ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಕ್ಷಾಂತರ ಮಾಡುವ ಶಾಸಕರಿಗೆ ಸುಪ್ರೀಂ ತೀರ್ಪು ದೊಡ್ಡ ಪಾಠ: ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ನವೆಂಬರ್ 13: ಪಕ್ಷಾಂತರ ಮಾಡುವ ಶಾಸಕರಿಗೆ ಸುಪ್ರೀಂಕೋರ್ಟ್ ತೀರ್ಪು ದೊಡ್ಡ ಪಾಠ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಅನರ್ಹ ಶಾಸಕರ ಕುರಿತು ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಬಳಿಕ ಪ್ರತಿಕ್ರಿಯೆ ನೀಡಿರುವ ಅವರು ಪಕ್ಷಾಂತರ ಮಾಡುವ ಶಾಸಕರಿಗೆ ಸುಪ್ರೀಂಕೋರ್ಟ್ ತೀರ್ಪು ದೊಡ್ಡ ಪಾಠವಾಗಲಿದೆ. ಈ ಹಿಂದೆ ಆಸಕರು ವಿಪ್ ಉಲ್ಲಂಘನೆ ಮತ್ತು ಪಕ್ಷಾಂತರ ಮಾಡಿದ್ದರು ಎಂದೇ ಅವರನ್ನು ಅನರ್ಹಗೊಳಿಸಲಾಗಿತ್ತು.

ಸುಪ್ರೀಂಕೋರ್ಟ್ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಸುಪ್ರೀಂ ಕೋರ್ಟ್ ಅನರ್ಹತೆ ಎತ್ತಿ ಹಿಡಿದು, ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದೆ.

ಪ್ರಜಾಪ್ರಭುತ್ವದಲ್ಲಿ ಒಂದು ಪಕ್ಷದ ಚಿನ್ಹೆಯ ಮೇಲೆ ಚುನಾಯಿತರಾದ ಮೇಲೆ ಇನ್ನೊಂದು ಪಕ್ಷಕ್ಕೆ ಹೋಗುವುದು ಅಪರಾಧವಾಗುತ್ತದೆ. ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೇಕೆರೂರು, ರಾಣಿಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆಆರ್ ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೆಆರ್ ಪೇಟೆ, ಹುಣಸೂರು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ತೆರವಾದ ಕ್ಷೇತ್ರಗಳಿಗೆ 6 ತಿಂಗಳ ಒಳಗಡೆ ಚುನಾವಣೆ ನಡೆಸಬೇಕಾಗುತ್ತದೆ.

ಸುಪ್ರೀಂ ತೀರ್ಪು ಸ್ವಾಗತಾರ್ಹ

ಸುಪ್ರೀಂ ತೀರ್ಪು ಸ್ವಾಗತಾರ್ಹ

ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಸ್ವಾಗತ ಮಾಡುತ್ತೇನೆ, ಸರ್ವೊಚ್ಚ ನ್ಯಾಯಾಲಯವು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾಡಿದ ಆದೇಶವನ್ನು ಭಾಗಶಃ ಎತ್ತಿ ಹಿಡಿದಿದ್ದಾರೆ, ನಮ್ಮ ಶಾಸಕರು 14 ಜನ ರಾಜೀನಾಮೆ ಕೊಟ್ಟರು ವಿಪ್ ಉಲ್ಲಂಘನೆ ಮಾಡಿದ್ರು,ನಾವು ಇದರ ಮೇಲೆ ಪಿಟಿಷನ್ ಹಾಕಿದ್ದೆವು. ಅದರ ಆದಾರದ ಮೇಲೆ ಕೂಲಂಕಷವಾಗಿ ವಿಚಾರಣೆ ನಡೆಸಿ ಕ್ವಶ್ಚನ್ ಆಫ್ ಲಾ ಕ್ವಶ್ಚನ್ ಆಫ್ ಪ್ರಾಕ್ಟಿಸ್ ಎಲ್ಲವನ್ನೂ ಉಲ್ಲಂಘನೆ ಮಾಡಿದ್ದರು. ಹಾಗಾಗಿ ಅವರನ್ನು ಸ್ಪೀಕರ್ ಅನರ್ಹಗೊಳಿಸಿದ್ದರು.

ಅನರ್ಹತೆಗೆ ಎರಡು ಕಾರಣಗಳು

ಅನರ್ಹತೆಗೆ ಎರಡು ಕಾರಣಗಳು

ಇದರಲ್ಲಿ ಎರಡು ಭಾಗ ಇದೆ, ಅವರು ಪಕ್ಷಾಂತರ ಮಾಡಿದ್ದರಿಂದ ಅನರ್ಹರಾಗಿದ್ದಾರೆ , ಅವರು ಈ ಅವಧಿಗೆ ಚುನಾವಣೆಗೆ ಪೂರ್ಣ ನಿಲ್ಲಬಾರದು ಎನ್ನೋದು ಎರಡನೇ ಭಾಗಪ್ರಜಾಪ್ರಭುತ್ವದಲ್ಲಿ ಒಂದು ಪಕ್ಷದಲ್ಲಿ ಆಯ್ಕೆಯಾದ ಮೇಲೆ ಮನಸೋ ಇಚ್ಚೆ ನಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.

ಮೊದಲ ಭಾಗವನ್ನು ಸುಪ್ರೀಂ ಎತ್ತಿ ಹಿಡಿದಿದೆ

ಮೊದಲ ಭಾಗವನ್ನು ಸುಪ್ರೀಂ ಎತ್ತಿ ಹಿಡಿದಿದೆ

ಮೊದಲ ಭಾಗವನ್ಜು ಸುಪ್ರಿಂ ಎತ್ತಿ ಹಿಡಿದಿದೆ ಎರಡನೇ ಭಾಗವನ್ನು ಸ್ಪೀಕರ್ ಆದೇಶವನ್ನ ಸುಪ್ರಿಂ ಮಾಡಿಫೈ ಮಾಡಿದೆ. ಪ್ರಜಾಪ್ರಭುತ್ವ ಮತ್ತು 10 ನೇ ಪರಿಚ್ಛೇದದಲ್ಲಿ ಒಂದು ಪಕ್ಷದಿಂದ ಗೆದ್ದವರು ರಾಜೀನಾಮೆ ಕೊಡಬಾರದು ಅಂತಿಲ್ಲ, ಆದರೆ ಸ್ವಯಂ ಪ್ರೇರಿತ ರಾಜೀನಾಮೆ ಅಲ್ಲದೇ ಹೋದರೆ ಅದು ತಪ್ಪು, ಸ್ವೀಕರಿಸಲು ಸಾಧ್ಯವಿಲ್ಲ.ಇದನ್ಜು ಸುಪ್ರಿಂ ಕೋರ್ಟ್ ಮಾನ್ಯ ಮಾಡಿದೆ.

ಇದು ಸೂಕ್ತವಲ್ಲ ಅನ್ನೋದನ್ನೂ ಕೂಡ ತೀರ್ಪಿನ ಲ್ಲಿ ಹೇಳಲಾಗಿದೆ.ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರುವುದು ಆಯಾರಾಂ ಗಯಾ ರಾಂ ಅನೈತಿಕ ವಿಚಾರ. ಇದು ಎಂಎಲ್ಎಗಳಿಗೆ ಪಾಟವಾಗಬೇಕಿದೆ.ಜನರು ಒಂದು ಪಕ್ಷದಿಂದ ಗೆದ್ದು ಇನ್ನೊಂದು ಪಕ್ಷಕ್ಕೆ ಹೋಗುವುದನ್ನು ಸಹಿಸಿಕೊಳ್ಳಲ್ಲ.

ಉಪ ಚುನಾವಣೆಯಲ್ಲಿ ನಿಂತರೂ ಸೋಲಿಸುತ್ತಾರೆ

ಉಪ ಚುನಾವಣೆಯಲ್ಲಿ ನಿಂತರೂ ಸೋಲಿಸುತ್ತಾರೆ

ಉಪ ಚುನಾವಣೆ ಯಲ್ಲಿ ನಿಂತರೂ ಕೂಡ ಜನರು ಸೋಲಿಸ್ತಾರೆ.ಅನರ್ಹರು ಪಕ್ಷಾಂತರ ಮಾಡಿದ್ದನ್ನು ಸುಪ್ರಿಂ ಕೋರ್ಟ್ ಒಪ್ಪಿಲ್ಲ.ಇದು ಸಂವಿಧಾನಕ್ಕೆ ವಿರೋಧ.ಇದು ಬೇರೆ ಪಕ್ಷಾಂತರ ಮಾಡುವ ಶಾಸಕರಿಗೂ ಕೂಡ ಪಾಠ.

ಗುಜರಾತ್ ಮಹಾರಾಷ್ಟ್ರ ದಲ್ಲೂ ಹೀಗೆ ಆಗಿದೆ.ಗುಜರಾತ್ ಮಹಾರಾಷ್ಟ್ರ ದಲ್ಕಿ ಯಾರು ಪಕ್ಷಾಂತರ ಮಾಡಿದ್ರೋ ಅವರೆಲ್ಲ ಸೋತಿದ್ದಾರೆ.ಮೇಲ್ಮನವಿ ಸಂಬಂಧಪಟ್ಟ ಹಾಗೆ ಪಕ್ಷದಲ್ಲಿ ಚರ್ಚೆ ಮಾಡ್ತೇವೆ.ವೈಯಕ್ತಿಕ ಅಭಿಪ್ರಾಯ ಮೇಲ್ಮನವಿ ಹೋಗುವ ಅವಶ್ಯಕತೆ ಇಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

English summary
Leader of the Opposition Siddaramaiah says the Supreme Court ruling is a big lesson for the defending MLAs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X