ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಕೊಡಗಿನಲ್ಲಿ ನಿಷೇಧಾಜ್ಞೆ: ಸಿದ್ದರಾಮಯ್ಯ ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಆಗಸ್ಟ್ 23: ಮೊಟ್ಟೆ ಪ್ರಕರಣ, ಕಾಂಗ್ರೆಸ್ ಪ್ರತಿಭಟನೆ, ಕೊಡಗಿನಲ್ಲಿ ನಿಷೇಧಾಜ್ಞೆ ಸೇರಿ ಹಲವು ವಿಷಯಗಳ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ.

ಕೊಡಗಿನಲ್ಲಿ ನಿ‍ಷೇಧಾಜ್ಞೆ ಜಾರಿ ಮಾಡಿರುವುದರಿಂದ ನಾನು ಈ ಬಗ್ಗೆ ಶಾಸಕರ ಜೊತೆಗೆ ಮಾತನಾಡುತ್ತೇನೆ. ಬೃಹತ್ ಪ್ರತಿಭಟನೆ ಬದಲು ಸಾಂಕೇತಿಕ ಪ್ರತಿಭಟನೆ ನಡೆಸುವ ಬಗ್ಗೆ ಯೋಚಿಸುತ್ತೇನೆ. ಈ ಬಗ್ಗೆ ಪೂರ್ಣ ವಿಷಯ ತಿಳಿಸುತ್ತೇನೆ ಎಂದರು.

ಶಾಸಕರ ಮೌಲ್ಯ ಮಾಪನ; ಸಿದ್ದರಾಮಯ್ಯ ಕಾರ್ಯ ವೈಖರಿಗೆ ಅಂಕ ನೀಡಿಶಾಸಕರ ಮೌಲ್ಯ ಮಾಪನ; ಸಿದ್ದರಾಮಯ್ಯ ಕಾರ್ಯ ವೈಖರಿಗೆ ಅಂಕ ನೀಡಿ

ಆಗಸ್ಟ್ 26 ರಂದು ಕಾಂಗ್ರೆಸ್ ಪ್ರತಿಭಟನೆ ಮತ್ತು ಬಿಜೆಪಿಯಿಂದ 'ಜನ ಜಾಗೃತಿ ಸಮ್ಮೇಳನ' ನಡೆಯಲಿದೆ. ಈ ಹಿನ್ನೆಲೆ ಪೂರ್ವಭಾವಿಯಾಗಿ ಕೊಡಗು ಜಿಲ್ಲೆಯಲ್ಲಿ ನಾಲ್ಕು ದಿನ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ನಾಳೆಯಿಂದ ಅಂದರೆ, ಆಗಸ್ಟ್ 24 ರ ಬೆಳಗ್ಗೆ 6 ಗಂಟೆಯಿಂದ ಆಗಸ್ಟ್ 27 ರ ಸಂಜೆ 6 ರವರೆಗೆ ಕೊಡಗು ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿಯಿರಲಿದೆ.

Siddaramaiah Reaction on Imposing Section 144 in Kodagu district

"ಮಳೆ ಹಾನಿ ಪರಿಸ್ಥಿತಿ ನೋಡಲು ಹೋಗಿದ್ದೆ. ಕಪ್ಪು ಬಾವುಟ ಪ್ರದರ್ಶನ ಮಾಡಿದರು. ಒಂದು ಹದಿನೈದು ಜನ ಇದ್ದರು. ದಾರಿಯಲ್ಲಿ ಅಲ್ಲೂ ಕೂಡ ಪೊಲೀಸರು ಸುಮ್ಮನೆ ನಿಂತಿದ್ದರು. ಒಬ್ಬ ಬಂದು ನನ್ನ ಕಾರಿನ ಒಳಗಡೆ ಒಂದು ಭಿತ್ತಿ ಪತ್ರ ಹಾಕಿದರು. ಅವರನ್ನು ಪೊಲೀಸರು ಹಿಡಿಯುವುದಾಗಲಿ, ಬಂಧಿಸುವುದಾಗಲಿ ಮಾಡಲಿಲ್ಲ ಇದು ಒಂದು ಘಟನೆ" ಎಂದರು.

Breaking: ಕೊಡಗು ನಿಷೇಧಾಜ್ಞೆ: ಕಾಂಗ್ರೆಸ್ ಪ್ರತಿಭಟನೆ ಮುಂದೂಡಿಕೆBreaking: ಕೊಡಗು ನಿಷೇಧಾಜ್ಞೆ: ಕಾಂಗ್ರೆಸ್ ಪ್ರತಿಭಟನೆ ಮುಂದೂಡಿಕೆ

"ಇನ್ನೊಂದು ನಾವು ಮಡಿಕೇರಿಯ ಕೆಲವು ಭಾಗಗಳಿಗೆ ಹೋಗಿದ್ದೇವು. ಅಲ್ಲಿಂದ ವಿರಾಜಪೇಟೆ ಕಡೆ ಹೋಗಿದ್ದೆವು. ಅಲ್ಲಿ ಅನೇಕ ಭಾಗಗಳಲ್ಲಿ ಮಣ್ಣು ಮನೆ ಕಸಿದಿರುವುದು ನೋಡಿದೇವು. ಒಂದು ನಡಿಗೆ ಅಲ್ಲಿ ವೆಂಟೆಜ್ ಡ್ಯಾಮ್ ಮಾಡಲಾಗಿದೆ. ಅದರಿಂದ ತುಂಬಾ ತೊಂದರೆಯಾಗುತ್ತಿದೆ. ಒಂದು ಶಾಲೆಯಲ್ಲಿ ಮಣ್ಣು ಕುಸಿದು ಶಾಳೆ ಮೇಲೆಲ್ಲಾ ಬಿದ್ದಿದೆ. ಈಗ ಅಲ್ಲಿನ ಮಕ್ಕಳು ಬೇರೆ ಶಾಲೆಗ ಹೋಗುತ್ತಿದ್ದಾರೆ. ಅಲ್ಲಿನ ಜನ ಈ ವೆಂಟೆಜ್ ಡ್ಯಾಮ್ ಬದಲು, ಬರಿ ಡ್ಯಾಮ್ ಮಾಡಬೇಕಿತ್ತು ಎನ್ನುತ್ತಾರೆ" ಎಂದರು.

ಮಾಂಸ ತಿಂದು ದೇವಸ್ಥಾನಕ್ಕೆ ಹೋಗ್ತೀನಿ ಎನ್ನುವ ಭಂಡತನ : ಸಿದ್ದು ವಿರುದ್ಧ ವಿಜಯೇಂದ್ರ ಕಿಡಿಮಾಂಸ ತಿಂದು ದೇವಸ್ಥಾನಕ್ಕೆ ಹೋಗ್ತೀನಿ ಎನ್ನುವ ಭಂಡತನ : ಸಿದ್ದು ವಿರುದ್ಧ ವಿಜಯೇಂದ್ರ ಕಿಡಿ

'ಪ್ರತಿಭಟನೆ ನಡೆಯುವ ಬಗ್ಗೆ ಪೊಲೀಸರಿಗೆ ಮಾಹಿತಿ ಇರಲಿಲ್ಲವೇ... ಐದು ಸ್ಥಳಗಳಲ್ಲಿ ಪ್ರತಿಭಟನೆ, ಕಪ್ಪು ಬಾವುಟ ಪ್ರದರ್ಶನ ನಡೆದಿದೆ. ಆದರೂ ಪೊಲೀಸರು ಏನು ಮಾಡಲಿಲ್ಲ" ಎಂದು ಆಕ್ರೋಶ ಹೊರಹಾಕಿದರು.

Siddaramaiah Reaction on Imposing Section 144 in Kodagu district

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದ ಪ್ರಕರಣ ರಾಜ್ಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಮೊಟ್ಟೆ ವಿಷಯವನ್ನು ಈಗ ಮಾಂಸದವರೆಗೂ ತೆಗೆದುಕೊಂಡು ಹೋಗಿವೆ.

ಕೊಡಗು ಜಿಲ್ಲಾಧಿಕಾರಿ ಡಾ.ಸತೀಶ ಬಿ.ಸಿ. ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ದಿನಗಳಲ್ಲಿ ಯಾವುದೇ ಪ್ರತಿಭಟನೆ, ಜಾಥಾ, ಮೆರವಣಿಗೆ, ಕಪ್ಪುಬಾವುಟ ಪ್ರದರ್ಶನ ಮಾಡುವುದನ್ನು ನಿಷೇಧಿಸಲಾಗಿದೆ. ಐದು ಮತ್ತು ಅದಕ್ಕಿಂತ ಹೆಚ್ಚಿನ ಜನರು ಒಂದೆಡೆ ಸೇರದಂತೆ ನಿರ್ಬಂಧ ವಿಧಿಸಲಾಗಿದೆ.

ಪುಂಡರಿಗೂ ಬಿಜೆಪಿ ಅಪರೇಷನ್ ಕಮಲ ಮಾಡುತ್ತಿದೆಯೇ? ಸಿದ್ದರಾಮಯ್ಯ ವ್ಯಂಗ್ಯಪುಂಡರಿಗೂ ಬಿಜೆಪಿ ಅಪರೇಷನ್ ಕಮಲ ಮಾಡುತ್ತಿದೆಯೇ? ಸಿದ್ದರಾಮಯ್ಯ ವ್ಯಂಗ್ಯ

ಆಗಸ್ಟ್‌ 18ರಂದು ಕೊಡಗು ಜಿಲ್ಲೆಗೆ ಭೇಟಿ ನೀಡಿದಾಗ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ತೋರಿಸಿ, ಮೊಟ್ಟೆ ಎಸೆದಿರುವ ಘಟನೆಗೆ ಪ್ರತಿರೋಧವಾಗಿ ಕಾಂಗ್ರೆಸ್ ಆ.26 ರಂದು ಕೊಡಗು ಚಲೋ, ಕೊಡಗು ಎಸ್ಪಿ ಕಚೇರಿಗೆ ಮುತ್ತಿಗೆ ಕಾರ್ಯಕ್ರಮ ನಡೆಸಲು ಕರೆ ನೀಡಿತ್ತು. ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸುವುದಾಗಿ ಹೇಳಿತ್ತು.

ಕಾಂಗ್ರೆಸ್ ಕಾರ್ಯಕ್ರಮಕ್ಕೆ ಪ್ರತಿಯಾಗಿ ಬಿಜೆಪಿ ಆಯೋಜಿಸಿದ್ದ 'ಜನಜಾಗೃತಿ ಸಮಾವೇಶ'ಕ್ಕೂ ಒಂದು ಲಕ್ಷ ಜನರನ್ನು ಸೇರಿಸುವುದಾಗಿ ಬಿಜೆಪಿಯೂ ತಿಳಿಸಿತ್ತು.

ಕೊಡಗು ಚಲೋ ಮುಂದೂಡಿಕೆ:
ಮೊಟ್ಟೆ ಎಸೆದ ಪ್ರಕರಣ, ಕೊಡಗಿನಲ್ಲಿ ಕಾಂಗ್ರೆಸ್‌ ಪ್ರತಿಭಟನೆ, ಕೊಡಗಿನಲ್ಲಿ ನಿಷೇಧಾಜ್ಞೆ ಸೇರಿ ಹಲವು ವಿಷಯಗಳ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ಕೊಡಗಿನಲ್ಲಿ ಸೆಕ್ಷನ್ 144 ಜಾರಿ ಮಾಡಿದ್ದಾರೆ. ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿಯಾಗಿ ನಾನು ಅದನ್ನು ಉಲ್ಲಂಘಿಸುವುದಿಲ್ಲ. ಹೀಗಾಗಿ ಪ್ರತಿಭಟನೆಯನ್ನು ಮುಂದೂಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

English summary
Karnataka politics: Siddaramaiah reaction on Section 144 imposed in Kodagu district ahead of Congress protest and BJP's Jan Jagarti Sammelan on August 26.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X