ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಸಕರು ಬೆಳಗಾವಿಗೆ, ಸಿದ್ದರಾಮಯ್ಯ ಮಲೇಷ್ಯಾಕ್ಕೆ, ಏನಿದರ ಒಳಮರ್ಮ?

|
Google Oneindia Kannada News

Recommended Video

ಶಾಸಕರು ಬೆಳಗಾವಿಗೆ, ಸಿದ್ದರಾಮಯ್ಯ ಮಲೇಷ್ಯಾಕ್ಕೆ, ಏನಿದರ ಒಳಮರ್ಮ? | Oneindia Kannada

ಬೆಂಗಳೂರು, ಡಿಸೆಂಬರ್ 8: ಬೆಳಗಾವಿ ಅಧಿವೇಶನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚೆಕ್ಕರ್ ಹೊಡೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಸಿದ್ದರಾಮಯ್ಯ ಬೆಳಗಾವಿ ಅಧಿವೇಶನ ಬಿಟ್ಟು ವಿದೇಶ ಪ್ರವಾಸಕ್ಕೆ ತೆರಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸಂಪುಟ ವಿಸ್ತರಣೆ ವಿಳಂಬ ಆಗುವುದಿಲ್ಲ: ದೇವೇಗೌಡರ ಭರವಸೆ ಸಂಪುಟ ವಿಸ್ತರಣೆ ವಿಳಂಬ ಆಗುವುದಿಲ್ಲ: ದೇವೇಗೌಡರ ಭರವಸೆ

ಬೆಳಗಾವಿ ಅಧಿವೇಶನದಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಸಂಕಷ್ಟ ಎದುರಾಗಬಹುದು ಎಂಬ ಆತಂಕದ ನಡುವೆಯೇ, ಸಿದ್ದರಾಮಯ್ಯ ಮಲೇಷ್ಯಾಕ್ಕೆ ಹೋಗಲು ಸಿದ್ಧತೆ ನಡೆಸಿದ್ದಾರೆ.ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಜವಾಬ್ದಾರಿಯೂ ಇದೆ.

ಸಂಪುಟ ವಿಸ್ತರಣೆ: ಸಿದ್ದರಾಮಯ್ಯ-ಪರಮೇಶ್ವರ್‌ ನಡುವೆ ಮಹತ್ವದ ಮಾತುಕತೆ ಸಂಪುಟ ವಿಸ್ತರಣೆ: ಸಿದ್ದರಾಮಯ್ಯ-ಪರಮೇಶ್ವರ್‌ ನಡುವೆ ಮಹತ್ವದ ಮಾತುಕತೆ

ಹಾಗಾಗಿ ಅಧಿವೇಶನದಲ್ಲಿ ಅವರ ಉಪಸ್ಥಿತಿಗೆ ಹೆಚ್ಚಿನ ಮಹತ್ವವಿರುತ್ತದೆ. ಇದಲ್ಲದೆ ಅತೃಪ್ತ ಶಾಸಕರು ಬಂಡಾಯದ ಬಾವುಟ ಹಾರಿಸಲು ಮುಂದಾದ ಎಲ್ಲ ಸಂದರ್ಭದಲ್ಲೂ ಬಿಕ್ಕಟ್ಟು ಶಮನಕ್ಕೆ ಸಿದ್ದರಾಮಯ್ಯ ಅವರನ್ನೇ ಹೈಕಮಾಂಡ್ ಆಶ್ರಯಿಸಿತ್ತು.

Siddaramaiah likely to skip Belagavi session

ಅಧಿವೇಶನಕ್ಕೂ ಮುನ್ನವೇ ಬೆಂಗಳೂರಿನಲ್ಲಿ ಡಿಸೆಂಬರ್ 8ರಂದು ಕಾಂಗ್ರೆಸ್ ಶಾಸಕಾಂಗ ಸಭೆಯನ್ನು ನಡೆಸಲು ಉದ್ದೇಶಿಸಿತ್ತು ಆದರೆ ಅದನ್ನು ಮುಂದೂಡಲಾಗಿದೆ. ಡಿ.12 ಇಲ್ಲವೇ 13ರಂದು ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಈಗ ವಿದೇಶ ಪ್ರವಾಸದಿಂದ ಮರಳಿದ ಬಳಿಕ ಡಿಸೆಂಬರ್ 18ರಂದು ಸಿಎಲ್ ಪಿ ಸಭೆ ನಡೆಸಲಿದೆ.

ಆಷಾಢ ಮಾಸ ಕಳೆಯುವವರೆಗೂ ಸಂಪುಟ ವಿಸ್ತರಣೆ ಇಲ್ಲ ಆಷಾಢ ಮಾಸ ಕಳೆಯುವವರೆಗೂ ಸಂಪುಟ ವಿಸ್ತರಣೆ ಇಲ್ಲ

ಚಳಿಗಾಲದ ಅಧಿವೇಶನದಲ್ಲಿ ದೋಸ್ತಿ ಸರ್ಕಾರವನ್ನು ಖೆಡ್ಡಾಕ್ಕೆ ಬೀಳಿಸಲು ಪ್ರತಿಪಕ್ಷ ಬಿಜೆಪಿ ಕಾಯ್ದು ಕುಳಿತಿದೆ. ಜೊತೆಗೆ ಬೆಳಗಾವಿ ಅಧಿವೇಶನವೆಂದರೆ ಸಾಲು ಸಾಲು ಪ್ರತಿಭಟನೆಗಳಿರುತ್ತವೆ.

English summary
CLP leader and chairman of coordination commitee Siddaramaiah likely to skip Belagavi session which will be resumed from December 10 as he is going to abraod to attend a marriage function.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X