• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಂಧ್ರ ಸರ್ಕಾರವನ್ನು ಹೊಗಳಿದ ಸಿದ್ದರಾಮಯ್ಯ, ಧನ್ಯವಾದ ಹೇಳಿದ ಅಧಿಕಾರಿ

|

ಬೆಂಗಳೂರು, ಜುಲೈ 6: ಕೊರೊನಾ ವೈರಸ್ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಸರ್ಕಾರದ ಕ್ರಮಗಳನ್ನು ನಿರಂತರವಾಗಿ ಖಂಡಿಸುತ್ತಾ ಬಂದಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಆಂಧ್ರ ಪ್ರದೇಶ ಸರ್ಕಾರವನ್ನು ಶ್ಲಾಘಿಸಿದ್ದಾರೆ.

ಕೊರೊನಾ ವೈರಸ್ ಬಿಕ್ಕಟ್ಟು ಎದುರಿಸುವಲ್ಲಿ ಆಂಧ್ರ ಪ್ರದೇಶ ಸರ್ಕಾರ ಒಳ್ಳೆಯ ಕೆಲಸ ಮಾಡ್ತಿದೆ, ನಮ್ಮ ಸರ್ಕಾರ ಜಗನ್ ಮೋಹನ್ ರೆಡ್ಡಿ ಸರ್ಕಾರವನ್ನು ನೋಡಿ ಕಲಿಯಬೇಕಿದೆ ಎಂದು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಸಂದೇಶ ರವಾನಿಸಿದ್ದಾರೆ. ಮುಂದೆ ಓದಿ....

ವೈದ್ಯಕೀಯ ಸಾಮಾಗ್ರಿ ಖರೀದಿಯಲ್ಲಿ ಸರ್ಕಾರದಿಂದ 2,200 ಕೋಟಿ ಭ್ರಷ್ಟಾಚಾರ

ಆಂಧ್ರ ಸರ್ಕಾರದ ನಡೆ ಮೆಚ್ಚಿದ ಸಿದ್ದರಾಮಯ್ಯ

ಆಂಧ್ರ ಸರ್ಕಾರದ ನಡೆ ಮೆಚ್ಚಿದ ಸಿದ್ದರಾಮಯ್ಯ

ಕೊರೊನಾ ವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಸೂಕ್ತ ಸಮಯಕ್ಕೆ ಆಂಬುಲೆನ್ಸ್ ಸಿಗದೆ ಸಮಸ್ಯೆಗಳು ಎದುರಾಗಿರುವ ಘಟನೆಗಳು ಆಂಧ್ರಪ್ರದೇಶದಲ್ಲೂ ವರದಿಯಾಗಿವೆ. ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿರುವ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಇತ್ತೀಚಿಗಷ್ಟೆ 1088ಕ್ಕೂ ಅಧಿಕ ಆಂಬುಲೆನ್ಸ್‌ಗಳನ್ನು ಹೊಸದಾಗಿ ಖರೀದಿಸಿದ ಸಾರ್ವಜನಿಕ ಸೇವೆಗೆ ಒದಗಿಸಿದ್ದಾರೆ. ಇದು ಭಾರಿ ಮೆಚ್ಚುಗೆಗೆ ಕಾರಣವಾಗಿದೆ. ಆಂಧ್ರ ಸರ್ಕಾರದ ಈ ಕ್ರಮಕ್ಕೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಉಳಿದವರನ್ನು ನೋಡಿಯಾದರೂ ಕಲಿತುಕೊಳ್ಳಿ

ಉಳಿದವರನ್ನು ನೋಡಿಯಾದರೂ ಕಲಿತುಕೊಳ್ಳಿ

''ಆಂಧ್ರಪ್ರದೇಶದಲ್ಲಿ ಅಲ್ಟ್ರಾ‌ ಮಾಡರ್ನ್ ವೈದ್ಯಕೀಯ ಸಲಕರಣೆಗಳಿಂದ ಸಜ್ಜುಗೊಂಡಿರುವ 1000 ಕ್ಕೂ ಹೆಚ್ಚು ಅಂಬ್ಯುಲೆನ್ಸ್‌‌ ಸೇವೆಯನ್ನು ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ 200 ಕೋಟಿ ರೂ.ವೆಚ್ಚದಲ್ಲಿ ಪ್ರಾರಂಭಿಸಿದ್ದಾರೆ. ನಮ್ಮಲ್ಲಿ ಅಂಬ್ಯುಲೆನ್ಸ್ ಇಲ್ಲದೆ ಜ‌ನ ಬೀದಿಯಲ್ಲಿ ಸಾಯುತ್ತಿದ್ದಾರೆ. ಉಳಿದವರನ್ನು ನೋಡಿಯಾದರೂ ಕಲಿತುಕೊಳ್ಳಿ'' ಎಂದು ಟ್ವೀಟ್ ಮಾಡಿ ಯಡಿಯೂರಪ್ಪ ಸರ್ಕಾರಕ್ಕೆ ಸಂದೇಶ ರವಾನಿಸಿದ್ದಾರೆ.

ಬಿಜೆಪಿ ಸರ್ಕಾರ ಜೀವಂತವಾಗಿದೆಯೇ? ಸಿದ್ದರಾಮಯ್ಯ ಟೀಕಾ ಪ್ರಹಾರ

ಧನ್ಯವಾದ ಹೇಳಿದ ಆಂಧ್ರ ಕಾರ್ಯದರ್ಶಿ

ಕೊರೊನಾ ಬಿಕ್ಕಟ್ಟಿನಲ್ಲಿ ಆಂಧ್ರ ಪ್ರದೇಶ ಸರ್ಕಾರ ಕೈಗೊಂಡಿರುವ ಕ್ರಮ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿರುವ ಟ್ವೀಟ್ ಗೆ ಆಂಧ್ರ ಸರ್ಕಾರದ ಕಾರ್ಯದರ್ಶಿ, ಮುಖ್ಯ ಸಲಹೆಗಾರ ಎಸ್ ರಾಜೀವ್ ಕೃಷ್ಣ ಧನ್ಯವಾದ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಆಂಬುಲೆನ್ಸ್ ಸಮಸ್ಯೆ

ಕರ್ನಾಟಕದಲ್ಲಿ ಆಂಬುಲೆನ್ಸ್ ಸಮಸ್ಯೆ

ಹಾಗ್ನೋಡಿದ್ರೆ, ಕರ್ನಾಟಕದಲ್ಲಿ ಆಂಬುಲೆನ್ಸ್ ಸಮಸ್ಯೆ ಭಾರಿ ದೊಡ್ಡ ಮಟ್ಟದಲ್ಲಿದೆ. ಬೆಂಗಳೂರು ಅಂತಹ ದೊಡ್ಡ ನಗರದಲ್ಲೇ ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಸಿಗುತ್ತಿಲ್ಲ. ಸೂಕ್ತ ಸಮಯಕ್ಕೆ ಆಂಬುಲೆನ್ಸ್ ಸಿಗದೆ ಕೆಲವರು ಮೃತಪಟ್ಟಿರುವ ಘಟನೆಗೂ ನಡೆದಿದೆ. ಇಂತಹ ಘಟನೆಗಳು ಆದ ಬಳಿಕ ಪ್ರತಿ ವಾರ್ಡ್‌ಗೂ ಎರಡು ಆಂಬುಲೆನ್ಸ್ ಮೀಸಲಿಡಲಾಗುತ್ತೆ ಎಂದು ರಾಜ್ಯ ಸರ್ಕಾರ ಘೋಷಿಸಿತ್ತು.

ಆಂಧ್ರದಲ್ಲಿ ಎಷ್ಟು ಕೇಸ್ ಇದೆ?

ಆಂಧ್ರದಲ್ಲಿ ಎಷ್ಟು ಕೇಸ್ ಇದೆ?

ಆಂಧ್ರ ಪ್ರದೇಶದಲ್ಲಿ ನಿನ್ನೆ 998 ಜನರಿಗೆ ಕೊರೊನಾ ಅಂಟಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 18,697ಕ್ಕೆ ಏರಿಕೆಯಾಗಿದೆ. ಅದರಲ್ಲಿ 10,043 ಕೇಸ್‌ಗಳು ಸಕ್ರಿಯವಾಗಿದ್ದು, 8422 ಮಂದಿ ಸೋಂಕಿನಿಂದ ಗುಣುಮುಖರಾಗಿದ್ದಾರೆ. ಈವರೆಗೂ 232 ಮಂದಿಗೆ ಮೃತಪಟ್ಟಿರುವುದಾಗಿ ವರದಿಯಾಗಿದೆ.

English summary
Karnataka Congress leader Siddaramaiah Praises andhra pradesh jagan mohan reddy govt For COVID 19 management.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more