ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಟೀಲ್ ಫ್ಲೈಓವರ್ ನಿರ್ಮಾಣಕ್ಕೆ ಮುನ್ನವೇ ಕುಸಿತ, 65 ಕೋಟಿ ಕಥೆ ಏನಾಯ್ತು?

ನಾಗರಿಕರು, ಪರಿಸರವಾದಿಗಳು, ಅನೇಕ ಕಾಂಗ್ರೆಸ್ ಶಾಸಕರಿಗೂ ಬೇಡವಾಗಿದ್ದ ವಿವಾದಿತ ಉಕ್ಕಿನ ಮೇಲ್ಸೇತುವೆ ಯೋಜನೆಯನ್ನು ಸಿದ್ದರಾಮಯ್ಯ ಸರ್ಕಾರ ಗುರುವಾರದಂದು ರದ್ದುಗೊಳಿಸಿದೆ. ಟ್ವಿಟ್ಟರ್ ನಲ್ಲಿ ಬಂದಿರುವ ಪ್ರತಿಕ್ರಿಯೆಗಳ ಸಂಗ್ರಹ ಇಲ್ಲಿದೆ ಓದಿ..

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 02: ನಾಗರಿಕರು, ಪರಿಸರವಾದಿಗಳು, ಅನೇಕ ಕಾಂಗ್ರೆಸ್ ಶಾಸಕರಿಗೂ ಬೇಡವಾಗಿದ್ದ ವಿವಾದಿತ ಉಕ್ಕಿನ ಮೇಲ್ಸೇತುವೆ ಯೋಜನೆಯನ್ನು ಸಿದ್ದರಾಮಯ್ಯ ಸರ್ಕಾರ ಗುರುವಾರದಂದು ರದ್ದುಗೊಳಿಸಿದೆ.

ಸರ್ಕಾರದ ನಿರ್ಧಾರಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿ ಭರ್ಜರಿಯಾಗಿ ಸ್ವಾಗತ ಸಿಕ್ಕಿದೆ. ಜತೆಗೆ ಯೋಜನೆ ನಿಲ್ಲಿಸಲು ಕಾರಣ ಎನ್ನಲಾದ ಕಿಕ್ ಬ್ಯಾಕ್ ಮೊತ್ತದ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದ್ದಾರೆ.[ಬ್ರೇಕಿಂಗ್ ನ್ಯೂಸ್ : ವಿವಾದಿತ ಸ್ಟೀಲ್ ಬ್ರಿಡ್ಜ್ ಯೋಜನೆ ರದ್ದು]

ಯೋಜನೆ ರದ್ದು ಮಾಡಲು ಮುಖ್ಯ ಕಾರಣವೇನು? ಎಂಬ ಅಂಶ ಇನ್ನೂ ನಿಗೂಢವಾಗಿದೆ. ಆದರೆ, ಯೋಜನೆ ರದ್ದಾಗಿರುವ ಸಂಭ್ರಮಾಚರಣೆ ಆರಂಭವಾಗಿದ್ದು, ಬಿಜೆಪಿ, ಎಎಪಿ, ಯುನೈಟೆಡ್ ಬೆಂಗಳೂರು ಸೇರಿದಂತೆ ಪಕ್ಷಗಳು, ಮುಖಂಡರು, ಸರ್ಕಾರೇತರ ಸಂಘಗಳು ಇದು ಸಾಧ್ಯವಾಗಿದ್ದು ನಮ್ಮಿಂದಲೇ ಎಂದು ಬೆನ್ನು ತಟ್ಟಿಕೊಂಡಿವೆ.

ಈ ಜತೆಗೆ ಎಂಎಲ್ಸಿ ಗೋವಿಂದರಾಜು ಅವರ ಡೈರಿಯಲ್ಲಿದ್ದ ಕಪ್ಪ ಕಾಣಿಕೆ ಭಾರ ಹೊರಲಾರದೆ ಕನಸಿನ ಮೇಲ್ಸೇತುವೆ ಕುಸಿಯಿತು ಎಂಬ ಅಂಶ ಹೆಚ್ಚು ಚರ್ಚಿತವಾಗುತ್ತಿದೆ. ಟ್ವಿಟ್ಟರ್ ನಲ್ಲಿ ಬಂದಿರುವ ಪ್ರತಿಕ್ರಿಯೆಗಳ ಸಂಗ್ರಹ ಇಲ್ಲಿದೆ ಓದಿ....

65 ಕೋಟಿ ರು ಕಿಕ್ ಬ್ಯಾಕ್?

65 ಕೋಟಿ ರು ಕಿಕ್ ಬ್ಯಾಕ್?

ಬಹುಕೋಟಿ ಉಕ್ಕಿನ ಮೇಲ್ಸೇತುವೆ ಯೋಜನೆ ರದ್ದು ಮಾಡಲು ಕಾರಣವಾದ ಪ್ರಮುಖ ಅಂಶ ಏನು? ಡೈರಿ ಹಗರಣದಲ್ಲಿ ನಮೂದಾಗಿರುವ 65 ಕೋಟಿ ರು ಕಿಕ್ ಬ್ಯಾಕ್? ಟೆಂಡರ್ ಅಕ್ರಮ, ಪರಿಸರವಾದಿಗಳು, ನಾಗರಿಕರ ಹೋರಾಟವೇ? ಎನ್ ಜಿಒಗಳ ಪ್ರತಿಭಟನೆಯೇ? ಉತ್ತರಕ್ಕಾಗಿ ಓವರ್ ಟು ಕೆಜೆ ಜಾರ್ಜ್ ಹಾಗೂ ಸಿಎಂ ಸಿದ್ದರಾಮಯ್ಯ.

ಮೇಲ್ಸೇತುವೆ ಏಕೆ ಬೇಡ

ಬಸವೇಶ್ವರ ವೃತ್ತದಿಂದ ಹೆಬ್ಬಾಳ ತನಕದ ಉಕ್ಕಿನ ಮೇಲ್ಸೇತುವೆ ಏಕೆ ಬೇಡ ಎಂಬುದರ ಬಗ್ಗೆ ಸಾಕಷ್ಟು ಚರ್ಚೆ, ಅಂಕಿ ಅಂಶಗಳು, ವಿನೂತನ ಪ್ರತಿಭಟನೆಗಳು, ಕಿರುಚಿತ್ರಗಳನ್ನು ಸಾರ್ವಜನಿಕರ ಮುಂದಿಡಲಾಯಿತು.

ಗೆಲುವು ನಮ್ಮದೇ ಎಂದ ಎನ್ಜಿಒಗಳು

ಇದು ಯುನೈಟೆಡ್ ಬೆಂಗಳೂರು ಸಂಸ್ಥೆಯ ಹೋರಾಟಕ್ಕೆ ಸಂದ ಜಯ ಎಂದು ಟ್ವೀಟ್

ಯಡಿಯೂರಪ್ಪ ಅವರ ಸಾಧನೆ

ಸ್ಟೀಲ್ ಬ್ರಿಡ್ಜ್ ಬಗ್ಗೆ ಯಾರು ಎಷ್ಟೇ ಹೋರಾಟ ನಡೆಸಿದ್ದರೂ, ಡೈರಿಯಲ್ಲಿ ಸ್ಟೀಲ್ ಬ್ರಿಡ್ಜ್ ಹೆಸರಿನಲ್ಲಿ ಕಿಕ್ ಬ್ಯಾಕ್ ನೀಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದು, ಸರ್ಕಾರಕ್ಕೆ ಭಾರಿ ಪೆಟ್ಟು ಬಿದ್ದಿತು. ಯೋಜನೆ ರದ್ದಾಗಲು ಯಡಿಯೂರಪ್ಪ ಅವರು ಪ್ರಮುಖ ಕಾರಣ ಎಂಬ ಟ್ವೀಟ್ಸ್ ಹರಿದಾಡುತ್ತಿವೆ.

ಜನರ ಗೆಲುವು

ಉಕ್ಕಿನ ಮೇಲ್ಸೇತುವೆ ರದ್ದಾಗಿದ್ದು, ಸಂತೋಷದ ವಿಷಯ. ಇದು ಸಾರ್ವಜನಿಕರ ಹೋರಾಟದ ಫಲ ಎಂದು ಅನೇಕರು ಹೇಳುತ್ತಿದ್ದಾರೆ. ಆದರೆ, ತಮ್ಮ ತಮ್ಮ ನಾಯಕರು, ಪಕ್ಷವನ್ನು ಅನೇಕರು ಹೊಗಳುತ್ತಿದ್ದಾರೆ.

ಮಾಧ್ಯಮದವರಿಗೆ ಧನ್ಯವಾದ

ಕರ್ನಾಟಕದ ಆಮ್ ಆದ್ಮಿ ಪಕ್ಷ, ಎಲ್ಲರಿಗೂ ಧನ್ಯವಾದ ಅರ್ಪಿಸುತ್ತಿದ್ದಾರೆ. ಮಾಧ್ಯಮ ಪ್ರತಿನಿಧಿಗಳಿಗೂ ಟ್ಯಾಗ್ ಮಾಡಿ ಶುಭ ಹಾರೈಸುತ್ತಿದ್ದಾರೆ.

ಮೊದಲ ಜಯ

ಭ್ರಷ್ಟಾಚಾರ ವಿರುದ್ಧ ಬಿಜೆಪಿಗೆ ಇದು ಮೊದಲ ಜಯ ಎಂದ ಸಂಸದ ಪ್ರತಾಪ್ ಸಿಂಹ.

English summary
Siddaramaih governent today decided to scrap controversial Steel Flyover Project. Twitterati welcomed this decision but public is asking what about the Rs 65 Cr kickback.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X