ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭ್ರಷ್ಟಾಚಾರ: ಮುಖಾಮುಖಿ ಚರ್ಚೆಗೆ ಮೋದಿಗೆ ಸಿದ್ದರಾಮಯ್ಯ ಪಂಥಾಹ್ವಾನ

|
Google Oneindia Kannada News

ಬೆಂಗಳೂರು, ಫೆಬ್ರವರಿ 06 : ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರಿಗೆ ಭ್ರಷ್ಟಾಚಾರ ಕುರಿತಂತೆ ಮುಖಾಮುಖಿ ಚರ್ಚೆಗೆ ಬರುವಂತೆ ಪಂಥಾಹ್ವಾನ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನಗರಕ್ಕೆ ಬಂದು ಭಾಷಣ ಮಾಡಿ ಹೋದ ನಂತರ ಶುರುವಾದ ಬಿಜೆಪಿ ಮತ್ತು ಕಾಂಗ್ರೆಸ್​ ನಾಯಕರ ಟ್ವಿಟರ್​ ಕೆಸರೆರಚಾಟ ಮುಂದುವರೆದಿದೆ. ಸಿಎಂ ಸಿದ್ದರಾಮಯ್ಯ ಟ್ವಿಟ್ಟರ್​ ಮೂಲಕ ಪ್ರಧಾನಿಗೆ ನೇರ ಸವಾಲು ಹಾಕಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತು ಆರಂಭಿಸಿರುವುದು ನನಗೆ ಸಂತಸ ತಂದಿದೆ. ಈ ಕುರಿತು ಚಚಿರ್ಸಲು ಅವರನ್ನು ಆಹ್ವಾನಿಸುತ್ತೇನೆ ಎಂದಿದ್ದಾರೆ.

Siddaramaiah openly invites Modi to discuss about corruption

ಮೊದಲು ಲೋಕ್​ಪಾಲ್ ನೇಮಿಸಿ, ನ್ಯಾಯಧೀಶ ಲೋಯಾ ಸಾವಿರ ಪ್ರಕರಣ ತನಿಖೆ ನಡೆಸಿ. ಅಮಿತ್ ಷಾ ಮಗ ಜಾಯ್​ ಷಾ ಕಂಪನಿಯ ವಿರುದ್ಧದ ಅಕ್ರಮ ಆರೋಪ ತನಿಖೆ ಆರಂಭಿಸಿ. ಕ್ರಿಮಿನಲ್ ಹಿನ್ನೆಲೆ ಇಲ್ಲದ ವ್ಯಕ್ತಿಯನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಿ ಎಂದು ಸಿದ್ದರಾಮಯ್ಯ ಪ್ರಧಾನಿಗೆ ಸವಾಲೆಸೆದಿದ್ದಾರೆ.

English summary
Chief minister Siddaramaiah has tweeted prime minister Narendra modi to open discussion on corruption.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X