡ್ತೇವೆ, ಒಂದು ಆಸ್ಪತ್ರೆಯದ್ದಲ್ಲ, ಇಡೀ ರಾಜ್ಯದ ಹೊಣೆಯನ್ನೂ ಹೊರುತ್ತೇವೆ'' ಎಂದು ಹೇಳಿದ್ದಾರೆ.

Siddaramaiah Reacts on Sudhakar and Sriramulu statement about medical equipment corruption

''ಕೊರೊನಾ‌ ನಿಯಂತ್ರಣದ ಸಲಕರಣೆ ಖರೀದಿಯಲ್ಲಿ ಅವ್ಯವಹಾರ ನಡೆದಿಲ್ಲ, ದಾಖಲೆಗಳಿವೆ ಎಂದು ಹೇಳಿದರಷ್ಟೆ ಸಾಲದು. ಅದನ್ನು ಬಿಡುಗಡೆ‌ ಮಾಡಿ ಡಾ ಸುಧಾಕರ್. ಮಾಹಿತಿ ಇದ್ದರೆ ಮುಚ್ಚಿಡುತ್ತಿರುವುದು ಯಾಕೆ ಎಂದು ಸಿಎಂ ಅವರನ್ನು ಕೇಳಿ. ಮಾಹಿತಿ ಕೇಳಿದ ನನ್ನ ಪತ್ರಕ್ಕೆ ಉತ್ತರಿಸಲು ಹೇಳಿ'' ಎಂದು ಇನ್ನೊಂದು ಟ್ವೀಟ್ ಮಾಡಿದ್ದಾರೆ.


ಇದಕ್ಕೂ ಮುಂಚೆ ರಾಜ್ಯ ಸರ್ಕಾರದ ಮೇಲೆ ಅವ್ಯವಹಾರ ಆರೋಪ ಮಾಡಿದ ಸಿದ್ದರಾಮಯ್ಯ ''ಕೊವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜ್ಯ ಸರ್ಕಾರ 2200 ಕೋಟಿ ರೂಪಾಯಿಯನ್ನು ವೈದ್ಯಕೀಯ ಸಾಮಾಗ್ರಿ ಖರೀದಿಯಲ್ಲಿ ಭ್ರಷ್ಟಾಚಾರ ಮಾಡಿದೆ'' ಎಂದು ದೂರಿದ್ದರು.

ಮಾರುಕಟ್ಟೆ ಬೆಲೆಗಿಂತ ಹೆಚ್ಚು ಹಣ ನೀಡಿ ವೆಂಟಿಲೇಟರ್, ಪಿಪಿಇ ಕಿಟ್, ಮಾಸ್ಕ್‌, ಗ್ಲೋವ್ಸ್, ಸ್ಯಾನಿಟೈಸರ್, ಸೋಪ್, ಆಕ್ಸಿಜನ್ ಸೇರಿದಂತೆ ಹಲವು ಸಾಮಾಗ್ರಿಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದರು.

English summary
Congress Leader Siddaramaiah give response to Sudhakar and Sriramulu statement about medical equipment corruption.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X