ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದೇಶದಲ್ಲಿರುವ ಕನ್ನಡಿಗರೊಂದಿಗೆ ಮಾತುಕತೆ ನಡೆಸಿದ ಸಿದ್ಧರಾಮಯ್ಯ

|
Google Oneindia Kannada News

ಬೆಂಗಳೂರು, ಮೇ 29: ವಿದೇಶದಲ್ಲಿರುವ ಕನ್ನಡಿಗರ ಜೊತೆಗೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಮಾತುಕತೆ ನಡೆಸಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಅವರ ಜೊತೆಗೆ ಕೊರೊನಾ ವೈರಸ್‌ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದಾರೆ.

Recommended Video

ನರಕಯಾತನೆ ಅನುಭವಿಸ್ತಾಯಿದಾರೆ ಕ್ವಾರಂಟೈನ್ ನಿವಾಸಿಗಳು | Oneindia Kannada

ಲಾಕ್‌ಡೌನ್‌ನಲ್ಲಿ ಸಮಯದಲ್ಲಿ ಬೇರೆ ಬೇರೆ ದೇಶದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಅನೇಕ ಕನ್ನಡಿಗರು ವಾಪಸ್ ಬಂದಿದ್ದಾರೆ. ಅಲ್ಲಿಯೇ ನೆಲೆಸಿದ್ದ ಕೆಲವರು ತಾಯಿ ನಾಡಿಗೆ ಮರಳಿದ್ದಾರೆ. ಆದರೆ, ಕೆಲವರು ಕೊರೊನಾ ಸಮಯದಲ್ಲಿ ಭಾರತಕ್ಕೆ ಬರುವುದು ಸರಿಯಲ್ಲ ಎಂದು ಅಲ್ಲಿಯೇ ಇದ್ದಾರೆ.

ಪರಿವಾರ, ತಳವಾರ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ: ಸಿದ್ಧರಾಮಯ್ಯಪರಿವಾರ, ತಳವಾರ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ: ಸಿದ್ಧರಾಮಯ್ಯ

ಸಿದ್ಧರಾಮಯ್ಯ ಇಂದು ಬೆಲ್ಜಿಯಂ, ನೆದರ್ಲ್ಯಾಂಡ್ಸ್, ಫಿನ್‌ಲ್ಯಾಂಡ್, ಅಮೆರಿಕ ಹಾಗೂ ದುಬೈನಲ್ಲಿ ನೆಲೆಸಿರುವ ಕನ್ನಡಿಗರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ್ದರು. ಅವರವರ ದೇಶದಲ್ಲಿನ ಸದ್ಯದ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರೆ.

Siddaramaiah Participated In The Video Conference With Overseas Kannadigas

ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡುವ ವೇಳೆ, ಅಮೇರಿಕಾದ ಕನ್ನಡಿಗರೊಬ್ಬರು ಅಲ್ಲಿನ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು. ಸಿದ್ಧರಾಮಯ್ಯ ಅಲ್ಲಿ ಕೊರೊನಾ ಕೇಸ್‌ಗಳು ಹೆಚ್ಚಾಗಲು ಕಾರಣ ಏನು ಎಂದಾಗ, ಕೆಲವು ಕಾರಣಗಳನ್ನು ವಿವರಿಸಿದರು.

ಅಮೇರಿಕಾದಲ್ಲಿ ಜನರು ಲಾಕ್‌ಡೌನ್‌ ಅನ್ನು ಸರಿಯಾಗಿ ಪಾಲನೆ ಮಾಡಲಿಲ್ಲ. ಭಾರತದಲ್ಲಿ ಪೊಲೀಸರು ರಸ್ತೆಗೆ ಬಂದು, ಜನರಿಗೆ ಲಾಠಿ ಏಟು ನೀಡಿ, ಬುದ್ದಿ ಹೇಳಿದರು. ಆದರೆ, ಇಲ್ಲಿ ಆ ರೀತಿ ಮಾಡಲಿಲ್ಲ. ಇದನ್ನು ಅಮೇರಿಕದ ಜನ ದುರುಪಯೋಗ ಪಡೆಸಿಕೊಂಡು, ಬೇಕಾದ ರೀತಿ ಓಡಾಡಿದರು ಎಂದು ಅಮೇರಿಕದ ಕನ್ನಡಿಗರೊಬ್ಬರು ತಿಳಿಸಿದರು.

ವಿದೇಶದಲ್ಲಿರುವವರು ದೇಶಕ್ಕೆ ಮರಳಲು ವಿಮಾನದ ಕೊರತೆ ಆಗದಂತೆ ಯಡಿಯೂರಪ್ಪಗೆ ಮನವಿ ಮಾಡಿದ್ದಾರೆ. ವಿಶ್ವದಲ್ಲಿ 5.8 ಮಿಲಿಯನ್ ಜನರಿಗೆ ಕೊರೊನಾ ಸೋಂಕು ತಗುಲಿದೆ. 2.4 ಮಿಲಿಯನ್ ಜನರು ಗುಣಮುಖರಾಗಿದ್ದಾರೆ. 3,60,000 ಮಂದಿ ಮೃತರಾಗಿದ್ದಾರೆ.

English summary
Opposition party leader Siddaramaiah participated in the video conference with overseas kannadigas in Belgium, Netherlands, USA & Dubai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X