ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರದ ಪ್ಯಾಕೇಜ್ ಆಕರ್ಷಕವಾಗಿದ್ದರೂ, ಪಾರದರ್ಶಕವಾಗಿಲ್ಲ

|
Google Oneindia Kannada News

ಬೆಂಗಳೂರು, ಮೇ 15: ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಘೋಷಣೆ ಮಾಡಿದ್ದ ಪ್ಯಾಕೇಜ್‌ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರದ ಪ್ಯಾಕೇಜ್ ಆಕರ್ಷಕವಾಗಿದ್ದರೂ, ಪಾರದರ್ಶಕವಾಗಿಲ್ಲ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ಧರಾಮಯ್ಯ ''ಕೊರೊನಾ ಹಾವಳಿಯಿಂದ ನೊಂದಿರುವ ರೈತರು ಮತ್ತು ಆಶಾ ಕಾರ್ಯಕರ್ತರಿಗೆ ನೆರವು ನೀಡುವ ರಾಜ್ಯ ಸರ್ಕಾರದ ಮೂರನೇ ಪ್ಯಾಕೇಜ್ ಮೇಲ್ನೋಟಕ್ಕೆ ಆಕರ್ಷಕವಾಗಿ ಕಂಡರೂ, ಪಾರದರ್ಶಕತೆ ಇಲ್ಲದ ಈ ಪ್ಯಾಕೇಜ್ ಬಿಚ್ಚಿಟ್ಟಿದ್ದಕ್ಕಿಂತ ಬಚ್ಚಿಟ್ಟದ್ದೇ ಹೆಚ್ಚು'' ಎಂದು ಬರೆದುಕೊಂಡಿದ್ದಾರೆ.

Siddaramaiah Reaction About State Government Financial Package

ಸಿಎಂ 3ನೇ ಪ್ಯಾಕೇಜ್: ಮೆಕ್ಕೆಜೋಳ ಬೆಳೆಗಾರರಿಗೆ, ಆಶಾ ಕಾರ್ಯಕರ್ತೆರಿಗೆ ಬಂಪರ್ ಸಿಎಂ 3ನೇ ಪ್ಯಾಕೇಜ್: ಮೆಕ್ಕೆಜೋಳ ಬೆಳೆಗಾರರಿಗೆ, ಆಶಾ ಕಾರ್ಯಕರ್ತೆರಿಗೆ ಬಂಪರ್

''ಮೆಕ್ಕೆಜೋಳ ಬೆಳೆಗಾರರ‌ ಸಮಸ್ಯೆ‌ ಮಾರುಕಟ್ಟೆಯದ್ದು. ಈ ವರ್ಷ ರೈತರು ಬೆಳೆದಿರುವುದು 44 ಲಕ್ಷ ಟನ್ ಮೆಕ್ಕೆಜೋಳ. ಖರೀದಿಯಾಗಿರುವುದು 22 ಸಾವಿರ ಟನ್ ಮಾತ್ರ. ನಿಮ್ಮ ರೂ.5 ಸಾವಿರ ನೆರವು ಏನೇನೂ ಸಾಲದು. ಮೊದಲು ಲಾಭದಾಯಕ ಬೆಂಬಲ ಬೆಲೆ ನಿಗದಿಗೊಳಿಸಿ ರೈತರ ಮೆಕ್ಕೆಜೋಳ ಖರೀದಿಗೆ ವ್ಯವಸ್ಥೆ ಮಾಡಿ'' ಎಂದು ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.

''ಕುರಿ, ಮೇಕೆ ಸತ್ತರೆ ರೂ.5೦೦೦ ಪರಿಹಾರ‌ ನೀಡುವುದು ಸ್ವಾಗತಾರ್ಹ. ಇದು ನಮ್ಮ ಸರ್ಕಾರ ಪ್ರಾರಂಭಿಸಿದ್ದ 'ಅನುಗ್ರಹ' ಯೋಜನೆ. ಈ ಯೋಜನೆಯಂತೆ ರೋಗ ಮತ್ತು ಅಪಘಾತದಲ್ಲಿ ಮೃತಪಟ್ಟ ಹಸು, ಎತ್ತು, ಕೋಣ ಸೇರಿದಂತೆ ಎಲ್ಲ ಮೃತ ಜಾನುವಾರುಗಳ ಒಡೆಯರಿಗೆ ಈ ಸೌಲಭ್ಯವನ್ನು ವಿಸ್ತರಿಸಿ.'' ಎಂದು ಒತ್ತಾಯಿಸಿದ್ದಾರೆ.

''ಆಶಾ ಕಾರ್ಯಕರ್ತರಿಗೆ ರೂ.3000 ಪ್ರೋತ್ಸಾಹ ಧನ ನೀಡುವುದು ಸ್ವಾಗತಾರ್ಹ. ಆದರೆ ಇದನ್ನು ಆಶಾ ಕಾರ್ಯಕರ್ತರಿಗಷ್ಟೇ ಸೀಮಿತಗೊಳಿಸದೆ ಅರೆವೈದ್ಯಕೀಯ ಸಿಬ್ಬಂದಿ ಮತ್ತು ಪೌರಕಾರ್ಮಿಕರು ಸೇರಿದಂತೆ ಇತರ ಅಗತ್ಯ ಸೇವಾ ಸಿಬ್ಬಂದಿಗೆಲ್ಲರಿಗೂ ವಿಸ್ತರಿಸಿ.'' ಎಂದು ಟ್ವಿಟ್ಟರ್ ಖಾತೆಯಲ್ಲಿ ಸರ್ಕಾರಕ್ಕೆ ಸಿದ್ಧರಾಮಯ್ಯ ಹೇಳಿದ್ದಾರೆ.

English summary
Opposition party leader Siddaramaiah reaction about state government financial package.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X