• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಖ್ಯಮಂತ್ರಿ ಯಡಿಯೂರಪ್ಪಗೆ ಮತ್ತೆ ಸಿದ್ದರಾಮಯ್ಯ ಪತ್ರ!

|

ಬೆಂಗಳೂರು, ಸೆ. 09: ವರ್ಷಕ್ಕೆ ಕನಿಷ್ಠ 60 ದಿನಗಳ ಕಾಲ ವಿಧಾನ ಮಂಡಲ ಅಧಿವೇಶನ ನಡೆಸಬೇಕು ಎಂಬ ನಿಯಮವಿದೆ. ಆದರೆ ಹಲವು ಕಾರಣಗಳಿಂದ ಅಷ್ಟು ದಿನಗಳ ಕಲಾಪ ನಡೆಯುವುದು ಕಷ್ಟಸಾಧ್ಯ. ಹೆಚ್ಚು ಕಾಲ ಅಧಿವೇಶನ ನಡೆಯುವುದರಿಂದ ನಾಡಿದ ಜ್ವಲಂತ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಹಾಗೆಯೆ ವಿಧಾನ ಮಂಡಲ ಅಧಿವೇಶನ ನಡೆಯುತ್ತಿರುವಾಗ ಆಡಳಿತ ಯಂತ್ರ ಕೂಡ ಸಕ್ರಿಯವಾಗಿ ಕೆಲಸ ಮಾಡುತ್ತಿರುತ್ತದೆ. ಹೀಗಾಗಿಯೇ 60 ದಿನಗಳ ಕಲಾಪ ನಡೆಯಬೇಕು ಎಂದು ವಿರೋಧ ಪಕ್ಷಗಳ ಒತ್ತಾಯ ಮಾಡುತ್ತಲೆ ಇರುತ್ತವೆ.

ಈ ಅಧಿವೇಶನ ಸಮಯದಲ್ಲಂತೂ ಹಲವಾರು ಜ್ವಲಂತ ಸಮಸ್ಯೆಗಳು ರಾಜ್ಯದ ಜನರನ್ನು ಕಾಡುತ್ತಿವೆ. ಕೋವಿಡ್, ಡ್ರಗ್ಸ್, ಪ್ರವಾಹ, ಲಾಕ್‌ಡೌನ್ ಹೀಗೆ ಅನೇಕ ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಹೀಗಾಗಿ ಮಹತ್ವದ ಹಲವಾರು ವಿಚಾರಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಯುವ ಅಗತ್ಯವಿರುವುದರಿಂದ ಇದೇ ತಿಂಗಳ 21ರಿಂದ ನಡೆಸಲು ಉದ್ದೇಶಿಸಿರುವ ವಿಧಾನಸಭೆ ಕಲಾಪದ ಅವಧಿಯನ್ನು ಅಕ್ಟೋಬರ್ 15ರವರೆಗೆ ವಿಸ್ತರಿಸುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸ್ಪೀಕರ್ ವಿಶ್ವೇಶ್ವರ ಹಗಡೆ ಕಾಗೇರಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಕಲಾಪ ವಿಸ್ತರಿಸಿ

ಕಲಾಪ ವಿಸ್ತರಿಸಿ

ಅಧಿವೇಶನದ ಅವಧಿಯನ್ನು ಸೆಪ್ಟೆಂಬರ್ 21 ರಿಂದ 30 ರವರೆಗೆ ವಿಧಾನ ಮಂಡಲ ಅಧಿವೇಶನ ನಡೆಸಲು ಪ್ರಕಟಣೆ ಹೊರಡಿಸಲಾಗಿದೆ. ಅದರಂತೆ ಸೆ. 21, 22, 23, 24, 25, 28, 29 ಮತ್ತು 30 ರವರೆಗೆ ಅಧಿವೇಶನವನ್ನು ನಡೆಸಲು ಉದ್ದೇಶಿಸಲಾಗಿದೆ. ಸದರಿ ಅಧಿವೇಶನದಲ್ಲಿ ಸುಮಾರು 20 ಕ್ಕಿಂತ ಹೆಚ್ಚು ಸುಗ್ರಿವಾಜ್ಞೆಗಳನ್ನು ಒಳಗೊಂಡಂತೆ 35ಕ್ಕಿಂತ ಹೆಚ್ಚು ಮಸೂದೆಗಳನ್ನು ಮಂಡಿಸಲಾಗುತ್ತಿದೆ.

ಹೀಗಾಗಿ ವಿಧೇಯಕಗಳ ಮೇಲೆ ಚರ್ಚೆ ಸೇರಿದಂತೆ ಉಳಿದ ಚರ್ಚೆಗಳಿಗೆ ಹೆಚ್ಚಿನ ಕಾಲಾವಕಾಶ ಬೇಕು ಎಂದು ಸಿದ್ದರಾಮಯ್ಯ ಅವರು ಸ್ಪೀಕರ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.

ಕೊರೊನಾದಿಂದ ಸಾವು

ಕೊರೊನಾದಿಂದ ಸಾವು

ಕರ್ನಾಟಕ ರಾಜ್ಯದ ಜನರು ಹಿಂದೆಂದೂ ಕಂಡರಿಯದ ರೀತಿಯಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪದೇ ಪದೇ ಪ್ರವಾಹಗಳು ಬಂದಿವೆ. ಕಳೆದ ಮಾರ್ಚ್‌ನಿಂದ ಕೋವಿಡ್-19 ಸಾಂಕ್ರಾಮಿಕ ಸೋಂಕು ಮಾರಣಾಂತಿಕವಾಗಿ ವ್ಯಾಪಿಸಿದೆ. ರಾಜ್ಯದ ಜನರ ಬದುಕನ್ನು ಕೋವಿಡ್-19 ಹೈರಾಣಾಗಿಸಿದೆ. ಸುಮಾರು 6,500 ಕ್ಕಿಂತ ಹೆಚ್ಚು ಜನ ಈ ಸೋಂಕಿನಿಂದಾಗಿ ಮೃತಟ್ಟಿದ್ದಾರೆ. ಪದೇ ಪದೇ ಕಾನೂನು ಸುವ್ಯವಸ್ಥೆಯ ಸಮಸ್ಯೆಗಳು ಉಂಟಾಗುತ್ತಿವೆ, ಜೊತೆಯಲ್ಲಿ ಡ್ರಗ್ಸ್ ನಂಥ ಅಪಾಯಕಾರಿ ಚಟುವಟಿಕೆಗಳು ರಾಜ್ಯವನ್ನು ಆವರಿಸಿಕೊಂಡಿವೆ.

ಇವುಗಳ ಕುರಿತು ವಿಸ್ತೃತವಾಗಿ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಸಿದ್ದರಾಮಯ್ಯ ಅವರು ಪತ್ರದಲ್ಲಿ ವಿವರಿಸಿದ್ದಾರೆ.

ನೆಪ ಮಾತ್ರಕ್ಕೆ ಅಧಿವೇಶನ!

ನೆಪ ಮಾತ್ರಕ್ಕೆ ಅಧಿವೇಶನ!

ಇಂತಹ ಸನ್ನಿವೇಶದಲ್ಲಿ ಅಧಿವೇಶನವನ್ನು ನಡೆಸಲಾಗುತ್ತಿದೆ. ಆದರೆ ಅಧಿವೇಶನದ ಸಮಯ ಮಾತ್ರ ಯಾವುದಕ್ಕೂ ಸಾಕಾಗುವುದಿಲ್ಲ. ಜನರ ಮೇಲೆ ಕಾಳಜಿ ಇಲ್ಲದೆ ನೆಪ ಮಾತ್ರಕ್ಕೆ ಅಧಿವೇಶನ ನಡೆಸಲು ಉದ್ದೇಶಿಸುವಂತೆ ಕಾಣಿಸುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.

ಹಲವು ಜನ ವಿರೋಧಿಯಾದ ಸುಗ್ರಿವಾಜ್ಞೆಗಳನ್ನು ಚರ್ಚೆಯನ್ನೇ ನಡೆಸದೆ ಅಂಗೀಕಾರ ಪಡೆಯಲು ಯತ್ನಿಸುತ್ತಿರುವುದು ಅತ್ಯಂತ ಜನ ದ್ರೋಹಿಯಾದ, ಬೇಜವಾಬ್ದಾರಿಯುತವಾದ ಮತ್ತು ದುಷ್ಟತನದ ಪರಮಾವಧಿಯಂತೆ ಕಾಣುತ್ತಿದೆ. ಸರ್ಕಾರ ಈ ವಿಚಾರದಲ್ಲಿ ಅತ್ಯಂತ ಅಸಂವಿಧಾನಿಕವಾಗಿ ನಡೆದುಕೊಳ್ಳುತ್ತಿದೆ.

  Amit Malviyaನಾ ಅಧಿಕಾರದಿಂದ ಕೆಳಗಿಳಿಸಿ : Subramanian Swamy | Oneindia Kannada
  60 ದಿನಗಳ 4 ಅಧಿವೇಶನ

  60 ದಿನಗಳ 4 ಅಧಿವೇಶನ

  ಕರ್ನಾಟಕ ರಾಜ್ಯ ವಿಧಾನಮಂಡಲದ ಸರ್ಕಾರಿ ಕಾರ್ಯಕಲಾಪಗಳ ನಿರ್ವಹಣೆ ಅಧಿನಿಯಮ 2005ರ ಸೆಕ್ಷನ್ 3 ರಂತೆ ಕಡ್ಡಾಯವಾಗಿ 60 ದಿನಗಳಿಗೆ ಕಡಿಮೆ ಇಲ್ಲದಂತೆ ಪ್ರತಿ ವರ್ಷ ಅಧಿವೇಶನಗಳನ್ನು ನಡೆಸಬೇಕು ಎಂದಿದೆ. ಸೆಕ್ಷನ್ 4ರ ಪ್ರಕಾರ ವರ್ಷದಲ್ಲಿ ಒಟ್ಟು 4 ಅಧಿವೇಶನವನ್ನು ನಡೆಸಬೇಕು. ಜನವರಿಯಲ್ಲಿ 15, ಮಾರ್ಚ್ ತಿಂಗಳಲ್ಲಿ 20, ಜುಲೈ ತಿಂಗಳಲ್ಲಿ 15 ಮತ್ತು ನವೆಂಬರ್ ತಿಂಗಳಿನಲ್ಲಿ ಕನಿಷ್ಠ 10 ದಿನಗಳಷ್ಟು ಸೇರಿ ಒಟ್ಟು ಕನಿಷ್ಠ 60 ದಿನಗಳಷ್ಟು ಅಧಿವೇಶನವನ್ನು ನಡೆಸಬೇಕಾಗುತ್ತದೆ. ಆದರೆ ಬಿ.ಜೆ.ಪಿ ಆಡಳಿತದ ಸರ್ಕಾರವು ಸಂಸದೀಯ ವ್ಯವಸ್ಥೆಯನ್ನು ನಿರಂತರವಾಗಿ ಹಾಳುಗೆಡವುತ್ತಿದೆ. ಅಧಿವೇಶನಗಳನ್ನು ಕರೆದು ಚರ್ಚೆ ನಡೆಸುವುದನ್ನು ನಾಮಕಾವಸ್ಥೆ ಕೆಲಸವೆಂದು ಭಾವಿಸಿ ವರ್ತಿಸುತ್ತಿದೆ.

  ಕೇವಲ 8 ದಿನಗಳಲ್ಲಿ ಇಷ್ಟೊಂದು ಮಹತ್ವದ ವಿಚಾರಗಳನ್ನು ಚರ್ಚಿಸಲು ಸಾಧ್ಯವಿಲ್ಲ. ಹಾಗಾಗಿ ಈ ಅಧಿವೇಶನವನ್ನು ಕನಿಷ್ಠ 3 ವಾರಗಳ ಕಾಲ ಅಂದರೆ ಅಕ್ಟೋಬರ್ 15 ರವರೆಗೆ ವಿಸ್ತರಿಸಬೇಕೆಂದು ಆಗ್ರಹಿಸುತ್ತೇನೆ.

  English summary
  Leader of the Opposition Siddaramaiah has asked Speaker Vishweshwara Hagde Kageri and Chief Minister B S Yeddyurappa to extend the period of the assembly from October 21 to October 15. He has written letter to B S Yediyurappa and Speaker Vishweshwar Hagde Kageri, Know more about,
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X