ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಪನಗದೀಕರಣದ ನಿಗೂಢ ಸತ್ಯದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ನವೆಂಬರ್ 08: "ಅಪನಗದೀಕರಣದ ನಂತರ ಅರ್ಥವಾಗದ ಒಂದು ನಿಗೂಢ ಸತ್ಯವೆಂದರೆ ಬಿಜೆಪಿಯವರು ನೋಟು ರದ್ದತಿಯ ನಂತರವೂ ಆಪರೇಷನ್ ಕಮಲಕ್ಕೆ ಎಲ್ಲಿಂದ ಹಣ ತರುತ್ತಿದ್ದರು? ಎಂಬುದು" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

Recommended Video

Siddaramaiah is curse to Congress Party, says Janarhan Poojari

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನವೆಂಬರ್ 08, 2016 ರಂದು 1000, 500 ರೂ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿ ಮಹತ್ವದ ಅದೇಶ ಹೊರಡಿಸಿತ್ತು.

ಸತ್ಯವಾಗ್ಲೂ ಹೌದು, 2000 ನೋಟು ಪ್ರಿಂಟ್ ಆಗ್ತಿಲ್ಲ... ಆತಂಕ ಹುಟ್ಟಿಸಿದ ಸರ್ಕಾರದ ನಡೆಸತ್ಯವಾಗ್ಲೂ ಹೌದು, 2000 ನೋಟು ಪ್ರಿಂಟ್ ಆಗ್ತಿಲ್ಲ... ಆತಂಕ ಹುಟ್ಟಿಸಿದ ಸರ್ಕಾರದ ನಡೆ

ಈ ಬೆಳವಣಿಗೆ ನಡೆದು ಇಂದಿಗೆ ಸರಿಯಾಗಿ ಮೂರು ವರ್ಷಗಳಾಗಿದ್ದು,"#DeMonetisationDisaster" ಎಂಬ ಹ್ಯಾಶ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿದೆ. ಈ ಕುರಿತು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರೂ ಸಾಲು ಸಾಲು ಟ್ವೀಟ್ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಅಪನಗದೀಕರಣ ನಿಗೂಢ

ಅಪನಗದೀಕರಣ ನಿಗೂಢ

"ಅಪನಗದೀಕರಣದ ನಂತರ ಅರ್ಥವಾಗದ ಒಂದು ನಿಗೂಢ ಸತ್ಯವೆಂದರೆ ಬಿಜೆಪಿಯವರು ನೋಟು ರದ್ದತಿಯ ನಂತರವೂ ಆಪರೇಷನ್ ಕಮಲಕ್ಕೆ ಎಲ್ಲಿಂದ ಹಣ ತರುತ್ತಿದ್ದರು? ಎಂಬುದು. 2016 ನವೆಂಬರ್ 08 ರ ನಂತರೂ ಬಿಜೆಪಿ ಬಹುಪಾಲು ಎಲ್ಲಾ ರಾಜ್ಯಗಳಲ್ಲೂ ಆಪರೇಷನ್ ಕಮಲ ನಡೆಸಿತು. ಹಣವೇ ಇಲ್ಲದೆ ಅದು ಹೇಗೆ ಸಾಧ್ಯ? ಅಪನಗದೀಕರಣದ ವೈಫಲ್ಯ ಕಂಡಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ" - ಸಿದ್ದರಾಮಯ್ಯ

ಆರ್ಥಿಕ ಕುಸಿತ

ಆರ್ಥಿಕ ಕುಸಿತ

ನೋಟು ರದ್ದತಿಯ ನಂತರ ಕುಂಟುತ್ತಾ ಸಾಗುತ್ತಿದ್ದ ಸೇವಾ ವಲಯದ ಪ್ರಗತಿ, ಪ್ರಸಕ್ತ ಹಣಕಾಸು ವರ್ಷದ 3ನೇ ತ್ರೈಮಾಸಿಕ ಆರಂಭದಲ್ಲಿಯೇ ತೀವ್ರ ಕುಸಿತದ ಹಾದಿ ಹಿಡಿದಿದೆ. ನಿರಂತರ ಏರಿಕೆ ಕಾಣುತ್ತಿರುವ ಕಚ್ಚಾ ಸಾಮಾಗ್ರಿಗಳ ಬೆಲೆ ಸೇರಿದಂತೆ ನೋಟು ರದ್ದತಿಯ ದುಷ್ಪರಿಣಾಮಗಳು ಇದಕ್ಕೆ ಮುಖ್ಯ ಕಾರಣ.

ನೋಟು ಮುದ್ರಣ ಹೆಚ್ಚಳ: ಕ್ಯಾಶ್‌ಲೆಸ್ ಇಂಡಿಯಾ ಕಥೆಯೇನು?ನೋಟು ಮುದ್ರಣ ಹೆಚ್ಚಳ: ಕ್ಯಾಶ್‌ಲೆಸ್ ಇಂಡಿಯಾ ಕಥೆಯೇನು?

ಭಯೋತ್ಪಾದನೆ ನಿಯಂತ್ರಣವೂ ಆಗಿಲ್ಲ!

ಭಯೋತ್ಪಾದನೆ ನಿಯಂತ್ರಣವೂ ಆಗಿಲ್ಲ!

ನೋಟು ನಿಷೇಧದ ಪ್ರಮುಖ ಉದ್ದೇಶಗಳಲ್ಲಿ ಭಯೋತ್ಪಾದನೆ ನಿಯಂತ್ರಣ ಒಂದು ಎಂದು ಸರ್ಕಾರ ಹೇಳಿತ್ತು. ಆದರೆ ಯು.ಪಿ.ಎ ಅವಧಿಗೆ ಹೋಲಿಕೆ ಮಾಡಿದರೆ ಎನ್‌ಡಿಎ ಅವಧಿಯಲ್ಲಿ ಭಯೋತ್ಪಾದಕ ದಾಳಿ ಪ್ರಮಾಣ ಶೇ.176 ಹೆಚ್ಚಿದೆ. ಮೋದಿಯವರ ಅವಧಿಯಲ್ಲಿ ಈವರೆಗೆ 1706 ಭಯೋತ್ಪಾದಕ ದಾಳಿಗಳಾಗಿವೆ. ಹಾಗಾದರೆ ನೋಟು ನಿಷೇಧದಿಂದಾದ ಉಪಯೋಗ?

ಅನಾಹುತಗಳಿಗೆ ಹೊಣೆ ಯಾರು?

ಅನಾಹುತಗಳಿಗೆ ಹೊಣೆ ಯಾರು?

ಸರ್ಕಾರದ ಆರ್ಥಿಕ ನೀತಿಗಳ ವೈಫಲ್ಯಕ್ಕೆ ಅಧಿಕಾರಿಗಳನ್ನು ಹೊಣೆ ಮಾಡುವ ನರೇಂದ್ರ ಮೋದಿಯವರು, ಬಾಲಾಕೋಟ್ ದಾಳಿಯ ಶ್ರೇಯವನ್ನು ಮಾತ್ರ ತಮ್ಮದೇ ಸಾಧನೆ ಎಂಬಂತೆ ಬಿಂಬಿಸಿಕೊಂಡಿದ್ದು ವಿಪರ್ಯಾಸ. ರಿಸರ್ವ್ ಬ್ಯಾಂಕಿನ ಅನುಮತಿಯಿಲ್ಲದೆ ಸರ್ಕಾರ ನೋಟು ನಿಷೇಧಿಸಿದ್ದರಿಂದ ಆದ ಅನಾಹುತಗಳಿಗೆ ಹೊಣೆ ಯಾರು?

ನೋಟು ರದ್ದತಿ ಎಂಬ ಭಯೋತ್ಪಾದನಾ ದಾಳಿ: ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿನೋಟು ರದ್ದತಿ ಎಂಬ ಭಯೋತ್ಪಾದನಾ ದಾಳಿ: ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿ

ಪೂರ್ವ ತಯಾರಿಯಿಲ್ಲದ ನೋಟು ನಿಷೇಧ

ಪೂರ್ವ ತಯಾರಿಯಿಲ್ಲದ ನೋಟು ನಿಷೇಧ

ಸರಿಯಾದ ಪೂರ್ವ ತಯಾರಿಯಿಲ್ಲದ ನೋಟು ನಿಷೇಧದಿಂದಾಗಿ ಇದುವರೆಗೂ ದೇಶದಲ್ಲಿ 50 ಲಕ್ಷಕ್ಕೂ ಅಧಿಕ‌ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ದೇಶದ ನಿರುದ್ಯೋಗ ಪ್ರಮಾಣ ಕಳೆದ 45 ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ. ಉದ್ಯೋಗ ಸೃಷ್ಟಿಸಬೇಕಿದ್ದ ಸರ್ಕಾರ ಯುವ ಜನರಿಗೆ ಪಕೋಡ ಮಾರುವಂತೆ ಸಲಹೆ ನೀಡಿರುವುದು ದೊಡ್ಡ ದುರಂತ.

ಬದುಕು ಕಸಿದುಕೊಂಡ ದಿನ

ಬದುಕು ಕಸಿದುಕೊಂಡ ದಿನ

ಈ ದಿನವನ್ನು ನೋಟು ನಿಷೇಧಗೊಂಡ ದಿನ ಎನ್ನುವುದಕ್ಕಿಂತ, ದೇಶದ ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕು ಕಸಿದುಕೊಂಡ ದಿನವೆನ್ನುವುದೇ ಸೂಕ್ತ. ಅಂದು ಬ್ಯಾಂಕುಗಳ ಮುಂದಿನ ಸರತಿ ಸಾಲಿನಲ್ಲಿ ಆರಂಭಗೊಂಡ ಸಾವಿನ ಸರಪಳಿ ಇಂದಿಗೂ ಜನರ ವ್ಯಾಪಾರ, ಉದ್ಯೋಗವನ್ನು ಕಸಿದುಕೊಳ್ಳುತ್ತಾ ಬಡಜನರ ಬಲಿ ಪಡೆಯುತ್ತಲೇ ಇದೆ.

English summary
Former Chief Minsiter Siddaramaiah On Twitter Talks About Demonetisation,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X